More

    ಯುಕೆ ಪ್ರಧಾನಿ ರಿಷಿ ಸುನಕ್, ರಾಜನಾಥ್ ಸಿಂಗ್ ಭೇಟಿ; ರಕ್ಷಣಾ ಸೇರಿ ಹಲವು ಮಹತ್ವದ ವಿಷಯಗಳ ಚರ್ಚೆ

    ಲಂಡನ್​: ಬ್ರಿಟನ್​ ಪ್ರವಾಸ ಕೈಗೊಂಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಲಂಡನ್ ನಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಭಾರತದ ರಕ್ಷಣಾ ಸಚಿವರೊಬ್ಬರು 22 ವರ್ಷಗಳ ನಂತರ ಬ್ರಿಟನ್​ ಭೇಟಿ ನೀಡಿದಂತಾಗಿದೆ.

    ಇದನ್ನೂ ಓದಿ:ವಿಶ್ವದ ಪ್ರಗತಿಗೆ ಭಾರತವೇ ಎಂಜಿನ್; ಜಗತ್ತಿನ ವಿಶ್ವಾಸಾರ್ಹ ಸ್ನೇಹಿತ, ಸ್ಥಿರತೆಯ ಸ್ತಂಭ

    ಎರಡೂ ದೇಶಗಳ ನಡುವೆ ಮುನ್ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದ ಸದ್ಯದಲ್ಲಿಯೇ ಯಶಸ್ವಿಯಾಗಿ ಮುಕ್ತಾಯವಾಗಲಿದೆ ಎಂದು ರಿಷಿ ಸುನಕ್ ಆಶಾವಾದ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ರಿಷಿ ಸುನಕ್​, ರಕ್ಷಣಾ ಸಚಿವ ಗ್ರಾಂಟ್​ ಶಾಪ್ಸ್​ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡೇವಿಡ್​ ಕ್ಯಾಮರೂನ್​ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದಭರ್ದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಉಭಯ ದೇಶಗಳ ಪಾಲುದಾರಿಕೆ, ಯುದ್ಧ ವಿಮಾನಗಳು ಮತ್ತು ಇತರೆ ಸೇನಾ ಸಲಕರಣೆಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

    ಭಾರತ ಮತ್ತು ಬ್ರಿಟನ್​ ದ್ವಿಪಕ್ಷಿಯ ಸಂಬಂಧ ವೃದ್ಧಿ ಉದ್ದೇಶದಿಂದ ಕೈಗೊಳ್ಳಲಾಗಿರುವ ಈ ಭೇಟಿ ಸಂದರ್ಭದಲ್ಲಿ ಕೈಗಾರಿಕಾ ಸಹಕಾರ, ಇಂಡೋ-ಫೆಸಿಫಿಕ್​, ಪಶ್ಚಿಮ ಏಪ್ಯಾ ಮತ್ತು ಉಕ್ರೇನ್​ ಸ್ಥಿತಿಗತಿ ಕುರಿತು ಚರ್ಚೆ ನಡೆಸಿದ್ದಾರೆ.

    ರಾಜನಾಥ್ ಸಿಂಗ್ ಅವರು ಇಂಗ್ಲೆಂಡ್​-ಇಂಡಿಯಾ ಡಿಫೆನ್ಸ್ ಇಂಡಸ್ಟ್ರಿ ಸಿಇಒಗಳ ರೌಂಡ್​ಟೇಬಲ್​ನ ಸಹ ಅಧ್ಯಕ್ಷತೆಯನ್ನು ತಮ್ಮ ಪ್ರತಿರೂಪವಾದ ಗ್ರಾಂಟ್​ ಶಾಪ್ಸ್​ ಅವರೊಂದಿಗೆ ಮಾತುಕತೆ ನಡೆಸಿದರು. ಸಹ ಉತ್ಪಾದನೆಯ ಮೇಲೆ ಕೇಂದ್ರೀಕರಿಸಿದ ಬ್ರಿಟನ್​ನೊಂದಿಗೆ ಭಾರತವು ಸಮೃದ್ಧ ರಕ್ಷಣಾ ಪಾಲುದಾರಿಕೆಯನ್ನು ಕಲ್ಪಿಸುತ್ತದೆ ಎಂದು ಹೇಳಿದರು.

    ಈ ದುಂಡುಮೇಜಿನ ಸಭೆಯಲ್ಲಿ ಯುಕೆ ರಕ್ಷಣಾ ಉದ್ಯಮದ ಹಲವಾರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಯುಕೆ ರಕ್ಷಣಾ ಸಚಿವಾಲಯ, ಯುಕೆ-ಇಂಡಿಯಾ ಬಿಸಿನಸ್​ ಕೌನ್ಸಿಲ್​ ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಿದ್ದರು. ಸಚಿವರ ಜೊತೆ ರಕ್ಷಣಾ ಇಲಾಖೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಹಿರಿಯ ಅಧಿಕಾರಿಗಳು ಇದ್ದಾರೆ.

    Paush Amavasya 2024: ಇಂದು ವರ್ಷದ ಮೊದಲ ಅಮಾವಾಸ್ಯೆ, ಮಂಗಳಕರ ಸಮಯ ಮತ್ತು ಪೂಜಾ ವಿಧಿ ವಿಧಾನ ತಿಳಿಯಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts