More

    ಕ್ಷೌರಿಕ ವೃತ್ತಿ ಸವಿತಾ ಸಮಾಜಕ್ಕೆ ಮೀಸಲಿರಿಸಿ

    ಅಫಜಲಪುರ: ಸವಿತಾ ಸಮಾಜ ರಾಜಕೀಯ, ಶೈP್ಷÀಣಿಕ, ಆರ್ಥಿಕವಾಗಿ ಹಿಂದುಳಿದಿದ್ದು, ಜತೆಗೆ ಶೋಷಣೆ ತುಳಿತೊಕ್ಕಳಾಗುತ್ತಿದೆ. ಹೀಗಾಗಿ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ 2(ಎ) ಮೀಸಲಾತಿಯ 8ನೇ ಕಾಲಂಗೆ ಸೇರಿಸಬೇಕು ಎಂದು ಸವಿತಾ ಸಮಾಜದ ತಾಲೂಕು ಉಪಾಧ್ಯP್ಷÀ ದತ್ತು ನಾವಿ ಹೇಳಿದರು.

    ತಹಸಿಲ್ ಕಚೇರಿ ಎದುರು ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ರಾಜ್ಯದ ನಾಲ್ಕು ವಿಭಾಗಗಳಲ್ಲಿ ಕ್ಷೌರಿಕ ಹಾಗೂ ಡೋಲು ನಾದಸ್ವರ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಸತಿ ಶಾಲೆಗಳ ವಿದ್ಯಾರ್ಥಿಗಳ ಕ್ಷೌರಕ್ಕೆ ಸವಿತಾ ಸಮುದಾಯದ ಕ್ಷೌರಿಕರನ್ನು ನೇಮಿಸಬೇಕು. ರಾಜ್ಯ ಸರ್ಕಾರದ ಧಾರ್ಮಿಕ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಡೋಲು-ನಾದಸ್ವರಕ್ಕೆ ಸವಿತಾ ಸಮಾಜದವರನ್ನು ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದರು.

    ಧರ್ಮಾಧಾರಿತ ವೃತ್ತಿಯನ್ನು ಸವಿತಾ ಸಮಾಜದಗೆ ಮಾತ್ರ ಸೀಮಿತವಾಗಿಸಿ ಆದೇಶ ಹೊರಡಿಸಬೇಕು. ಹೊರ ರಾಜ್ಯದವರಿಗೆ, ಬಂಡವಾಳಶಾಹಿ ಹಾಗೂ ಅನ್ಯ ಧರ್ಮದವರಿಗೆ ಕ್ಷೌರಿಕ ವೃತ್ತಿಯ ಪರವಾನಗಿ ನೀಡಬಾರದು. ರಾಜ್ಯದ ಪ್ರತಿ ಗ್ರಾಮಗಳಲ್ಲಿ ಕ್ಷೌರಿಕ ಕುಟೀರ ಪ್ರಾರಂಭಿಸಲು ಜಾಗ ಕೊಡಬೇಕು ಎಂದು ಒತ್ತಾಯಿಸಿದರು.

    ತಾಲೂಕು ಅಧ್ಯP್ಷÀ ರಮೇಶ ನಾವಿ, ಪ್ರಧಾನ ಕಾರ್ಯದರ್ಶಿ ಪಾಂಡುರAಗ ನಾವಿ, ಪ್ರಮುಖರಾದ ಮಹಾಂತೇಶ ಅಡಿಕೆ, ಶಿವಾನಂದ ನಾವಿ, ಶಶಿಕಾಂತ ನಾವಿ, ಸುನೀಲ್ ನಾವಿ, ಆಕಾಶ ನಾವಿ, ಶಿವಶಂಕರ ನಾವಿ, ಸಂಜೀವಕುಮಾರ ನಾವಿ, ಈಶ್ವರ ನಾವಿ, ಸಿದ್ದು ನಾವಿ, ರಾಜಕುಮಾರ ನಾವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts