More

    ರಕ್ತದ ಬದಲು ಮೂಸಂಬಿ ಜ್ಯೂಸ್​ ಕೊಟ್ಟು ರೋಗಿ ಸಾವು ಪ್ರಕರಣ; ಬಯಲಾಯ್ತು ಅಸಲಿ ಕಾರಣ!

    ಉತ್ತರಪ್ರದೇಶ: ರೋಗಿಯೊಬ್ಬನಿಗೆ ರಕ್ತದ ಬದಲು ಮೂಸಂಬಿ ಜ್ಯೂಸ್ ಕೊಟ್ಟ ಪರಿಣಾಮವಾಗಿ ಆತ ಸಾವಿಗೀಡಾಗಿದ್ದ ಎಂಬ ಪ್ರಕರಣವೊಂದು ಇತ್ತೀಚೆಗೆ ಬಹಿರಂಗಗೊಂಡಿತ್ತು. ಇದು ದೇಶದ ಗಮನವನ್ನೇ ಸೆಳೆದಿದ್ದು, ಇದೀಗ ಈ ಪ್ರಕರಣದ ಹಿಂದಿನ ಅಸಲಿಯತ್ತು ಬಯಲಾಗಿದೆ.

    ಉತ್ತರಪ್ರದೇಶ ಪ್ರಯಾಗ್​ರಾಜ್​ನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಡೆಂಘೆ ರೋಗಿಯೊಬ್ಬರಿಗೆ ಪ್ಲೇಟ್​ಲೆಟ್ ಬದಲು ಮೂಸಂಬಿ ಜ್ಯೂಸ್ ಕೊಟ್ಟಿದ್ದರು ಎನ್ನಲಾಗಿದ್ದು, ಆ ರೋಗಿ ಬಳಿಕ ಸಾವಿಗೀಡಾಗಿದ್ದ. ಇದಾದ ಬೆನ್ನಿಗೆ ನಕಲಿ ಪ್ಲೇಟ್​ಲೆಟ್​ ಮಾರುತ್ತಿದ್ದ ದಂಧೆಯೊಂದರ ಆರೋಪಿಗಳು ಕೂಡ ಸಿಕ್ಕಿಬಿದ್ದಿದ್ದರು.

    ಆದರೆ ಇದು ಮೂಸಂಬಿ ಜ್ಯೂಸ್ ಕೊಟ್ಟು ಸಂಭವಿಸಿದ್ದ ಸಾವಲ್ಲ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು. ಈ ವಿಷಯವಾಗಿ ಇದೀಗ ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ. ಮಾತ್ರವಲ್ಲ, ರೋಗಿ ಕೊಟ್ಟಿದ್ದೇನು ಎಂಬುದು ಕೂಡ ಬಯಲಾಗಿದೆ.

    ಇದನ್ನೂ ಓದಿ: ರೋಗಿಗೆ ಪ್ಲೇಟ್​ಲೆಟ್ಸ್​ ಬದಲು ಮೂಸಂಬಿ ಜ್ಯೂಸ್ ಕೊಟ್ಟು ಸಾವು; ಈ ಪ್ರಕರಣದ ಬೆನ್ನಿಗೇ ಕರಾಳ ದಂಧೆ ಬಯಲು!

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಪ್ರಯಾಗ್​ರಾಜ್​ ಜಿಲ್ಲಾಧಿಕಾರಿ ಸಂಜಯ್ ಖತ್ರಿ, ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿದ್ದು, ಅದರ ತನಿಖಾ ವರದಿ ಪ್ರಕಟಗೊಂಡಿದೆ. ವರದಿ ಪ್ರಕಾರ, ರೋಗಿ ಕೊಟ್ಟಿದ್ದು ಮೂಸಂಬಿ ಜ್ಯೂಸ್ ಅಲ್ಲ, ಪ್ಲೇಟ್​ಲೆಟ್​. ಆದರೆ ಅದನ್ನು ಸರಿಯಾಗಿ ಸಂರಕ್ಷಿಸಿ ಇಡಲಾಗಿಲ್ಲ. ಹೀಗಾಗಿ ಅದರಿಂದ ಸಾವಾಗಿದೆ. ವರದಿ ಆಧಾರದ ಮೇಲೆ ಮುಂದಿನ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

    ‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’: ನಿರೀಕ್ಷೆಗೂ ಮೀರಿ ನಿಜವಾಯ್ತಾ ಕಾರ್ಣಿಕ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts