More

    ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

    ಧಾರವಾಡ: ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ಶಿಕ್ಷಕರು ಭಾಜನರಾಗಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ತಾಲೂಕಿನ ಮುರಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶೇಕಪ್ಪ ಭೀಮಪ್ಪ ಕೇಸರಿ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ತಾಲೂಕಿನ ವೀರಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕ ಸುರೇಶ ಬಿ. ಮುಗಳಿ ಭಾಜನರಾಗಿದ್ದಾರೆ.
    ಎಸ್.ಬಿ. ಕೇಸರಿ ಅವರು ರಾಣೇಬೆನ್ನೂರ ತಾಲೂಕು ಗುಡ್ಡದಹೊಸಳ್ಳಿ ಗ್ರಾಮದವರು. ೧೯೮೫ ಟಿಸಿಎಚ್ ತೇರ್ಗಡೆಯಾದರು. ಸೊರಬ ತಾಲೂಕು ಜಡೆ ಗ್ರಾಮದ ಸರ್ಕಾರಿ ಮಾದರಿ ಶಾಲೆಗೆ ಶಿಕ್ಷಕರಾಗಿ ನೇಮಕಗೊಂಡರು. ನಂತರ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು, ಧಾರವಾಡ ತಾಲೂಕಿನ ನರೇಂದ್ರ ಗ್ರಾಮಗಳಲ್ಲಿ ಸೇವೆ ಸಲ್ಲಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ನಂತರ ಕೆಲಗೇರಿಯ ಶಾಲೆಯಲ್ಲಿ ೧೮ ವರ್ಷ ಸೇವೆಗೈದರು. ೨೦೨೦ರಲ್ಲಿ ಮುಖ್ಯಾಧ್ಯಾಪಕರಾಗಿ ಬಡ್ತಿ ಪಡೆದರು. ಪ್ರಸ್ತುತ ಧಾರವಾಡ ತಾಲೂಕಿನ ಮುರಕಟ್ಟಿ ಗ್ರಾಮದ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿಸಿಎಚ್‌ಗೆ ತೃಪ್ತಿ ಪಡದೆ ಶಿಕ್ಷಕ ವೃತ್ತಿಗೆ ಸೇರಿದ ನಂತರ ಬಿ.ಎ, ಬಿ.ಎಡ್, ಎಂಎ ಪದವಿ ಪೂರೈಸಿದ್ದಾರೆ.
    `ರಾಜ್ಯ ಪ್ರಶಸ್ತಿ ನಿರೀಕ್ಷೆ ಮಾಡಿರಲಿಲ್ಲ. ಇಲಾಖೆಯು ನನ್ನ ೩೯ ವರ್ಷಗಳ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆ ಮಾಡಿರುವುದು ಖುಷಿ ತಂದಿದೆ ಎಂದು ಎಸ್.ಬಿ. ಕೇಸರಿ ಅವರು ಸಂತಸ ಹಂಚಿಕೊAಡರು.
    ತಾಲೂಕಿನ ಮುಗಳಿ ಗ್ರಾಮದ ಸುರೇಶ ಮುಗಳಿ ಅವರು ೨೦೦೨ರಲ್ಲಿ ಬಿ.ಎಡ್, ನಂತರ ಎಂಎ ಇಂಗ್ಲಿಷ್ ಸ್ನಾತಕೋತ್ತರ ಪದವಿ, ಎಂ.ಎಡ್ ಪದವೀಧರರಾಗಿದ್ದಾರೆ. ೨೦೦೭ರಲ್ಲಿ ಆಂಗ್ಲಭಾಷಾ ಶಿಕ್ಷಕರಾಗಿ ನೇಮಕಗೊಂಡರು. ಆಂಗ್ಲಾಭಾಷೆಯ ಕ್ರಿಯಾತ್ಮಕ ಬೋಧನೆಯ ಮೂಲಕ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ. ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯ ಹಾಗೂ ಪರಶೀಲಕರಾಗಿ ಸುರೇಶ ಕಾರ್ಯನಿರ್ವಹಿಸಿದ್ದಾರೆ. ಆಂಗ್ಲಾಭಾಷಾ ಶಿಕ್ಷಕರಿಗೆ ತರಬೇತಿ ಸಾಹಿತ್ಯ ರಚನೆ ಕಾರ್ಯಕ್ರಮಗಳಲ್ಲಿ ತರಬೇತುದಾರರಾಗಿ ಹಾಗೂ ಹತ್ತಾರು ಉಪನ್ಯಾಸ ಕಾರ್ಯಕ್ರಮಗಳನ್ನು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts