More

    VIDEO| ದೀಪಿಕಾ ಪಡುಕೋಣೆಯ ದಶಕದ ಹಿಂದಿನ ಜಾಹೀರಾತು ವಿಡಿಯೋ ವೈರಲ್!

    ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ದೀಪಿಕಾ ಪಡುಕೋಣೆ ಸದ್ಯ ಟಾಪ್​ ಸ್ಥಾನದಲ್ಲಿರುವ ನಟಿ. ಸಾಕಷ್ಟು ಶ್ರಮವಹಿಸಿ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆಯ ಶಿಖರ ಏರಿದ್ದಾರೆ. ಅವರ ಸಿನಿಮಾ ಯಶಸ್ಸು ಒಂದೆಡೆಯಾದರೆ, ಜಾಹೀರಾತು ಕ್ಷೇತ್ರದಲ್ಲಿಯೂ ದೀಪಿಕಾ ಮುಟ್ಟಿದ್ದೆಲ್ಲ ಚಿನ್ನವಾಗಿ ಪರಿಣಮಿಸುತ್ತಿದೆ. ಸಿನಿಮಾ ಹಿಟ್​ ಆದಂತೆ ಜಾಹೀರಾತುಗಳೂ ಬ್ಲಾಕ್​ಬಸ್ಟರ್ ಆಗುತ್ತಿವೆ. ಇದು ಸದ್ಯದ ಸ್ಥಿತಿಯಾದರೆ, 10 ವರ್ಷದ ಹಿಂದೆ ದೀಪಿಕಾ ಕಾಣಿಸಿಕೊಂಡ ಜಾಹೀರಾತುಗಳು ಹೇಗಿದ್ದವು ಎಂಬುದಕ್ಕೆ ಇದೀಗ ಜಾಲತಾಣದಲ್ಲಿ ಹರಿದಾಡುತ್ತಿರುವ ಒಂದಷ್ಟು ವಿಡಿಯೋಗಳು ವೈರಲ್​ ಆಗುತ್ತಿವೆ.

    ಇದನ್ನೂ ಓದಿ: ಸಿನಿಮಾ ಶೂಟಿಂಗ್ ಪ್ರಾರಂಭಿಸಲು ಮುಖ್ಯಮಂತ್ರಿಗಳಿಗೆ ಮನವಿ …

    ಹತ್ತು ವರ್ಷಗಳ ಹಿಂದೆ ಮಲಯಾಳಂ ಭಾಷೆಯಲ್ಲಿ ಮೂಡಿಬಂದಿದ್ದ ಸೀರೆ ಜಾಹೀರಾತು ಇದೀಗ ಮತ್ತೆ ಸುದ್ದಿಯಲ್ಲಿದೆ. ಜಾಹೀರಾತಿನಲ್ಲಿ ಮಾಡರ್ನ್​ ಕಾಲಘಟ್ಟದಲ್ಲೂ, ಸಂಪ್ರದಾಯಗಳ ಬಗ್ಗೆ ವಿಶೇಷ ಕಾಳಜಿ ಇರುವ ಹುಡುಗಿಯಾಗಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಹೆಂಡತಿಯಾಗುವವಳು ಹೇಗಿದ್ದರೆ ಚೆಂದ ಎಂದು ಕಲ್ಪನೆಯಲ್ಲೇ ವಿವಿಧ ಬಟ್ಟೆಯಲ್ಲಿ ನೋಡುವ ಆ ಯುವಕ, ಅವಳ ಮಾಡರ್ನ್ ಅವತಾರ ಕಂಡು ಮದುವೆ ಬೇಡ ಎಂಬ ನಿಶ್ಚಯಕ್ಕೆ ಬರುತ್ತಾನೆ. ಬಳಿಕ ಅಮ್ಮನ ಮಾತು ಕೇಳಿ ಸೀರೆಯಲ್ಲಿ ಆಕೆಯನ್ನು ನೋಡಬಯಸುತ್ತಾನೆ. ಅದರಂತೆ ಸಾಂಪ್ರದಾಯಿಕ ಉಡುಗೆಯಲ್ಲಿ ಎದುರಾದ ಅವಳನ್ನೇ ವರಿಸುತ್ತಾನೆ ಇದು ಜಾಹೀರಾತಿನಲ್ಲಿನ ಅಂಶ.

    ಇದನ್ನೂ ಓದಿ: ಹಾಗೆಲ್ಲಾ ಮಾಡ್ಬೇಡಿ … ಇನ್ನೊಮ್ಮೆ ಯೋಚನೆ ಮಾಡಿ …

    ಸದ್ಯ ಲಾಕ್​ಡೌನ್​ನಲ್ಲಿ ಹಳೇಯ ಜಾಹೀರಾತು ವಿಡಿಯೋಗಳು ವೈರಲ್​ ಆಗುತ್ತಿದ್ದು, ಅದಕ್ಕೆ ಬಗೆಬಗೆಯ ಕಮೆಂಟ್​ಗಳೂ ಸಂದಾಯವಾಗುತ್ತಿವೆ. ‘ಇನ್ನೊಂದು ಏಪಿಸೋಡ್​ಗೆ ಸ್ವಾಗತ; ಕರೊನಾ ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸಿದೆ ಎಂದು ಕೆಲವರು ಹೇಳಿದರೆ, ‘ಹಳೇ ಧಾರಾವಾಹಿಗಳಂತೆ ಹಳೇ ಜಾಹೀರಾತುಗಳನ್ನೂ ನೋಡುವಂತಾಗಿದೆ’, ‘ಈಗಿನಷ್ಟೇ ಸುಂದರವಾಗಿದ್ದಾಳೆ ದೀಪಿಕಾ‘ ಎಂದೂ ಕೆಲವರು ಜಾಹೀರಾತು ಮೆಚ್ಚಿಕೊಂಡಿದ್ದಾರೆ. (ಏಜೆನ್ಸೀಸ್​)

    ಆರ್ಥಿಕ ನಷ್ಟ; ಬುಕ್​ ಮೈ ಶೋ ಕಂಪನಿಯ 270 ಸಿಬ್ಬಂದಿ ಮನೆಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts