More

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಬ್ಬೂರಿನಲ್ಲಿ ಕೆರೆ ಲೋಕಾರ್ಪಣೆ

    ಹಾವೇರಿ: ಸ್ವ-ಸಹಾಯ ಎಂದರೆ ನಮಗೆ ನಾವೇ ಸಹಾಯ ಮಾಡಿಕೊಳ್ಳುವುದು. ನಮ್ಮನ್ನು ದೇವರು ನೋಡಿಕೊಳ್ಳಲಿ, ಸರ್ಕಾರ ನೋಡಿಕೊಳ್ಳಲಿ ಎನ್ನುವುದು ಸರಿಯಲ್ಲ. ನಮ್ಮನ್ನು ನಾವು ಅಭಿವೃದ್ಧಿಯತ್ತ ಕೊಂಡೊಯ್ಯುವುದು ನಿಜವಾದ ಜೀವನ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಬ್ಬೂರು ಗ್ರಾಪಂ, ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟಗಳ ವತಿಯಿಂದ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ನಮ್ಮೂರು ನಮ್ಮ ಕೆರೆ ಅನುದಾನದಲ್ಲಿ ಅಭಿವೃದ್ಧಿ ಪಡಿಸಿದ ಕೆರೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಉದ್ದೇಶವೇ ನಮಗೆ ನಾವು ಸಹಾಯ ಮಾಡಿಕೊಳ್ಳುವುದಾಗಿದೆ. ನಮ್ಮ ಸಂಘದಲ್ಲಿ ಈಗಾಗಲೇ 50 ಲಕ್ಷ ಮಹಿಳೆಯರು ಸದಸ್ಯತ್ವ ಪಡೆದುಕೊಂಡಿದ್ದು, 18 ಸಾವಿರ ಕೋಟಿ ರೂ. ನಷ್ಟು ಸಾಲ ಪಡೆಯುತ್ತಿದ್ದಾರೆ. ಸಂಘದ ಸಹಾಯಧನದಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.

    ಆರ್ಥಿಕವಾಗಿ ಸದೃಢವಾದ ಮಹಿಳೆಯರು ಕುಟುಂಬ ನಿರ್ವಹಣೆಯೊಂದಿಗೆ ಬ್ಯಾಂಕ್ ಜವಾಬ್ದಾರಿ, ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಗಂಡುಮಕ್ಕಳು ತಪ್ಪು ಮಾಡಿದರೆ ಅವರ ಕಿವಿ ಹಿಂಡುವಷ್ಟು ಬೆಳೆದಿದ್ದಾರೆ. ಪ್ರಮುಖವಾಗಿ ಮಕ್ಕಳಿಗೆ ಶಿಕ್ಷಣ ಒದಗಿಸಿಕೊಡಬೇಕು. ಕಡ್ಡಾಯವಾಗಿ ಶೌಚಗೃಹ ನಿರ್ವಿುಸಿಕೊಳ್ಳಬೇಕು. ಕೆರೆ ಸಂರಕ್ಷಣೆ ಮಾಡಬೇಕು. ಅಭಿವೃದ್ಧಿ ಪಡಿಸಿದ ಕೆರೆಗಳನ್ನು ಸರಿಯಾಗಿ ಇಟ್ಟುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು. ಈ ಹಿಂದೆ ಮಹಿಳೆಯರು ಕೆರೆಯಿಂದ ನೀರು ತರುತ್ತಿದ್ದರು. ಆದರೀಗ ಸರ್ಕಾರ ಮನೆ ಮನೆಗೆ ನೀರು ಕೊಟ್ಟಿದೆ. ಹಾಗಾಂತ ನಮ್ಮ ಬಳಿಯಿರುವ ಕೆರೆ, ಬಾವಿ ಸೇರಿ ಎಲ್ಲ ರೀತಿಯ ಜಲಮೂಲಗಳನ್ನು ಮಲೀನಗೊಳಿಸಬಾರದು. ಶುಚಿತ್ವದಿಂದ ಎಲ್ಲವನ್ನು ಕಾಪಾಡಿಕೊಳ್ಳಬೇಕು ಎಂದರು.

    ಗ್ರಾಪಂ ಅಧ್ಯಕ್ಷೆ ಮಾಳವ್ವ ಕರಿಗಾರ ಅಧ್ಯಕ್ಷತೆ ವಹಿಸಿದ್ದರು. ಅಂಗವಿಕಲರಿಗೆ ಟ್ರೖೆಸಿಕಲ್ ವಿತರಿಸಲಾಯಿತು. ಸ್ವಸಹಾಯ ಸಂಘದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವ ಬಸವರಾಜ ಶಿವಣ್ಣನವರ, ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕರಿಬಸಪ್ಪ ಹೊಸಳ್ಳಿ, ಗ್ರಾಪಂ ಉಪಾಧ್ಯಕ್ಷ ಪುಟ್ಟಪ್ಪ, ಗಿರಿಗೌಡ್ರ, ಮುತ್ತಣ್ಣ ಯಲಿಗಾರ, ಮುರಿಗೆಪ್ಪ ಶೆಟ್ಟರ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts