More

    ವೃದ್ಧಾಶ್ರಮದಲ್ಲಿ ಎಸ್ಪಿ ದೀಪಾವಳಿ ಆಚರಣೆ

    ಮಂಡ್ಯ: ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಕಥೆ, ಬದುಕಿನ ಅನುಭವ ಹಂಚಿ ಅವರ ಭವಿಷ್ಯವನ್ನು ಬೆಳಕಾಗಿಸುವ ಹಿರಿಯರನ್ನು ನಿರ್ಲಕ್ಷಿೃಸುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಬೇಸರ ವ್ಯಕ್ತಪಡಿಸಿದರು.
    ನಗರದ ಹಾಲಹಳ್ಳಿಯ ಜ್ಞಾನಸಿಂಧು ವೃದ್ಧಾಶ್ರಮದಲ್ಲಿ ವೃದ್ಧಾಶ್ರಮ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರೊಂದಿಗೆ ದೀಪಾವಳಿ ಸಂಭ್ರಮಾಚರಣೆಯಲ್ಲಿ ಮಾತನಾಡಿದರು. ಇಂದು ಯಾವುದೇ ಮನೆಗೆ ಹೋದರೂ ಗಂಡ-ಹೆಂಡತಿ ಮತ್ತು ಮಕ್ಕಳು ಇದೇ ಕುಟುಂಬ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಳೆ ನಾವೂ ವೃದ್ಧರಾಗುತ್ತೇವೆ ಎಂಬ ಆಲೋಚನಾ ಕ್ರಮ ಮರೆತಿದ್ದೇವೆ. ಅದರ ಪ್ರತಿಫಲ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿವೆ. 20 ವರ್ಷದಿಂದ ಜ್ಞಾನಸಿಂಧು ವೃದ್ಧಾಶ್ರಮ ವೃದ್ಧರಿಗೆ ಸೇವೆ ಮಾಡುತ್ತಿರುವುದು ಅವಿಸ್ಮರಣೀಯ ಎಂದು ಹೇಳಿದರು.
    ಪೊಲೀಸ್, ಆರೋಗ್ಯ, ಕಂದಾಯ ಸೇರಿದಂತೆ ಎಲ್ಲ ಇಲಾಖೆಗಳು ಕೋವಿಡ್-19 ವಿರುದ್ಧ ಅವಿರಥವಾಗಿ ಶ್ರಮ ಪಡುತ್ತಿದ್ದ ಕಾರಣ, ನಮ್ಮನ್ನು ಕರೆಸಿ ದೀಪಾವಳಿ ಸಂಭ್ರಮದಿಂದ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ವೃದ್ಧರ ಮನಸ್ಸಿನ ಕಗ್ಗತ್ತಲನ್ನು ಹೋಗಲಾಡಿಸಿ, ದೀಪವನ್ನು ಹಚ್ಚಿ ಅವರ ಮನಸ್ಸಿನಲ್ಲಿ ಸ್ತೈರ್ಯ ತುಂಬುವಂತಹ ಕೆಲಸ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
    ಪರಸ್ಪರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸದಸ್ಯ ದೇವರಾಜ್ ಕೊಪ್ಪ, ಅಪರ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ, ವೃದ್ಧಾಶ್ರಮದ ಕಾರ್ಯದರ್ಶಿ ಡಿ.ವಿಜಯಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷೆ ಭಾಗ್ಯಮ್ಮ ಇತರರಿದ್ದರು. ಹಬ್ಬದ ಅಂಗವಾಗಿ ವೃದ್ಧರಿಗೆ ವಸ್ತ್ರ, ಸಿಹಿ ವಿತರಿಸಿ ಆಚರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts