More

    ಇನ್​ಸ್ಟಾದಲ್ಲಿ ದೀಪಿಕಾ ದಾಖಲೆ!

    ಬಾಲಿವುಡ್​ನಲ್ಲಿ ನಟಿ ದೀಪಿಕಾ ಪಡುಕೋಣೆ ಮುಟ್ಟಿದ್ದೆಲ್ಲ ಚಿನ್ನ ಎಂಬಂತಾಗಿದೆ. ನಟನೆ, ನಿರ್ಮಾಣ ಒಂದೆಡೆಯಾದರೆ, ಜಾಹೀರಾತು ಕ್ಷೇತ್ರದಲ್ಲೂ ದೀಪಿಕಾ ಮುಂಚೂಣಿಯಲ್ಲಿದ್ದಾರೆ. ಹೀಗಿರುವ ದೀಪಿಕಾ ಇದೀಗ ಇನ್ನೊಂದು ಮೈಲಿಗಲ್ಲು ತಲುಪಿದ್ದಾರೆ.

    ಪ್ರಭಾವಿ ಸೋಷಿಯಲ್ ಮೀಡಿಯಾ ಆದ ಇನ್​ಸ್ಟಾಗ್ರಾಂನಲ್ಲಿ ಬರೋಬ್ಬರಿ 50 ಮಿಲಿಯನ್ (5 ಕೋಟಿ) ಫಾಲೋವರ್ಸ್ ಸಂಪಾದಿಸಿಕೊಂಡು ಮತ್ತೊಂದು ದಾಖಲೆ ಬರೆದಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೂರನೇ ಸೆಲೆಬ್ರಿಟಿಯೆಂಬ ಪಟ್ಟ ಗಿಟ್ಟಿಸಿಕೊಂಡಿದ್ದಾರೆ ದೀಪಿಕಾ. ಹಾಗಾದರೆ, ಇನ್ನುಳಿದ ಇಬ್ಬರು ಯಾರು? 50 ಮಿಲಿಯನ್​ಗೂ ಅಧಿಕ ಫಾಲೋವರ್ಸ್ ಹೊಂದಿದವರ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಇನ್​ಸ್ಟಾ ಖಾತೆಯನ್ನು 54 ಮಿಲಿಯನ್ ಜನರು ಹಿಂಬಾಲಿಸುತ್ತಿದ್ದಾರೆ.

    ಕ್ರಿಕೆಟಿಗ ವಿರಾಟ್ ಕೊಹ್ಲಿ 67 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದು, ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಶ್ರದ್ಧಾ ಕಪೂರ್ 49.8 ಮಿಲಿಯನ್, ಆಲಿಯಾ ಭಟ್ 47.7, ಸಲ್ಮಾನ್ ಖಾನ್ 33.7, ಶಾರುಖ್ ಖಾನ್ 22.1 ಫಾಲೋವರ್ಸ್ ಹೊಂದಿದ್ದಾರೆ. -(ಏಜೆನ್ಸೀಸ್)

    ‘ನೀನ್ಯಾಕೆ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲ!’; ಬಿಗ್​ಬಾಸ್​ನ ಬೋಲ್ಡ್ ಸ್ಪರ್ಧಿಗೆ ನೆಟ್ಟಿಗರ ಪ್ರಶ್ನೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts