More

    ಚಳಿಗಾಲದಲ್ಲಿ ಕೂಡ ಡಿಹೈಡ್ರೇಷನ್ ಆಗಬಹುದು…! ಹಾಗಾದ್ರೆ ಚಳಿಗಾಲದಲ್ಲಿ ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು?

    ಬೆಂಗಳೂರು: ಚಳಿಗಾಲ ಬರುತ್ತಿದ್ದ ಹಾಗೆ ನಮ್ಮ ದೇಹದಲ್ಲಿ ಬದಲಾವಣೆಗಳು ಆಗತೊಡಗುತ್ತವೆ. ದೈನಂದಿನ ಚಟುವಟಿಕೆಗಳು ಕೂಡ ಬದಲಾಗುತ್ತವೆ. ಬೇಸಿಗೆ ಕಾಲದಲ್ಲಿ ತಾಪಮಾನ ಹೆಚ್ಚಾಗುವುದರಿಂದ ಸತತವಾಗಿ ಹೆಚ್ಚು ನೀರು ಕುಡಿಯಬೇಕೆಂದು ಅನಿಸುತ್ತದೆ. ಆದರೆ ಚಳಿಗಾಲದಲ್ಲಿ ಶೀತ ಹೆಚ್ಚಿರುವುದರಿಂದ ಕಡಿಮೆ ಬಾಯಾರಿಕೆ ಆಗುತ್ತದೆ. ಕೆಲವೊಮ್ಮೆ ನೀರು ಕುಡಿಯುವುದೇ ಮರೆತುಹೋಗುತ್ತದೆ. ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯುವ ಅವಶ್ಯಕತೆ ಇಲ್ಲ ಎಂಬುದು ಕೆಲವರ ನಂಬಿಕೆ. ಆದರೆ ಇದು ಸರಿಯೇ? ನಮ್ಮ ದೇಹಕ್ಕೆ ಚಳಿಗಾಲದಲ್ಲಿ ಸುಮಾರು ಎಷ್ಟು ನೀರಿನ ಅವಶ್ಯಕತೆ ಇದೆ? ತಿಳಿಯೋಣ ಬನ್ನಿ.

    ವಿಜ್ಞಾನಿಗಳ ಪ್ರಕಾರ, ಒಬ್ಬ ಮನುಷ್ಯ ದಿನಕ್ಕೆ ಸುಮಾರು 8-10 ಗ್ಲಾಸ್ ನೀರು ಕುಡಿಯಬೇಕು. ಬೇಸಿಗೆ ಕಾಲದಲ್ಲಿ ಹೆಚ್ಚು ನೀರು ಕುಡಿಯುವುದು ಸುಲಭ. ಅದೇ ಚಳಿಗಾಲದಲ್ಲಿ ಕಷ್ಟ. ಬೇಸಿಗೆ ಕಾಲದಲ್ಲಿ ನೀರು ಸಾಕಷ್ಟು ಕುಡಿಯದಿದ್ದರೆ ಡಿಹೈಡ್ರೇಷನ್ (ನಿರ್ಜಲೀಕರಣ) ಆಗುತ್ತದೆ. ಚಳಿಗಾಲದಲ್ಲಿ ಕೂಡ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಡಿಹೈಡ್ರೇಷನ್ ಆಗುತ್ತದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಇದೇ ಕಾರಣಕ್ಕೆ ಚಳಿಗಾಲದಲ್ಲಿ ಕೂಡ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗದಂತೆ ನೋಡಿಕೊಳ್ಳಬೇಕು. ಚಳಿಗಾಲದಲ್ಲಿ ದಿನಕ್ಕೆ ಕಡಿಮೆ ಎಂದರೂ ಸುಮಾರು 3-4 ಫುಲ್ ಗ್ಲಾಸ್ ನೀರನ್ನು ಕುಡಿಯಬೇಕು ಎನ್ನುತ್ತಾರೆ ತಜ್ಞರು.

    ಒಂದೇ ಸಮಯಕ್ಕೆ ಹೆಚ್ಚು ನೀರು ಕುಡಿಯಬಾರದು. ದಿನ ಪೂರ್ತಿ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ನೀರು ಕುಡಿಯುತ್ತಿದ್ದರೆ ದೇಹ ಡಿಹೈಡ್ರೇಟ್​ ಆಗುವುದನ್ನು ತಪ್ಪಿಸಬಹುದು. ತಣ್ಣನೇ ನೀರು ಕುಡಿಯುವುದು ಕಷ್ಟವಾದರೆ ಬೆಚ್ಚಗಿನ ನೀರು ಕುಡಿಯಬಹುದು.

    ನೀರು ದೇಹದಲ್ಲಿ ಇರುವ ಕಲ್ಮಶಗಳನ್ನು ತೆಗೆಯುವುದರ ಜತೆಗೆ ಮಿನರಲ್ಸ್​ ಮತ್ತು ಇತರ ಅಗತ್ಯಗಳನ್ನು ಪೂರೈಸುತ್ತದೆ. ಇದರ ಜತೆಗೆ ನೀರು ಚರ್ಮಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಚಳಿಗಾಲದಲ್ಲಿ ಒಣ ತ್ವಚೆಯಿಂದ ಹಲವು ಚರ್ಮ ಸಂಬಂಧಿ ಕಾಯಿಲೆಗಳು ಕಾಣಿಸುತ್ತವೆ. ದೇಹಕ್ಕೆ ನೀರಿನ ಲಭ್ಯತೆ ಸರಿಯಾಗಿದ್ದಾಗ ಚರ್ಮಕ್ಕೆ ಕಾಂತಿ ನೀಡುವುದರ ಜತೆಗೆ ಮುಖದ ಮೇಲಿನ ಮೊಡವೆಗಳನ್ನು ಪರಿಹರಿಸುತ್ತದೆ. ಈ ಕಾರಣಗಳಿಗಾಗಿ ಚಳಿಗಾಲದಲ್ಲಿ ಕೂಡ ನೀರನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯಬೇಕು ಎನ್ನುತ್ತಾರೆ ಪರಿಣಿತರು. ಏಜೆನ್ಸೀಸ್

    ‘ಬೇಕೂ ಅಂತ ಆಕೆಯನ್ನು ಕೊಂದಿಲ್ಲ, ಆ ಕ್ಷಣ ಹಾಗೆ ಮಾಡಿಸಿತು’ ಎಂದ ಅಫ್ತಾಬ್​!

    ಶಾರೀಕ್​ ಕೈಯಲ್ಲಿದ್ದ ಬಾಂಬ್​ಗೆ ಇಡೀ ಬಸ್​ ಧ್ವಂಸ ಮಾಡುವ ಸಾಮರ್ಥ್ಯ ಇತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts