More

    ಕರೊನಾ ಎದುರು ಮರೆತೇಹೋಯಿತು ಮಂಗನ ಕಾಯಿಲೆ; ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ಶಂಕಿತ ವ್ಯಕ್ತಿ ಸಾವು, ಗ್ರಾಮಸ್ಥರ ಆಕ್ರೋಶ

    ಶಿವಮೊಗ್ಗ: ದೇಶದಲ್ಲಿ ಕರೊನಾ ವೈರಸ್​ ದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದೆ. ರಾಜ್ಯಕ್ಕೂ ಸಹ ಕರೊನಾ ಬಿಸಿ ತಟ್ಟಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರೆಡು ಕರೊನಾ ನಿಯಂತ್ರಣಕ್ಕೆ ಅನೇಕ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಆದರೆ ರಾಜ್ಯದ ಮಲೆನಾಡು ಭಾಗದಲ್ಲಿ ಕರೊನಾ ಬದಲಾಗಿ ಮಂಗನ ಕಾಯಿಲೆಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಅಲ್ಲಿನ ಜನರು ಭಯದಿಂದ ಬದುಕುವಂತಾಗಿದೆ.

    ಶಿವಮೊಗ್ಗದ ಸಾಗರ ತಾಲೂಕಿನ ಅರಳಗೋಡು ಗ್ರಾಮಪಂಚಾಯಿತಿ ವ್ಯಾಪ್ತಿಯ ಕಸಗುಪ್ಪೆ ನಿವಾಸಿ ಕೋಮರಾಜ್​ ಜೈನ್(36)​ಗೆ ಮಂಗನ ಕಾಯಿಲೆ ಇದೆ ಎಂದು ಶಂಕಿಸಲಾಗಿತ್ತು. ಮಣಿಪಾಲ ಆಸ್ಪತ್ರೆಯಲ್ಲಿ ಆತನನ್ನು ದಾಖಲಿಸಲಾಗಿದ್ದು ಅಲ್ಲಿ ಖರ್ಚು ಭರಿಸಲು ಸಾಧ್ಯವಾಗದ ಕಾರಣ ಆತನ ಸಂಬಂಧಿಗಳು ರೋಗಿಯನ್ನು ಮೆಗ್ಗಾನ್​ ಆಸ್ಪತ್ರೆಗೆ ಕರೆತಂದಿದ್ದಾರೆ. ಮೆಗ್ಗಾನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.

    ಘಟನೆಯಿಂದಾಗಿ ಮನನೊಂದಿರುವ ಸಂಬಂಧಿಕರು ಮತ್ತು ಗ್ರಾಮಸ್ಥರು ಸರ್ಕಾರದ ವಿರುದ್ಧ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವರ್ಷ ಮಂಗನ ಕಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖಲಾದ ರೋಗಿಗಳ ಆಸ್ಪತ್ರೆಯ ಖರ್ಚನ್ನು ಸರ್ಕಾರವೇ ಭರಿಸುತ್ತಿತ್ತು. ಆದರೆ ಈ ವರ್ಷ ಸರ್ಕಾರ ಸ್ಪಂದಿಸುತ್ತಿಲ್ಲ. ಶಾಸಕ ಹರತಾಳು ಹಾಲಪ್ಪನವರು ಬರಬೇಕು, ಜನಪ್ರತಿನಿಧಿಗಳು ಬರುವ ತನಕ ನಾವು ಶವ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಸ್ಥಳಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆಗಮಿಸಿದ್ದು ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಸದ್ಯ ಅರಳಗೋಡು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    ಕಾಂಗ್ರೆಸ್​ಗೆ ಶಾಕ್​ ಮೇಲೆ ಶಾಕ್​: ಮಧ್ಯಪ್ರದೇಶ ಬೆನ್ನಲ್ಲೇ ಗುಜರಾತಿನ ಇಬ್ಬರು ಶಾಸಕರಿಂದ ರಾಜೀನಾಮೆ

    ಓದುವ ವಯಸ್ಸಿನಲ್ಲಿ ಪ್ರೀತಿಯ ಬಲೆ ಬೀಸಿದ ನಟ ಪರೀಕ್ಷೆಗೆ ಓದುವುದನ್ನು ಬಿಟ್ಟು ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts