More

    ಗೃಹ ರಕ್ಷಕರಿಗೆ ಪ್ರೋತ್ಸಾಹದ ಅಗತ್ಯವಿದೆ -ಡಿಸಿಜಿ ಅಕ್ಷಯ ಹಾಕೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪೌರ ರಕ್ಷಣಾ ಪಡೆಗಳನ್ನು ಇನ್ನಷ್ಟು ಮುನ್ನೆಲೆಗೆ ತರಲು ಕ್ರಮ ವಹಿಸಬೇಕು ಎಂದು ಗೃಹರಕ್ಷಕ ದಳದ ಉಪ‌ ಮಹಾ ಸಮಾದೇಷ್ಠ (ಡಿಸಿಜಿ) ಹಾಗೂ ಪೌರ ರಕ್ಷಣಾ ದಳದ ಉಪ ನಿರ್ದೇಶಕ ಅಕ್ಷಯ್ ಎಂ. ಹಾಕೆ ಹೇಳಿದರು.
    ಕಾರವಾರದ ಜಿಲ್ಲಾ ಗೃಹರಕ್ಷಕ ಕಚೇರಿಗೆ ಶುಕ್ರವಾರ ಅಧಿಕೃತ ಭೇಟಿ ನೀಡಿ, ಗೌರವ ವಂದನೆ‌‌ ಸ್ವೀಕರಿಸಿ ಅವರು ಮಾತನಾಡಿದರು.
    ಅಗ್ನಿಶಾಮಕ ಮತ್ತು ಇತರೆ ಇಲಾಖೆಯಲ್ಲಿ ಕೆಲಸ ಮಾಡುವ ಗೃಹರಕ್ಷಕರಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದರು. ಗೃಹರಕ್ಷಕರ ಕುಂದು ಕೊರತೆಗಳ ಬಗ್ಗೆ ವಿಚಾರಿಸುವಂತೆ ಜಿಲ್ಲಾ ಸಮಾದೇಷ್ಠರಿಗೆ ಸೂಚಿಸಿದರು.

    ಇದನ್ನೂ ಓದಿ: ಸಿಟ್ಟು- ಜಾತಿ ವೈಷಮ್ಯದಿಂದ ನಡೆಯದಿರಲಿ ಅಹಿತಕರ ಘಟನೆ
    ಅಲ್ಲದೆ, ಅವರಿಗೆ ಕಾಲ ಕಾಲಕ್ಕೆ ಸೂಕ್ತ‌ ಸಲಹೆ ತರಬೇತಿ ನೀಡುವಂತೆ ಸೂಚನೆ‌ ನೀಡಿದರು. ಕಡತಗಳನ್ನು ಪರಿಶೀಲಿಸಿದರು.
    ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಠ ಡಾ. ಸಂಜು ತಿಮ್ಮಣ್ಣ ನಾಯಕ, ಜಿಲ್ಲಾ ಬೋಧಕ ರಘು ಬಿ.ಸಿ, ಕಚೇರಿಯ ಎಫ್ ಡಿಸಿ ಶ್ರೀನಿವಾಸ ನಾಯಕ , ಎಸ್‌ಡಿಸಿ ಮಧು.ಹೆಚ್. ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts