More

    ಸಂಭ್ರಮ ಹೆಚ್ಚಿಸಿದ ಬೆಳಕಿನ ಹಬ್ಬ

    ಕೋಲಾರ: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜನತೆ ಬೆಳಕಿನ ಹಬ್ಬ ದೀಪಾವಳಿಯನ್ನು ಶನಿವಾರ ಸಂಭ್ರಮ, ಸಡಗರದಿಂದ ಆಚರಿಸಿದರೆ ಇನ್ನೂ ಕೆಲವರು ಭಾನುವಾರದ ಆಚರಣೆಗೆ ಸಿದ್ಧರಾಗಿದ್ದಾರೆ.

    ನರಕ ಚತುದರ್ಶಿಯ ಈ ದಿನದಂದೇ ಅಮಾವಾಸ್ಯೆಯೂ ಬಂದಿರುವುದರಿಂದ ಹಬ್ಬದಾಚರಣೆ ನಡೆದ ಮನೆಗಳಲ್ಲಿ ಸಂಭ್ರಮ ಇಮ್ಮಡಿಗೊಂಡಿತ್ತು.

    ಮುನ್ನಾ ದಿನವೇ ಮನೆ ಸ್ವಚ್ಛಗೊಳಿಸಿದ್ದ ಮಹಿಳೆಯರು, ಬಣ್ಣಬಣ್ಣದ ರಂಗೋಲಿ ಬಿಡಿಸಿದರು. ಮನೆಗಳಲ್ಲಿ ಕಜ್ಜಾಯಗಳನ್ನು ತಯಾರಿಸಿ ಆಯಾ ಮನೆತನದ ಸಂಪ್ರದಾಯದ ಪ್ರಕಾರ ಬಿದಿರಿನ ಮೊರ, ಹೊಸ ಪಾತ್ರೆಯಲ್ಲಿ ಇಂತಿಷ್ಟೇ ಸಂಖ್ಯೆಯ ಕಜ್ಜಾಯಗಳನ್ನಿಟ್ಟುಕೊಂಡು ಬಣ್ಣ ಬಣ್ಣದ ನೋಮು ದಾರಗಳ ಸಮೇತ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನೋಮುದಾರ ಕಟ್ಟಿಕೊಂಡು ಹಬ್ಬದ ಸಂಭ್ರಮದಲ್ಲಿ ತೊಡಗಿದರು.

    ಕೇದಾರೇಶ್ವರ ಪೂಜೆ: ದೇವಸ್ಥಾನಗಳಲ್ಲಿ ಗೌರಿಯ ಕಳಸ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ ಕೇದಾರೇಶ್ವರ ವ್ರತ ಆಚರಿಸಲಾಯಿತು. ದೇವಾಲಯದಲ್ಲಿ ಅರ್ಚಕರು ಪೂಜೆ ಸಲ್ಲಿಸಿ ಕೇದಾರೇಶ್ವರ ವ್ರತದ ಮಹತ್ವ ಓದಿ ಹೇಳಿದರು. ಮುಂಜಾನೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದು ಕಂಡು ಬಂತು.

    ಹಸಿರು ಪಟಾಕಿ: ಸರ್ಕಾರದ ನಿರ್ದೇಶನದಂತೆ ಹಸಿರು ಪಟಾಕಿ ಮಾರಾಟಕ್ಕಷ್ಟೇ ಜಿಲ್ಲಾಡಳಿತದಿಂದ ಅನುಮತಿ ನೀಡಲಾಗಿದ್ದು, ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಆರೇಳು ಅಂಗಡಿಗಳಷ್ಟೇ ತೆರೆದಿದ್ದವು. ಹಸಿರು ಪಟಾಕಿ ದುಬಾರಿ ಬೆಲೆಯ ನಡುವೆಯೂ ಗ್ರಾಹಕರು ಖರೀದಿಯಲ್ಲಿ ಹಿಂದೆ ಬಿದ್ದಿರಲಿಲ್ಲ. ಸಾಮಾನ್ಯ ಪಟಾಕಿ ಇದೆಯೇ ಎಂದು ಮಳಿಗೆ ಮಾಲೀಕರಲ್ಲಿ ಕೇಳುತ್ತಿದ್ದ ದೃಶ್ಯವೂ ಕಂಡುಬಂತು. ಪರವಾನಗಿ ಪಡೆಯಲಾಗದ ಅನೇಕ ಮಾರಾಟಗಾರರು ಇತರ ಪಟಾಕಿಗಳನ್ನು ಕದ್ದು ಮುಚ್ಚಿ ತಮ್ಮದೇ ಜಾಲದ ಮೂಲಕ ಮಾರಾಟ ಮಾಡಿದ್ದಾರೆ. ಮಧ್ಯಾಹ್ನದಿಂದಲೇ ಪಟಾಕಿಗಳು ಸದ್ದು ಮಾಡಲಾರಂಭಿತ್ತು. ಮಕ್ಕಳು, ಹಿರಿಯರಾದಿಯಾಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

    ಹಸಿರು ಪಟಾಕಿ ಹೊರತುಪಡಿಸಿ ಇತರ ಪಟಾಕಿ ಮಾರಾಟ ನಿರ್ಬಂಧಿಸಲಾಗಿತ್ತು. ಮಳಿಗೆಗಳ ಪರಿಶೀಲನೆ ವೇಳೆ ಹಸಿರು ಪಟಾಕಿಗಳಷ್ಟೇ ಮಾರಾಟ ಮಾಡುತ್ತಿದ್ದುದರಿಂದ ಪರವಾನಗಿ ಉಲ್ಲಂಘನೆ ಪ್ರಕರಣ ಕಂಡುಬಂದಿರಲಿಲ್ಲ.
    ರಾಜಶೇಖರ್, ಜಿಲ್ಲಾ ಪರಿಸರ ಅಧಿಕಾರಿ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts