More

    ಮಹಿಳಾ ಉದ್ಯಮಕ್ಕೆ 20 ಲಕ್ಷ ರೂ. ಸಾಲ ; ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಭರವಸೆ

    ಕೋಲಾರ: ಮಹಿಳಾ ಸ್ವಸಹಾಯ ಸಂಗಳು ಉದ್ಯಮ ಸ್ಥಾಪನೆಗೆ ಮುಂದಾದರೆ ಅಗತ್ಯ ಸಾಲ ಒದಗಿಸುವ ಜತೆಗೆ ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ತಯಾರಿಸಿದರೆ ವಾರುಕಟ್ಟೆ ಒದಗಿಸಲು ಸಹಕರಿಸಲಾಗುವುದು ಎಂದು ಕೋಲಾರ- ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

    ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಭಾನುವಾರ ‘ಮನೆಗೊಬ್ಬ ಉದ್ಯಮಿ, ಊರಿಗೊಂದು ಉದ್ಯಮ’ ಧ್ಯೇಯದಡಿ ಹೆಲ್ತ್ ಇಂಡಿಯಾ ವೆಲ್ತ್ ಇಂಡಿಯಾ ಟ್ರಸ್ಟ್ ವತಿಯಿಂದ ಮಹಿಳಾ ಸ್ವಸಹಾಯ ಸಂಗಳು ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದರು.

    ವಿದೇಶಿ ಕಂಪನಿಗಳಿಗೆ ಒಬ್ಬ ಮಾಲೀಕನಿದ್ದರೆ, ಮಹಿಳಾ ಸಂಗಳು ಸ್ಥಾಪಿಸುವ ಉದ್ಯಮಕ್ಕೆ ಸಾವಿರಾರು ಮಹಿಳೆಯರು ಮಾಲೀಕರು. ಇವರಿಗೆ ಅಗತ್ಯ ಮಾರುಕಟ್ಟೆ ಒದಗಿಸಿ ನಂಬಿಕೆ ಬಲಗೊಳಿಸುವ ಕಾರ್ಯವನ್ನು ಹೆಲ್ತ್ ಇಂಡಿಯಾ, ವೆಲ್ತ್ ಇಂಡಿಯಾ ಟ್ರಸ್ಟ್ ಮಾಡಿಕೊಡಬೇಕು. ದುಡಿಯುವ ಕೈಗಳು ಕಡಿಮೆಯಾಗುತ್ತಿದ್ದು, ಯಾಮಾರಿಸುವ ಕೈಗಳು ಹೆಚ್ಚಾಗುತ್ತಿರುವುದರಿಂದ ಎಚ್ಚರಿಕೆಯಿಂದ ಉದ್ಯಮ ನಡೆಸಬೇಕು ಎಂದರು.

    ಮಹಿಳಾ ಸಂಘಗಳು ಉಳಿತಾಯ ಹಣವನ್ನು ಡಿಸಿಸಿ ಬ್ಯಾಂಕಿನಲ್ಲಿಟ್ಟು, ಉದ್ಯಮ ಸ್ಥಾಪಿಸಲು ಮುಂದೆ ಬಂದರೆ 20 ಲಕ್ಷ ರೂ. ಸಾಲ, ವಿಮೆ ದೊರಕಿಸಿಕೊಡಲಾಗುವುದು. ನಬಾರ್ಡ್‌ನಿಂದ ಅಗತ್ಯ ತರಬೇತಿ ಸಹ ಕೊಡಿಸಲಾಗುವುದು. ಗುಣಮಟ್ಟದ ಉತ್ಪನ್ನ ತಯಾರಿಸಿದರೆ ದೊಡ್ಡ ಕಂಪನಿಗಳ ಬ್ರಾಂಡ್ ಖರೀದಿಸುವುದಕ್ಕೆ ಗ್ರಾಹಕರು ಹೋಗುವುದಿಲ್ಲ. ನಗರ, ಪಟ್ಟಣ, ಹೋಬಳಿ ಕೇಂದ್ರಗಳಲ್ಲಿ ಮನೆಮನೆಗೆ ಉತ್ಪನ್ನ ತಲುಪಿಸಲು ಯತ್ನಿಸಬೇಕು. ಟ್ರಸ್ಟ್ ಜತೆಗೂಡಿ ಇದನ್ನು ಆಂದೋಲನವಾಗಿಸಿದರೆ ಕ್ರಾಂತಿಕಾರಿ ಬೆಳವಣಿಗೆಯಾಗುತ್ತದೆ ಎಂದರು.

    ಟ್ರಸ್ಟ್ ಸದಸ್ಯ ಅನಂತಕೀರ್ತಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಕಷ್ಣೇಗೌಡ, ಶಶಿಧರ್, ಜಯಂತ್, ಶ್ರೀಧನ್ಯ ತಂಡದ ಲಲಿತಮ್ಮ, ಕಾರ್ಯದರ್ಶಿ ರುಕ್ಮಿಣಿಯಮ್ಮ, ಚನ್ನರಾಯಸ್ವಾಮಿ ಮಹಿಳಾ ಸ್ವಸಹಾಯ ಸಂದ ಸಾವಿತ್ರಮ್ಮ, ಮಂಜುಳಾ, ಪ್ರಮೀಳಮ್ಮ, ಲಕ್ಷ್ಮೀ, ನಾಗಲಕ್ಷ್ಮೀ, ಕೋಮಲಾ ಇತರರಿದ್ದರು.

    ನಗರದ ಮಹಿಳಾ ಸಂಗಳ ಉತ್ಪನ್ನಗಳನ್ನು ‘ಒಂದೇ ಹೆಸರು ಒಂದೇ ಟೇಸ್ಟ್’ಘೋಷವಾಕ್ಯದೊಂದಿಗೆ ‘ಶ್ರೀಧನ್ಯ’ ಬ್ರಾಂಡ್‌ನಡಿ ಆಧುನಿಕ ಪ್ಯಾಕಿಂಗ್‌ನೊಂದಿಗೆ ವಾರುಕಟ್ಟೆಗೆ ಒದಗಿಸುತ್ತಿದ್ದೇವೆ. ವಿದೇಶಿ ಕಂಪನಿಗಳ ಆರ್ಭಟ ಕಡಿಮೆ ಮಾಡಿ, ಮನೆಗೊಂದು ಉದ್ಯಮಿ, ಊರಿಗೊಂದು ಉದ್ಯಮ ಸ್ಥಾಪಿಸುವ ಧ್ಯೇಯದೊಂದಿ ಟ್ರಸ್ಟ್ ಕೆಲಸ ವಾಡುತ್ತಿದೆ. ರಾಗಿ ವಾಲ್ಟ್, ಸಾಂಬಾರ್ ಪುಡಿ, ಚಟ್ನಿಪುಡಿ, ಧನಿಯಾ ಪುಡಿ ಸೇರಿ 10 ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲಾಗಿದೆ.
    ಮನೋಜ್, ಕಾರ್ಯದರ್ಶಿ, ಹೆಲ್ತ್ ಇಂಡಿಯಾ ವೆಲ್ತ್ ಇಂಡಿಯಾ ಟ್ರಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts