More

    ಶಿಕ್ಷಕ ಪ್ರಶಸ್ತಿಗೂ ಶಿಫಾರಸು ಬೇಕೇನ್ರಿ? ಶಿಕ್ಷಕರ ಮೇಲೆ ರೇಗಾಡಿದ ಡಿಸಿಎಂ

    ಬೆಂಗಳೂರು: ‘ಇವರಿಗೆ ಪ್ರಶಸ್ತಿ ಈ ಬಾರಿ ಸಿಗಲೇಬೇಕು. ನೀವು ಫೋನ್​ ಮಾಡಿ ಕಮಿಷನರ್​ಗೆ ಹೇಳಿದ್ರೆ ಎಲ್ಲವೂ ಆಗುತ್ತೆ’ ಎಂದ ಶಿಕ್ಷರ ತಂಡವೊಂದಕ್ಕೆ ಡಿಸಿಎಂ ಡಾ.ಸಿ.ಎನ್​.ಅಶ್ವಥನಾರಾಯಣ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಶಿಕ್ಷಕರ ತಂಡವೊಂದು ತಮ್ಮ ಕಡೆಯ ಶಿಕ್ಷಕರೊಬ್ಬರಿಗೆ ಪ್ರಶಸ್ತಿ ಕೊಡಿಸಲೇಬೇಕೆಂಬ ಹಠಕ್ಕೆ ಬಿದ್ದಂತೆ ಡಿಸಿಎಂ ಗೃಹ ಕಚೇರಿ ಬಳಿಗೆ ಬಂದಿತ್ತು. ಆ ವೇಳೆ ‘ಪ್ರಶಸ್ತಿಗಳೆಲ್ಲವೂ ಮೆರಿಟ್​ ಆಧಾರದ ಮೇಲೆ ಆಯ್ಕೆ ಮಾಡಿ ಕೊಡಬೇಕು. ನೀವು ಹೀಗೆ ಶಿಫಾರಸು ಮಾಡಿಸಿಕೊಂಡು ಪ್ರಶಸ್ತಿ ಪಡೆದರೆ ಏನು ಲಾಭ? ಆ ಪ್ರಶಸ್ತಿ ಮೌಲ್ಯ ಏನು ಉಳಿಯುತ್ತೆ ಹೇಳಿ? ಎಂದ ಡಿಸಿಎಂ, ‘ನೀವು ಇಲಾಖೆಯಲ್ಲಿ ಹೇಗೆ ಕೆಲಸ ಮಾಡಿದ್ದೀರಿ? ಎಷ್ಟು ಕೆಲಸ ಮಾಡಿದ್ದೀರಿ? ನಿಮ್ಮ ನಡವಳಿಕೆ ಹೇಗಿದೆ ಎನ್ನುವುದು ನಿಮ್ಮ ಇಲಾಖೆ ಅಧಿಕಾರಿಗಳಿಗೆ ಗೊತ್ತಿರುತ್ತದೆ. ಅದನ್ನು ಬಿಟ್ಟು ನನಗೆ ಹೇಗೆ ಗೊತ್ತಾಗಬೇಕು?’ ಎಂದು ತರಾಟೆಗೆ ತೆಗೆದುಕೊಂಡರು.

    ಇದನ್ನೂ ಓದಿರಿ video/ ಅಪಾಯದಲ್ಲಿದ್ದ ನಾಗರಹಾವನ್ನು ಕಾಪಾಡಿತು ಹಂದಿ-ಕಾಗೆಗಳ ಹಿಂಡು!

    ಡಿಸಿಎಂ ಸಿಟ್ಟು ಇಷ್ಟಕ್ಕೆ ಕರಗಲಿಲ್ಲ. ಆ ಶಿಕ್ಷಕರನ್ನು ಕರೆದುಕೊಂಡು ಬಂದಿದ್ದ ತಮ್ಮ ಬೆಂಬಲಿಗ ಕಾರ್ಯಕರ್ತರತ್ತಲೂ ತಿರುಗಿತು. ‘ಅಲ್ರೀ, ನೀವು ನನ್ನಿಂದ ಒಳ್ಳೆಯ ಕೆಲಸ ಮಾಡಿಸಬೇಕು. ಅದರಿಂದ ನಿಮಗೂ ಒಳ್ಳೆಯದು, ಸಮಾಜಕ್ಕೂ ಅನುಕೂಲವಾಗುತ್ತದೆ. ಅದನ್ನು ಬಿಟ್ಟು ಏನೇನೋ ಯಾಕೆ ಮಾಡಿಸ್ತೀರಿ? ಯಾರಾದರೂ ಶಿಫಾರಸು ಮಾಡಿ ಶಿಕ್ಷಕರು ಪ್ರಶಸ್ತಿ ತಗೋಳ್ತಾರೇನ್ರೀ? ನಿಮಗೂ ಅಷ್ಟು ಗೊತ್ತಾಗಲ್ವಾ? ನನ್ನ ಕಡೆಯಿಂದ ಇಂಥ ಕೆಲಸಗಳನ್ನೆಲ್ಲ ಮಾಡಿಸಬೇಡಿ’ ಎಂದು ರೇಗಿದರು.

    ‘ಅಷ್ಟೊತ್ತಿಗೆ ಅಲ್ಲಿದ್ದ ಶಿಕ್ಷಕರು ತಪ್ಪಾಯ್ತು ಸಾರ್​’ ಎಂದು ಬಂದ ದಾರಿಗೆ ಸುಂಕವಿಲ್ಲ ಎಂದು ಪೆಚ್ಚು ಮೋರೆ ಹಾಕಿ ಮನ ಕಡೆಗೆ ಮುಖ ಮಾಡಿದರು.

    ಮೊಬೈಲ್​ ಕಳ್ಳನ ವಿರುದ್ಧ ಹೋರಾಡಿ ಗೆದ್ದ ಕೂಲಿಕಾರನ ಮಗಳಿಗೆ ಸಿಕ್ತು ಬಂಪರ್​ ಬಹುಮಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts