More

    ಹಸುಗಳ ಶವಗಳ ರಾಶಿ- ಬಾಳೆಹಣ್ಣಿನಲ್ಲಿ ವಿಷ ಹಾಕಿರುವ ಶಂಕೆ

    ಕೊಡಗು: 20ಕ್ಕೂ ಅಧಿಕ ಹಸುಗಳನ್ನು ಅಮಾನವೀಯವಾಗಿ ಕೊಂದುಹಾಕಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಇತ್ತೀಚೆಗಷ್ಟೇ ಅನಾನಸ್‌ ಹಣ್ಣನ್ನು ತಿಂದು ಆನೆ ಮೃತಪಟ್ಟಿರುವುದು, ಸ್ಫೋಟಕ ತಿಂದು ಹಸು ಬಾಯಿ ಹರಿದಿರುವುದು ಇತ್ಯಾದಿ ಘಟನೆಗಳು ಮಾಸುವ ಮುನ್ನವೇ ಇಂಥದ್ದೇ ಒಂದು ದುರಂತ ಕೊಡಗಿನಲ್ಲಿ ನಡೆದಿದೆ.

    ಕೊಡಗು ಜಿಲ್ಲೆ ಐಗೂರಿನ ಟಾಟಾ ಎಸ್ಟೇಟ್‌ನಲ್ಲಿ ಘಟನೆ ನಡೆದಿದ್ದು, 7 ಹಸುಗಳ ಕಳೇಬರ ಪತ್ತೆಯಾಗಿದೆ. 20ಕ್ಕೂ ಅಧಿಕ ಹಸುಗಳನ್ನು ಸಾಯಿಸಿರುವ ಶಂಕೆ ವ್ಯಕ್ತವಾಗಿದೆ. ಹಸುಗಳಿಗೆ ಬಾಳೆಹಣ್ಣಿನಲ್ಲಿ ವಿಷ ಹಾಕಿ ನೀಡಿರಬಹುದು ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಆನೇಕಲ್ ಪುರಸಭೆಯಲ್ಲಿ ಸಿಬ್ಬಂದಿ ಕೊರತೆ, ಕರೊನಾ ಮುಂಜಾಗ್ರತೆ ವಹಿಸಲು ನೌಕರರಿಗೆ ಹೆಚ್ಚಿದ ಒತ್ತಡ

    ಬಾಳೆಹಣ್ಣಿನಿಂದ ವಿಷ ಹಾಕಿದ ನಂತರ ಅವುಗಳನ್ನು ಹಸುವಿಗೆ ನೀಡಲಾಗಿದೆ. ಇದರ ಅರಿವೇ ಇಲ್ಲದ ಹಸುಗಳು ಅವುಗಳನ್ನು ತಿಂದು ಮೃತಪಟ್ಟಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮೃತ ಹಸುಗಳನ್ನು ಟ್ರಾಕ್ಟರ್ ಸಹಾಯದಿಂದ ಎಸ್ಟೇಟ್ ಒಳಗೆ ಗುಂಡಿ ಮಾಡಿ ಹುಗಿಯಲಾಗಿದೆ. ಇದಾಗಲೇ ಏಳು ಹಸುಗಳ ಕಳೇಬರ ದೊರೆತಿದ್ದು, ಇನ್ನೂ ಹೆಚ್ಚಿನ ಹಸುಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

    ತೋಟದ ವ್ಯವಸ್ಥಾಪಕನನ್ನು ಜನ ತರಾಟೆಗೆ ತೆಗೆದುಕೊಂಡಿದ್ದು, ಹಸುಗಳನ್ನು ಕಳೆದುಕೊಂಡ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಎಸ್ಟೇಟ್‌ಗೆ ಜನರು ಜಮಾಯಿಸುತ್ತಿದ್ದಾರೆ.

    ಪಾಸಿಟಿವ್- ನೆಗೆಟಿವ್‌… ಆಸ್ಪತ್ರೆಗೇ ಡೌಟು- ಸಂತ್ರಸ್ತನ ಪಾಡು ಯಾರಿಗೂ ಬೇಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts