More

    ಬಣ್ಣಬಣ್ಣದ ಡಿಸೈನ್ ಕಾರೊಳಗಿತ್ತು ಕೊಳೆತ ಶವ; 2 ವರ್ಷಗಳಿಂದ ಒಂದೇ ಕಡೆ ನಿಲ್ಲಿಸಲಾಗಿದ್ದ ಕಾರು!

    ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಬಣ್ಣಬಣ್ಣದ ಡಿಸೈನ್​ ಕಾರೊಂದರ ಒಳಗೆ ಕೊಳೆತ ಸ್ಥಿತಿಯಲ್ಲಿದ್ದ ಶವವೊಂದು ಪತ್ತೆಯಾಗಿದೆ. ಬೆಂಗಳೂರಿನ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಈ ಕಾರಿನಲ್ಲಿ ಶವ ಕಂಡುಬಂದಿದೆ.

    ಮನೆಯೊಂದರ ಬಳಿ ನಿಲ್ಲಿಸಲಾಗಿದ್ದ ಈ ಅಂಬಾಸಡರ್​ ಕಾರಿಗೆ ಹಳದಿ ಬಣ್ಣ ಬಳಿಯಲಾಗಿದ್ದು, ಅದರ ಮೇಲೆ ವರ್ಣರಂಜಿತ ಹೂವುಗಳನ್ನು ಚಿತ್ರಿಸಲಾಗಿದೆ. ಈ ಕಾರನ್ನು ಕೆಲವು ಶೂಟಿಂಗ್​ಗಳಿಗೆ ಬಳಸಲಾಗಿತ್ತು. ಆದರೆ ಕಳೆದ 2 ವರ್ಷಗಳಿಂದ ಇದನ್ನು ಇಲ್ಲೇ ಪಾರ್ಕ್ ಮಾಡಲಾಗಿತ್ತು.

    ಕಾರಿನ ಮಾಲೀಕ ಎರಡು ವರ್ಷಗಳ ಹಿಂದೆ ಬೇರೆ ಕಡೆಗೆ ಶಿಫ್ಟ್ ಆಗಿದ್ದು, ಹೋಗುವಾಗ ಕಾರನ್ನು ಮನೆ ಹಿಂದೆ ನಿಲ್ಲಿಸಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಆದರೆ ಇಂದು ಸುತ್ತಮುತ್ತಲ ಪರಿಸರದಲ್ಲಿ ವಾಸನೆ ಬರಲಾರಂಭಿಸಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಪರಿಶೀಲಿಸಿದಾಗ ಈ ಕಾರೊಳಗೆ ಕೊಳೆತ ಶವ ಪತ್ತೆಯಾಗಿದೆ. ಸದ್ಯಕ್ಕೆ ಮೃತ ವ್ಯಕ್ತಿಯ ಗುರುತು ಪತ್ತೆ ಆಗಿಲ್ಲ. ಮಾಗಡಿ ರಸ್ತೆ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    ಮೃತಪಟ್ಟ ವ್ಯಕ್ತಿಯ ಬಳಿ ದಾಸರಹಳ್ಳಿ ನಿವಾಸಿ ಬಸಪ್ಪ ಎಂಬುವರ ಆಧಾರ್ ಕಾರ್ಡ್ ಹಾಗೂ ಮದ್ಯದ ಬಾಟಲ್ ಸಿಕ್ಕಿದೆ. ಆಧಾರ್ ಕಾರ್ಡ್​​ನಲ್ಲಿರುವ ಮಾಹಿತಿ ಆಧರಿಸಿ ಮೃತವ್ಯಕ್ತಿಯ ಗುರುತುಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

    ನಲಪಾಡ್​ ಹಳೇ ಕೇಸ್​ ಕೆದಕಿ ಕೆಣಕಿದ ನಟಿ ರಮ್ಯಾ; ಜಾಮೀನಿನ ಮೇಲಿರುವ ಅಧ್ಯಕ್ಷ ಎಂದು ವ್ಯಂಗ್ಯ..

    ಛೇ.. ಇದೆಂಥ ದುರಂತ!; ಮಗಳಿಗೆ ಮದ್ವೆ ಮಾಡಿಸಿ ಗಂಡನ ಮನೆಗೆ ಕಳಿಸಿದ ಬೆನ್ನಿಗೇ ತಂದೆಯ ಸಾವು..

    ವಿದ್ಯುತ್ ಸ್ಪರ್ಶದಿಂದಾಗಿ ‘ಜೂನಿಯರ್ ರವಿಚಂದ್ರನ್​’ ಸಾವು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts