More

    ಬಾಕ್ಸಿಂಗ್ ಡೇ ಟೆಸ್ಟ್ ಸೋತ ಪಾಕಿಸ್ತಾನ: ಮೂರು ಪಂದ್ಯಗಳ ಸರಣಿ ಗೆದ್ದ ಆಸ್ಟ್ರೇಲಿಯಾ

    ಮೆಲ್ಬೋರ್ನ್: ನಾಯಕ ಪ್ಯಾಟ್ ಕಮ್ಮಿನ್ಸ್ (49ಕ್ಕೆ 5) ಹಾಗೂ ಮಿಚೆಲ್ ಸ್ಟಾರ್ಕ್ (55ಕ್ಕೆ 4) ಮಾರಕ ದಾಳಿಗೆ ತತ್ತರಿಸಿದ ಪ್ರವಾಸಿ ಪಾಕಿಸ್ತಾನ ತಂಡ ಎರಡನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ಎದುರು 79 ರನ್‌ಗಳಿಂದ ಸೋಲುಂಡಿದೆ. ಇದರೊಂದಿಗೆ ಆಸೀಸ್ ಒಂದು ಪಂದ್ಯ ಬಾಕಿಯಿರುವಂತೆಯೆ 3 ಪಂದ್ಯಗಳ ಸರಣಿಯನ್ನು 2-0ರಿಂದ ಜಯಿಸಿದೆ. ಪಾಕ್ ತಂಡ ಕಾಂಗರೂ ನಾಡಿನಲ್ಲಿ ಸತತ 16ನೇ ಟೆಸ್ಟ್ ಸೋಲು ಅನುಭವಿಸಿದೆ.

    ಎಂಸಿಜಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶುಕ್ರವಾರ ಬೆಳಗ್ಗೆ 6 ವಿಕೆಟ್‌ಗೆ 187 ರನ್‌ಗಳಿಂದ 4ನೇ ದಿನದಾಟ ಆರಂಭಿಸಿದ ಆಸೀಸ್, ದ್ವಿತೀಯ ಇನಿಂಗ್ಸ್‌ನಲ್ಲಿ 84.1 ಓವರ್‌ಗಳಲ್ಲಿ 262 ರನ್‌ಗಳಿಗೆ ಆಲೌಟ್ ಆಯಿತು. ಗೆಲುವಿಗೆ 316 ರನ್ ಗುರಿ ಪಡೆದ ಪಾಕ್, ಮೊಹಮದ್ ರಿಜ್ವಾನ್ (35) ಹಾಗೂ ಆಘಾ ಸಲ್ಮಾನ್ (50) ಜತೆಯಾಟದಿಂದ ಸುಸ್ಥಿತಿಯಲ್ಲಿತ್ತು. ಬಳಿಕ ದಿಢೀರ್ ಕುಸಿತ ಕಂಡು ದಿನದಾಟ ಮುಕ್ತಾಯಕ್ಕೆ 15 ನಿಮಿಷ ಬಾಕಿ ಇರುವಾಗ 67.2 ಓವರ್‌ಗಳಲ್ಲಿ 237 ರನ್‌ಗಳಿಗೆ ಸರ್ವಪತನ ಕಂಡಿತು. ಪಂದ್ಯದಲ್ಲಿ 10 ವಿಕೆಟ್ ಗೊಂಚಲು ಪಡೆದ ಪ್ಯಾಟ್ ಕಮ್ಮಿನ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ 250 ವಿಕೆಟ್ ಪಡೆದ ಆಸೀಸ್‌ನ 10ನೇ ಬೌಲರ್ ಎನಿಸಿದರು. ಮೂರನೇ ಹಾಗೂ ಅಂತಿಮ ಪಂದ್ಯ ಜ.3ರಂದು ಸಿಡ್ನಿಯಲ್ಲಿ ಆರಂಭವಾಗಲಿದೆ.

    ಆಸ್ಟ್ರೇಲಿಯಾ: 318 ಹಾಗೂ 84.1 ಓವರ್‌ಗಳಲ್ಲಿ 262 (ಕ್ಯಾರಿ 53, ಕಮ್ಮಿನ್ಸ್ 16, ಲ್ಯಾನ್ 11,ಅಫ್ರಿದಿ 76ಕ್ಕೆ 4, ಹಂಜಾ 32ಕ್ಕೆ 4). ಪಾಕಿಸ್ತಾನ: 264 ಹಾಗೂ 67.2 ಓವರ್‌ಗಳಲ್ಲಿ 237 (ಮಸೂದ್ 60, ಬಾಬರ್ 41, ರಿಜ್ವಾನ್ 35, ಸಲ್ಮಾನ್ 50, ಕಮ್ಮಿನ್ಸ್ 49ಕ್ಕೆ 5, ಸ್ಟಾರ್ಕ್ 55ಕ್ಕೆ 4). ಪಂದ್ಯಶ್ರೇಷ್ಠ: ಪ್ಯಾಟ್ ಕಮ್ಮಿನ್ಸ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts