More

    ‘ಗಾಂಜಾ ಬೇಡ, ಮಾಲ್​ ಇದ್ರೆ ಬೇಕಾಗಿತ್ತು..’; ಬೆಚ್ಚಿ ಬೀಳಿಸುತ್ತೆ ದೀಪಿಕಾ ಪಡುಕೋಣೆ ವಾಟ್ಸಾಪ್​ ಚಾಟ್!​

    ಬಾಲಿವುಡ್​ನಲ್ಲಿ ಸದ್ಯ ಸಂಚಲನ ಸೃಷ್ಟಿಸಿರುವ ಡ್ರಗ್​ ಮಾಫಿಯಾ ಘಟಾನುಘಟಿಗಳ ಬುಡಕ್ಕೆ ಬಂದಿದೆ. ಸುಶಾಂತ್​ ಸಾವಿನ ತನಿಖೆಯ ಜತೆಗೆ ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿದ್ದು, ಕುತೂಹಲ ಸೃಷ್ಟಿಸಿದೆ. ಇದೀಗ ಬಾಲಿವುಡ್ಮ ಟಾಪ್​ ನಟಿ ದೀಪಿಕಾ ಪಡುಕೋಣೆ ಸಹ ಡ್ರಗ್​ ಮಾಫಿಯಾದಲ್ಲಿ ಸಿಲುಕಿದ್ದಾರೆ. ಅದಕ್ಕೆ ಪುರಾವೆ ಎಂಬಂತೆ ವಾಟ್ಸಾಪ್​ ಚಾಟ್​ನಲ್ಲಿ ಅವರ ಬೇಕು ಬೇಡಿಕೆಗಳೆಲ್ಲವೂ ಬಯಲಾಗಿದೆ.

    ಇದನ್ನೂ ಓದಿ: ಮತ್ತೊಂದು ಎಡವಟ್ಟು ಮಾಡಿಕೊಂಡ ಲೂಸ್​ ಮಾದ!

    ಹೌದು, ತನಿಖಾ ತಂಡದ ದೃಷ್ಟಿ ಇದೀಗ ದೀಪಿಕಾ ಕಡೆ ನೆಟ್ಟಿದೆ. ಎನ್​ಸಿಬಿ ತಂಡಕ್ಕೆ ದೀಪಿಕಾ ಪಡುಕೋಣೆ ವಾಟ್ಸಾಪ್​ ಚಾಟ್​ನ ಮಾಹಿತಿ ಲಭ್ಯವಾಗಿದ್ದು, ಡ್ರಗ್ಸ್​ಗೆ ಹೇಗೆಲ್ಲ ಬೇಡಿಕೆ ಇಟ್ಟಿದ್ದಾರೆ ಎಂಬುದು ತಿಳಿದುಬಂದಿದೆ. ಕ್ವಾನ್​ ಟ್ಯಾಲೆಂಟ್​ ಮ್ಯಾನೇಜ್​ಮೆಂಟ್​ ಏಜೆನ್ಸಿಯ ಉದ್ಯೋಗಿ ಕರೀಷ್ಮಾ ಜತೆ ನಡೆಸಿದ ವಾಟ್ಸಾಪ್​ ಚಾಟ್​ ಇದೀಗ ಬಹಿರಂಗವಾಗಿದ್ದು, ದೀಪಿಕಾ ಹೇಗೆಲ್ಲ ಮತ್ತು ಯಾರಿಂದ ಡ್ರಗ್​ ಪಡೆದುಕೊಳ್ಳುತ್ತಿದ್ದರು ಎಂಬುದು ಗೊತ್ತಾಗಿದೆ.

    ‘ಗಾಂಜಾ ಬೇಡ, ಮಾಲ್​ ಇದ್ರೆ ಬೇಕಾಗಿತ್ತು..’; ಬೆಚ್ಚಿ ಬೀಳಿಸುತ್ತೆ ದೀಪಿಕಾ ಪಡುಕೋಣೆ ವಾಟ್ಸಾಪ್​ ಚಾಟ್!​

    ‘ನಿನ್ನ ಬಳಿ ಮಾಲ್​ ಇದೆಯಾ? ನನಗೆ ಗಾಂಜಾ ಬೇಡ.. ಆದಷ್ಟು ಬೇಗ ತಲುಪಿಸು.. ಎಂದು ವಾಟ್ಸಾಪ್​ ಮೂಲಕ ಕರೀಷ್ಮಾಗೆ ದೀಪಿಕಾ ಕೇಳಿಕೊಂಡಿದ್ದಾರೆ. ಇನ್ನು ಈಗಾಗಲೇ ಈ ಸಂಬಂಧ ಕರಿಷ್ಮಾಗೆ ಎನ್​ಸಿಬಿ ಸಮನ್​​ ಜಾರಿ ಮಾಡಿದ್ದು, ಇನ್ನೇನು ಶೀಘ್ರದಲ್ಲಿ ದೀಪಿಕಾಗೂ ಎನ್​ಸಿಬಿ ಸಮನ್​ ನೀಡುವ ಸಾಧ್ಯತೆ ಇದೆ. ದೀಪಿಕಾ ಮಾಡಿದ ವಾಟ್ಸಾಪ್​ ಚಾಟ್​ನ ವಿವರ ಇಲ್ಲಿದೆ. (ಏಜೆನ್ಸೀಸ್​)

    ಡ್ರಗ್ಸ್​ ಕೇಸ್​: ‘ಬ್ರಹ್ಮಗಂಟು’ ಖ್ಯಾತಿಯ ಗೀತಾ, ‘ಗಟ್ಟಿಮೇಳ’ದ ವಿಕ್ರಾಂತ್​ಗೆ ಐಎಸ್​ಡಿ ಡ್ರಿಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts