More

    ಐಟಿ ರಿಟರ್ನ್ಸ್ ಸಲ್ಲಿಕೆ ಗಡುವು ಮತ್ತೆ ವಿಸ್ತರಣೆ

    ನವದೆಹಲಿ: ಆದಾಯ ತೆರಿಗೆ ಪಾವತಿ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಮೂರನೇ ಬಾರಿಗೆ ವಿಸ್ತರಣೆ ಮಾಡಿದ್ದು, 2019-20ನೇ ಸಾಲಿನ ವೈಯಕ್ತಿಕ ಆದಾಯ ತೆರಿಗೆ ಪಾವತಿ ಗಡುವನ್ನು ಜನವರಿ 10ರವರೆಗೂ ವಿಸ್ತರಿಸಿದೆ.

    ಖಾತೆಗಳ ಆಡಿಟ್ ಪಡೆಯಬೇಕಾದ ವೈಯಕ್ತಿಕ ಮತ್ತು ಕಂಪನಿಗಳಿಗೆ ಐಟಿ ರಿಟರ್ನ್ಸ್​ ಸಲ್ಲಿಸುವ ಗಡುವನ್ನು ಫೆಬ್ರವರಿ 15ರವರೆಗೆ 15 ದಿನಗಳು ವಿಸ್ತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಲಾಯ ಪ್ರಕಟಣೆಯಲ್ಲಿ ತಿಳಿಸಿದೆ.

    ಇದನ್ನೂ ಓದಿ: ವಿಷ್ಣು ಪುತ್ಥಳಿ ಧ್ವಂಸ ಅವಮಾನವಲ್ಲ, ಆಶೀರ್ವಾದ ಎಂದ ಭಾರತಿ ವಿಷ್ಣುವರ್ಧನ್​

    ವೈಯಕ್ತಿಕ ಮತ್ತು ಕಂಪೆನಿಗಳು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಅಂತಿಮ ದಿನಾಂಕ ಕ್ರಮವಾಗಿ ಡಿಸೆಂಬರ್ 31, 2020 ಮತ್ತು ಜನವರಿ 31, 2021 ಆಗಿದೆ. ಡಿಸೆಂಬರ್​ 28ರವರೆಗೂ 4.54 ಕೋಟಿಗೂ ಅಧಿಕ ಐಟಿ ರಿಟರ್ನ್ಸ್​ ಸಲ್ಲಿಕೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 4.77 ಕೋಟಿ ಸಲ್ಲಿಕೆಯಾಗಿತ್ತು.

    ಕರೊನಾ ವೈರಸ್​ ಸ್ಪೋಟಗೊಂಡ ಬಳಿಕ ಶಾಸನಬದ್ಧ ಅನುಸರಣೆಗಳನ್ನು ಪೂರೈಸುವಲ್ಲಿ ತೆರಿಗೆದಾರರು ಎದುರಿಸುತ್ತಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಗಡುವನ್ನು ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ. (ಏಜೆನ್ಸೀಸ್​)

    ಇದನ್ನೂ ಓದಿ: ಪತ್ನಿ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಕಾಲ್​ಗರ್ಲ್​ ಎಂದು ಪ್ರಚಾರ ಮಾಡಿದ ಪತಿ..!

    ಡಿ.​ 31ರ ಒಳಗೆ ಆದಾಯ ತೆರಿಗೆ ಫೈಲ್​ ಮಾಡಿಲ್ಲ ಅಂದರೆ ಬೀಳಬಹುದು 10 ಸಾವಿರ ದಂಡ!

    ಗ್ರಾಪಂ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್​​ಗೆ ಶುರುವಾಯ್ತು ಟೆನ್ಷನ್​!

    ಬಿಹಾರದಲ್ಲಿ ಮುರಿದು ಬೀಳುತ್ತಾ ನಿತೀಶ್​ ಸರ್ಕಾರ? ಜೆಡಿಯುನ 17 ಶಾಸಕರು ಆರ್​ಜೆಡಿಗೆ ಬರಲು ಸಿದ್ಧರಿದ್ದಾರೆ ಎಂದ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts