More

    ದೆಹಲಿ ವಾಯುಮಾಲಿನ್ಯ ಮತ್ತೆ ಗಂಭೀರ: ನಿರ್ಮಾಣ, ವಾಹನ ಸಂಚಾರಕ್ಕೆ ನಿರ್ಬಂಧ!

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಾಳಿ ಮತ್ತೊಮ್ಮೆ ವಿಷಮಯವಾಗಿದೆ. ಶನಿವಾರ ಹಲವು ಸ್ಥಳಗಳಲ್ಲಿ ಎಕ್ಯೂಐ 400 ದಾಟಿದ್ದು, ಅನಿವಾರ್ಯವಲ್ಲದ ನಿರ್ಮಾಣ, ಕಲ್ಲುಗಣಿಗಾರಿಕೆ ಮತ್ತು ಗಣಿಗಾರಿಕೆಯನ್ನು ನಿಷೇಧಿಸಲು ಆದೇಶಿಸಲಾಗಿದೆ.

    ಇದನ್ನೂ ಓದಿ: ಹಮಾಸ್‌ನಿಂದ ಅಪಹರಣಕ್ಕೊಳಗಾದ ಅಮೆರಿಕನ್ ಹತ್ಯೆ: ‘ಹೃದಯವಿದ್ರಾವಕ’ ಎಂದ ಬೈಡೆನ್
    ದೆಹಲಿ ಪರಿಸರ ಸಚಿವ ಗೋಪಾಲ್ ರೈ ಈ ಕುರಿತು ಮಾಹಿತಿ ನೀಡಿದ್ದು, ಗ್ರಾಪ್ III ಅಡಿಯಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದರು. ಅದರಂತೆ ನಿರ್ಮಾಣ ಮತ್ತು ಕಟ್ಟಡಗಳ ನೆಲಸಮ ಚಟುವಟಿಕೆಗಳ ಮೇಲೆ ನಿಷೇಧವಿರುತ್ತದೆ. ಅಲ್ಲದೆ, ಬಿಎಸ್​ -III ಪೆಟ್ರೋಲ್ ಮತ್ತು ಬಿಎಸ್​ -IV ಡೀಸೆಲ್ ವಾಹನಗಳನ್ನು ಓಡಿಸಲು ಅನುಮತಿಸಲಾಗುವುದಿಲ್ಲ.

    ರೈಲ್ವೆ, ವಿಮಾನ ನಿಲ್ದಾಣಗಳು, ರಾಷ್ಟ್ರೀಯ ಹೆದ್ದಾರಿ, ಫ್ಲೈಓವರ್‌ಗಳಿಗೆ ಸಂಬಂಧಿಸಿದ ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಗಳಿಗೆ ನಿರ್ಮಾಣ ಚಟುವಟಿಕೆಗಳಲ್ಲಿ ವಿನಾಯಿತಿ ನೀಡಲಾಗಿದೆ. ಆದರೂ ನಿರ್ಮಾಣ ಸ್ಥಳಗಳಲ್ಲಿ ಧೂಳನ್ನು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

    ಸಿಬಿಸಿಪಿ ಅಂಕಿಅಂಶಗಳ ಪ್ರಕಾರ ಶನಿವಾರ ಬೆಳಗ್ಗೆ 10.30 ಕ್ಕೆ ಆನಂದ್ ವಿಹಾರ್ 479, ಅಶೋಕ್ ವಿಹಾರ್ 454 ಮತ್ತು ದ್ವಾರಕಾ-ಸೆಕ್ಟರ್ 8 452. ಐಜಿಐ ವಿಮಾನ ನಿಲ್ದಾಣ ಸೇರಿ ಇತರ ಪ್ರದೇಶಗಳಲ್ಲಿ 412, ಐಟಿಒದಲ್ಲಿ 476, ಜಹಾಂಗೀರ್ ಪುರಿ 475, ನರೇಲಾ 460, ಆರ್‌ಕೆ ಪುರಂ 470, ರೋಹಿಣಿ 475, ಶಾದಿಪುರ ಮತ್ತಿತರ ಪ್ರದೇಶಗಳಲ್ಲಿ 481, ವಜೀರ್‌ಪುರದಲ್ಲಿ 483 ಎಕ್ಯೂಐ ದಾಖಲಾಗಿದೆ.

    ಆರೋಗ್ಯದ ದೃಷ್ಟಿಯಿಂದ, 0 ರಿಂದ 50 ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ‘ಉತ್ತಮ’, 51 ರಿಂದ 100 ರ ನಡುವೆ ‘ತೃಪ್ತಿದಾಯಕ’ ವಾಗಿರುತ್ತದೆ.

    ಹಂತ III ಅಡಿಯಲ್ಲಿ, ದೆಹಲಿ, ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಮತ್ತು ಗೌತಮ್ ಬುಧ್ ನಗರದಲ್ಲಿ ಬಿಎಸ್-III ಪೆಟ್ರೋಲ್ ಮತ್ತು ಬಿಎಸ್​-IV ಡೀಸೆಲ್ ನಾಲ್ಕು-ಚಕ್ರ ವಾಹನಗಳ ಕಾರ್ಯಾಚರಣೆಯನ್ನು ಸಹ ನಿಷೇಧಿಸಲಾಗಿದೆ.

    ದೆಹಲಿಯ ಎಕ್ಯೂಐ ಹಠಾತ್ ಹೆಚ್ಚಳಕ್ಕೆ ಮಂಜು ಮತ್ತು ದಟ್ಟಹೊಗೆ, ಗಾಳಿಯ ವೇಗ ಕಡಿಮೆಯಾಗಿರುವುದು ಸೇರಿದಂತೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಪ್ರಮುಖ ಕಾರಣಗಳಾಗಿವೆ ಎಂದು ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಆಯೋಗ (ಸಿಎಕ್ಯೂಎಂ) ವರದಿ ಮಾಡಿದೆ.

    ವಾಯು ಗುಣಮಟ್ಟ ನಿರ್ವಹಣಾ ಆಯೋಗವು ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಿಸಲು ಕಾರ್ಯತಂತ್ರವನ್ನು ರೂಪಿಸುವ ಜವಾಬ್ದಾರಿಯುತ ಶಾಸನಬದ್ಧವಾದ ಸಂಸ್ಥೆಯಾಗಿದೆ. ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್​ಎಪಿ) ಯ III ನೇ ಹಂತದ ಅಡಿಯಲ್ಲಿ ನಿರ್ಬಂಧಗಳನ್ನು ಪುನಃ ಹೇರಿದೆ. ಅದರಂತೆ ದೆಹಲಿ ವ್ಯಾಪ್ತಿಯಲ್ಲಿ ಅನಿವಾರ್ಯವಲ್ಲದ ನಿರ್ಮಾಣ, ಕಲ್ಲುಗಣಿಗಾರಿಕೆ ಮತ್ತು ಗಣಿಗಾರಿಕೆಯನ್ನು ನಿಷೇಧಿಸಲು ಆದೇಶಿಸಿದೆ.

    ಮಾನವ ಕಳ್ಳಸಾಗಣೆ ಶಂಕೆ: 303 ಮಂದಿ ಭಾರತೀಯರಿದ್ದ ವಿಮಾನ ಫ್ರಾನ್ಸ್​ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts