More

    ಅವನತಿ ಅಂಚಿನಲ್ಲಿ ಮಂಡಾಳು ಭಟ್ಟಿ ಉದ್ಯಮ

    ಕಂಪ್ಲಿ: ಮಂಡಾಳು ತಯಾರಿಕಾ ಘಟಕಗಳು ನಷ್ಟದಂಚಿಗೆ ಸಿಲುಕಿ ಸ್ಥಗಿತಗೊಳ್ಳುತ್ತಿವೆ. ಪಟ್ಟಣದಲ್ಲಿ ಈ ಮೊದಲು 30ಕ್ಕೂ ಹೆಚ್ಚು ಮಂಡಾಳು ಭಟ್ಟಿಗಳಿದ್ದು, ಇದೀಗ ಕೇವಲ ಎರಡು ಕಾರ್ಯನಿರ್ವಹಿಸುತ್ತಿವೆ.

    ಭತ್ತ, ವಿದ್ಯುತ್, ಕಟ್ಟಿಗೆ ತೌಡಿನ ದರ ಏರಿಕೆ, ಕಾರ್ಮಿಕರ ಕೊರತೆ, ತಯಾರಿಕಾ ವೆಚ್ಚ ಹೆಚ್ಚಿರುವುದರೊಂದಿಗೆ ಉತ್ಪಾದನೆ ಪೈಪೋಟಿಯಿಂದಾಗಿ ಮಂಡಾಳು ಭಟ್ಟಿಗಳು ನಷ್ಟದಂಚಿಗೆ ಸಿಲುಕಿದ್ದು, ಕೆಲ ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.

    ಮಂಡಾಳು ತಯಾರಿಕೆಯಲ್ಲಿ ಯಂತ್ರೋಪಕರಣಗಳು ಬಂದ ಬಳಿಕ ಮಂಡಾಳು ರುಚಿ, ಸ್ವರೂಪ, ಗಾತ್ರ ಮತ್ತು ತೂಕ ಕಳೆದುಕೊಂಡಿದ್ದು, ಮಂಡಾಳು ಪ್ರಿಯರಲ್ಲಿ ನಿರಾಸೆ ಮೂಡಿಸಿದೆ. ಮಂಡಾಳು ಖಾರ, ಮಿರ್ಚಿ, ವಗ್ಗರಣೆ ಜಿಲ್ಲೆಯ ಜನಪ್ರಿಯ ತಿಂಡಿಗಳಾಗಿದ್ದು ಮೊದಲಿನ ರುಚಿ ಕಳೆದುಕೊಳ್ಳುತ್ತಿವೆ.
    ಸಂಪೂರ್ಣ ಕೈಭಟ್ಟಿಯಲ್ಲಿ ತಯಾರಾಗುವ ಮಂಡಾಳು ಬಿಳಿಯಾಗಿ, ಪೂರ್ಣ ಉಬ್ಬಿದ, ಹಗುರ ಹಾಗೂ ಗರಿಗರಿಯಾಗಿದ್ದು ಉತ್ತಮ ರುಚಿ ಹೊಂದಿರುತ್ತಿದ್ದವು.

    ಯಂತ್ರದಿಂದ ತಯಾರಿಸಿದ ಮಂಡಾಳಿನ ತೂಕ ಹೆಚ್ಚಿದ್ದು, ಗಟ್ಟಿಯಾಗಿರುತ್ತವೆ. ಅರೆ ಬೆಂದಿರುವ ಈ ಮಂಡಾಳು ತಿನ್ನಲು ಕೂಡ ಸರಿ ಎನಿಸುವುದಿಲ್ಲ.
    ಕೈಭಟ್ಟಿಗಳ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿದ್ದು, ಪಟ್ಟಣದಲ್ಲಿ ಕೈಭಟ್ಟಿ ಹಾಗೂ ಯಂತೋಪಕರಣದಿಂದ ತಯಾರಿಸುವ ಒಂದು ಹಾಗೂ ಪೂರ್ಣ ಪ್ರಮಾಣದಲ್ಲಿ ಯಂತ್ರೋಪಕರಣದಿಂದ ಮಂಡಾಳು ತಯಾರಿಸುವ ಒಂದು ಘಟಕ ಇದೆ. ಭತ್ತ ಲಭ್ಯತೆ ಇಲ್ಲದೆ ಈ ಘಟಕಗಳು ಕೂಡ ಸರಿಯಾಗಿ ನಡೆಯುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts