More

    ಯಾವುದೇ ಸವಾಲು ಸ್ವೀಕರಿಸಲು ಸೇನೆ ಸಿದ್ಧ: ರಾಜನಾಥ್ ಸಿಂಗ್

    ನವದೆಹಲಿ: ಹಿಮಾಲಯದ ಗಡಿಗಳಲ್ಲಿ ನಡೆಯುತ್ತಿರುವ ಅಪ್ರಚೋದಿತ ಆಕ್ರಮಣಗಳು ಜಗತ್ತು ಬದಲಾಗುತ್ತಿರುವ ಸೂಚನೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ಲೇಷಿಸಿದರು. ಇಡೀ ಇಂಡೊ-ಪೆಸಿಫಿಕ್ ವಲಯದಲ್ಲಿ ಹೇಗೆ ಅಧಿಕಾರದ ಪಾರಮ್ಯ ಸಾಧಿಸಲು ದರ್ಪವನ್ನು ಮೆರೆಯಲಾಗುತ್ತಿದೆ ಎನ್ನುವುದನ್ನೂ ಅವು ತೋರಿಸುತ್ತವೆ ಎಂದು ಚೀನಾ ವಿರುದ್ಧ ಚಾಟಿ ಬೀಸಿದರು. ಭಾರತೀಯ ವಾಣಿಜ್ಯೋದ್ಯಮದ ಮಹಾ ಒಕ್ಕೂಟದ (ಎಫ್​ಐಸಿಸಿಐ) 95ನೇ ವಾರ್ಷಿಕ ಮಹಾ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ಪೂರ್ವ ಲಡಾಖ್​ನಲ್ಲಿ ವಾಸ್ತವ ಗಡಿ ರೇಖೆಯಲ್ಲಿ (ಎಲ್​ಎಸಿ) ಆಕ್ರಮಣ ನಡೆಸಿದ ಚೀನಾದ ಸೈನಿಕರನ್ನು ಭಾರತದ ಯೋಧರು ಅತ್ಯಂತ ದಿಟ್ಟತನದಿಂದ ಎದುರಿಸಿ ಹಿಮ್ಮೆಟ್ಟಿಸಿದ್ದಾರೆ. ಯಾವುದೇ ಸವಾಲು ಸ್ವೀಕರಿಸಲು ನಮ್ಮ ಸೇನೆ ಸಿದ್ಧವಿದೆ ಎಂದಿದ್ದಾರೆ.

    ಜೂನ್ 15ರಂದು ಗಾಲ್ವನ್ ಕಣಿವೆಯಲ್ಲಿ ನಡೆದ ಕಾಳಗವನ್ನು ಉಲ್ಲೇಖಿಸಿದ ಸಿಂಗ್, ಈ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ನಮ್ಮ ಸಶಸ್ತ್ರ ಪಡೆಗಳು ಮಾಡಿದ ಸಾಧನೆ ಬಗ್ಗೆ ಮುಂದಿನ ತಲೆಮಾರಿನವರು ಹೆಮ್ಮೆ ಪಡಲಿದ್ದಾರೆ. ಲಡಾಖ್​ನ ಎಲ್​ಎಸಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಶಸ್ತ್ರ ಪಡೆಗಳು ಜಮಾವಣೆಗೊಂಡಿವೆ. ಇಂಥ ಪರೀಕ್ಷಾ ಸಮಯದಲ್ಲಿ ನಮ್ಮ ಯೋಧರು ಅಭೂತಪೂರ್ವ ಧೈರ್ಯ ತೋರಿದ್ದಾರೆ ಎಂದರು.

    ಎದುರಾಗುವ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಭಾರತ ಸನ್ನದ್ಧವಾಗಿದೆ. ಪ್ರತಿಯೊಂದು ದೇಶವೂ ವ್ಯೂಹಾತ್ಮಕ ಹಿತದ ಆಧಾರದಲ್ಲಿ ಭದ್ರತೆಯನ್ನು ಖಾತರಿಪಡಿಸಿಕೊಳ್ಳುತ್ತವೆ.

    | ಜನರಲ್ ಬಿಪಿನ್ ರಾವತ್ ಮೂರೂ ಪಡೆಗಳ ಪ್ರಧಾನ ದಂಡ ನಾಯಕ (ಸಿಡಿಎಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts