More

    ದೋಷಪೂರಿತ ಧ್ವಜ ವಿತರಣೆ

    ಮುಳಗುಂದ: ಹರ್ ಘರ್ ತಿರಂಗಾ ಆಂದೋಲನದ ಅಂಗವಾಗಿ ಸ್ಥಳೀಯ ಸಂಸ್ಥೆಗಳು ವಿತರಿಸುತ್ತಿರುವ ಧ್ವಜಗಳು ದೋಷಪೂರಿತವಾಗಿದ್ದು ಸರ್ಕಾರದ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ವಿತರಣೆ ಮಾಡಲಾದ ರಾಷ್ಟ್ರಧ್ವಜದಲ್ಲಿ ಪ್ರಮುಖವಾಗಿ ಅಳತೆಯೇ ಸರಿಯಾಗಿಲ್ಲ. ಧ್ವಜದ ಒಂದು ಬದಿ ಕಟ್ ಮಾಡುವಾಗ ಹೆಚ್ಚು ಕಡಿಮೆ ಮಾಡಲಾಗಿದೆ. ಹೀಗಾಗಿ ಒಂದು ಧ್ವಜದಲ್ಲಿ ಕೇಸರಿ ಭಾಗ ಹೆಚ್ಚಾದರೆ ಮತ್ತೊಂದೆಡೆ ಹಸಿರುವ ಭಾಗ ಹೆಚ್ಚಾಗಿದೆ. ಮಧ್ಯ ಭಾಗದ ಅಶೋಕ ಚಕ್ರ ಸಂಪೂರ್ಣ ವೃತ್ತಾಕಾರವಾಗಿರದೆ ಅಂಡಾಕಾರದಲ್ಲಿದೆ. ಕೆಲವು ಧ್ವಜಗಳಲ್ಲಿ ಪ್ರಿಂಟ್ ಹಾಕುವಾಗ ಎಲ್ಲೆಂದರಲ್ಲಿ ಬೇರೆ ಬಣ್ಣಗಳು ಬಿದ್ದು ಶ್ವೇತವರ್ಣವನ್ನೇ ಬದಲಾಗುವಂತಾಗಿದೆ. ಗೌರವದ ಪ್ರತೀಕವಾಗಿರುವ ಧ್ವಜಗಳಲ್ಲಿ ಇಂತಹ ದೋಷಗಳನ್ನು ಕಂಡುಬಂದಿದ್ದು ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

    ಮನೆ ಮನೆಯಲ್ಲಿ ಧ್ವಜ ಹಾರಿಸುವ ಉದ್ದೇಶವಿದ್ದರೆ ಸರ್ಕಾರ ಪೂರ್ವಭಾವಿಯಾಗಿ ತಯಾರಿ ನಡೆಸಬೇಕಿತ್ತು. ರಾಷ್ಟ್ರಧ್ವಜವನ್ನು ಉತ್ತಮ ರೀತಿಯಲ್ಲಿ ಗರಗದಲ್ಲಿಯೇ ತಯಾರಿಸಿ ವಿತರಣೆ ಮಾಡಬೇಕಿತ್ತು. ಆದರೆ, ದಿಢೀರ್​ನೆ ಯಾವದೋ ನೇಕಾರರಿಗೆ ಕೊಟ್ಟು ನೇಯ್ಗೆ ಮಾಡಿಸಿರುವುದು ತಪ್ಪು.

    | ಬಿ.ವಿ. ಸುಂಕಾಪುರ, ಗದಗ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

    ಸರಿಯಾಗಿರುವ ಧ್ವಜ ಮಾತ್ರ ಮಾರುವಂತೆ ನಿರ್ದೇಶನ ಮಾಡಲಾಗಿದೆ. ಸಾರ್ವಜನಿಕರು ದೋಷಪೂರಿತ ಧ್ವಜಗಳನ್ನು ಹೊರತುಪಡಿಸಿ ಉತ್ತಮವಾದ ಧ್ವಜಗಳನ್ನು ಹಾರಿಸಬೇಕು. ಗದಗ ಜಿಲ್ಲೆಗೆ 84000 ಧ್ವಜಗಳನ್ನು ವಿತರಿಸಲಾಗಿದೆ. ಧ್ವಜ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಂದಿದ್ದು, ಪಿಡಿ ಡಿಒಡಿಸಿ ನೋಡಲ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲ ಪಪಂ, ಗ್ರಾಪಂ, ನಗರಸಭೆ ಹೀಗೆ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಧ್ವಜಗಳನ್ನು ವಿತರಿಸಲಾಗಿದೆ.

    | ವೀರಯ್ಯಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಧಿಕಾರಿ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts