More

    ಸರ್ಕಾರಿವೇ ಕೆಎಫ್‌ಡಿ ಚಿಕಿತ್ಸಾ ವೆಚ್ಚ ಭರಿಸಲಿ

    ಜಯಪುರ: ಕೊಪ್ಪ ತಾಲೂಕಿನ ಹಲವೆಡೆ ಮಂಗನ ಕಾಯಿಲೆ ವ್ಯಾಪಿಸುತ್ತಿದ್ದು, ನಿಧಾನವಾಗಿ ಸಾವು-ನೋವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮಂಗನ ಕಾಯಿಲೆಗೆ ತುತ್ತಾಗಿರುವ ಬಡ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಿಬೇಕು ಎಂದು ಕರ್ನಾಟಕ ಎಸ್ಟೇಟ್ ಲೇಬರ್ ಯೂನ್‌ನ ಪ್ರಧಾನ ಕಾರ್ಯದರ್ಶಿ ವಿ.ಮಾಣಿಕ್ಯ ಆಗ್ರಹಿಸಿದ್ದಾರೆ.

    ನುಗ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಎಫ್‌ಡಿ ವೇಗವಾಗಿ ಹರಡುತ್ತಿದೆ. ಈ ಭಾಗದ ಪ್ಲಾಂಟೇಷನ್‌ಗಳಲ್ಲಿ ಕೆಲಸ ಮಾಡಿಕೊಂಡಿರುವ ಕಾರ್ಮಿಕರು, ಈ ಭಾಗದ ನಿವಾಸಿಗಳಲ್ಲಿ ಪ್ರಾಣಭೀತಿ ಉಂಟಾಗಿದೆ. ಇತ್ತೀಚೆಗೆ ದೇವನ್ ಪ್ಲಾಂಟೇಷನ್ಸ್‌ನಲ್ಲಿ ಕೂಲಿ ಕಾರ್ಮಿಕರಾದ ಕೊಟ್ರಮ್ಮ ಎಂಬುವರು ಕೆಎಫ್‌ಡಿಗೆ ಬಲಿಯಾಗಿದ್ದಾರೆ. ಎನ್.ಆರ್.ಪುರ ತಾಲೂಕಿನ ಮೇಲ್ಪಾಲ್ ಗ್ರಾಮದಲ್ಲಿ ಇಬ್ಬರಿಗೆ ಮಂಗನ ಕಾಯಿಲೆ ದೃಢಪಟ್ಟಿದೆ. ಕೊಪ್ಪ ತಾಲೂಕಿನ ಇತರೆ ಗ್ರಾಮದಲ್ಲೂ ಮಂಗನ ಕಾಯಿಲೆಗೆ ಬಲಿಯಾದ ಪ್ರಕರಣ ದಾಖಲಾಗಿದೆ ಎಂದು ಶನಿವಾರ ತಿಳಿಸಿದರು.
    ಕೂಲಿಯನ್ನೇ ಅವಲಂಬಿಸಿರುವ ಕಾರ್ಮಿಕರು ಇದೀಗ ಮಂಗನ ಕಾಯಿಲೆಗೆ ಹೆದರಿ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅವರ ಜೀವನ ನಡೆಯುವುದೇ ಕಷ್ಟವಾಗಿದೆ. ಕೆಎಫ್‌ಡಿಗೆ ತುತ್ತಾಗಿರುವ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ನುಗ್ಗಿ ಗ್ರಾಪಂ ವ್ಯಾಪ್ತಿಯಲ್ಲಿ ಆ್ಯಂಬುಲೆನ್ಸ್‌ನ ಅವಶ್ಯಕತೆಯಿದೆ ಎಂದರು.
    ವಿಶೇಷವಾದ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿಕೊಟ್ಟು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕಳುಹಿಸಲು ಸಂಬಂಧಪಟ್ಟ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಕ್ತವಾದ ನಿರ್ದೇಶನ ನೀಡಬೇಕು. ಸ್ಥಳೀಯ ಆಸ್ಪತ್ರೆಗಳಲ್ಲೂ ಕೆಎಫ್‌ಡಿ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts