More

    ಕಬಿನಿ ಕಾಲುವೆಯಲ್ಲಿ ಕಾಣಿಸಿದ ಜಿಂಕೆ ಕೊಂಬುಗಳು!

    ಯಳಂದೂರು: ಪಟ್ಟಣದಲ್ಲಿ ಹರಿಯುವ ಕಬಿನಿ ಕಾಲುವೆಯಲ್ಲಿ ಬುಧವಾರ ಜಿಂಕೆ ಕೊಂಬುಗಳು ಪತ್ತೆಯಾಗಿವೆ. ಕಾಲುವೆಯಲ್ಲಿ ನೀರು ಕಡಿಮೆಯಾಗಿರುವ ಕಾರಣ ಇಲ್ಲಿ ಮೀನು ಹಿಡಿಯಲು ತೆರಳಿದ್ದ ಸ್ಥಳೀಯರು ಜಿಂಕೆ ಕೊಂಬು ತೇಲುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಆರ್‌ಎಫ್‌ಒ ವರುಣ್ ಇದನ್ನು ಪರಿಶೀಲನೆ ನಡೆಸಿದ್ದಾರೆ. ಯಳಂದೂರು ತಾಲೂಕಿನ ಯರಿಯೂರು, ಅಂಬಳೆ, ಯಳಂದೂರು, ಕಂದಹಳ್ಳಿ, ಮದ್ದೂರು, ಅಗರ ಗ್ರಾಮಗಳ ಕೆರೆಯೂ ಸೇರಿದಂತೆ ಹಲವು ಕೆರೆಗಳಲ್ಲಿ ಜಿಂಕೆಗಳು ವಾಸ ಮಾಡಲು ಯೋಗ್ಯ ವಾತಾವರಣ ಇದೆ. ಹಾಗಾಗಿ, ಇಲ್ಲಿ ಜಿಂಕೆಗಳು ಕಾಣಿಸಿಕೊಂಡಿವೆ. ಜಿಂಕೆಗೆ ವರ್ಷಕ್ಕೊಮ್ಮೆ ಕೊಂಬುಗಳು ಬಿದ್ದು, ಹೊಸ ಕೊಂಬುಗಳು ಬೆಳೆಯುತ್ತವೆ. ಆದರೆ ಒಂದೇ ಕಡೆ ಮೂರು ಜಿಂಕೆ ಕೊಂಬುಗಳು ಕಾಣಿಸಿಕೊಂಡಿರುವುದು ಆಶ್ಚರ್ಯ ತಂದಿದೆ. ಇದನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ವಹಿಸಲಾಗುವುದು ಎಂದು ವರುಣ್ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts