More

    ತಂದೆಯ ಹುಟ್ಟುಹಬ್ಬ: ಕುಟುಂಬದ ಜತೆ ತಿರುಪತಿಗೆ ಭೇಟಿ ನೀಡಿದ ದೀಪಿಕಾ ಪಡುಕೋಣೆ

    ತಿರುಪತಿ: ತಮ್ಮ ತಂದೆಯ ಹುಟ್ಟುಹಬ್ಬದ ಅಂಗವಾಗಿ ಬಾಲಿವುಡ್​​ ನಟಿ ದೀಪಿಕಾ ಪಡುಕೋಣೆ ಕುಟುಂಬದೊಂದಿಗೆ ತಿರುಪತಿಗೆ ಭೇಟಿ ನೀಡಿದ್ದಾರೆ.

    ಪ್ರಕಾಶ್​​ ಪಡುಕೋಣೆ ಅವರ 67ನೇ ಹುಟ್ಟುಹಬ್ಬದ ಅಂಗವಾಗಿ ತಂದೆಯ ಜತೆ ಶುಕ್ರವಾರ ದೀಪಿಕಾ ಪಡುಕೋಣೆ ತಿಮ್ಮಪ್ಪನ ದರ್ಶನ ಮಾಡಿದ್ದು, ತಂದೆ ಜತೆಗಿನ  ಫೋಟೋವನ್ನು ದೀಪಿಕಾ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ತಂದೆಯ ಹುಟ್ಟುಹಬ್ಬ: ಕುಟುಂಬದ ಜತೆ ತಿರುಪತಿಗೆ ಭೇಟಿ ನೀಡಿದ ದೀಪಿಕಾ ಪಡುಕೋಣೆ

    ಪ್ರತಿ ವರ್ಷ ದೀಪಿಕಾ ಪಡುಕೋಣೆ ತಿರುಪತಿ ಭೇಟಿ ಮಾಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಎಷ್ಟೇ ಕೆಲಸಗಳಿದ್ದರೂ ವರ್ಷಕ್ಕೊಮ್ಮೆಯಾದರೂ ತಿಮ್ಮಪ್ಪನ ದರ್ಶನ ಪಡೆದೇ ತೀರುತ್ತಾರೆ. ಇತ್ತೀಚೆಗೆ ತಮ್ಮ ವಿವಾಹ ವರ್ಷಾಚರಣೆ ಸಂದರ್ಭದಲ್ಲಿ ಪತಿ ರಣವೀರ್​ ಸಿಂಗ್​ ಜತೆಗೆ ದೀಪಿಕಾ ತಿರುಪತಿಗೆ ಭೇಟಿ ನೀಡಿದ್ದರು. ಇದೇ ವರ್ಷದಲ್ಲಿ ಎರಡನೇ ಭೇಟಿ ಇದಾಗಿದೆ.

    ತಮ್ಮ ತಂದೆ ಪ್ರಕಾಶ್​ ಪಡುಕೋಣೆ, ತಾಯಿ ಉಜ್ಜಲ ಪಡುಕೋಣೆ ಹಾಗೂ ಸಹೋದರಿ ಆನಿಶಾ ಕೂಡ ತಿರುಪತಿಗೆ ಭೇಟಿ ನೀಡಿದ್ದಾರೆ.

    ಸದಾ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳುವ ದೀಪಿಕಾ  ಇಂದು ತಿರುಪತಿ ದರ್ಶನದ ವೇಳೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಸಾಲು ಸಾಲು ಚಿತ್ರಗಳಲ್ಲಿ ದೀಪಿಕಾ ಬ್ಯುಸಿಯಾಗಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts