More

    ಅತ್ತ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದ ಕಾರ್ಖಾನೆ ಬಂದ್​; ಇತ್ತ ಬೇಕಾಬಿಟ್ಟಿಯಾಗಿ ಸಾಲ ನೀಡಿದ್ದ ಅಧಿಕಾರಿ ಸಸ್ಪೆಂಡ್..​

    ಬಾಗಲಕೋಟೆ: ಅತ್ತ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದ ಕಾರ್ಖಾನೆ ಬಂದ್​ ಆಗಿದ್ದರೆ, ಇತ್ತ ಆ ಕಾರ್ಖಾನೆಗೆ ಬೇಕಾಬಿಟ್ಟಿಯಾಗಿ ಸಾಲ ನೀಡಿದ್ದ ಅಧಿಕಾರಿ ಅಮಾನತಾಗಿದ್ದಾರೆ. ಸಕ್ಕರೆ ಕಾರ್ಖಾನೆ ಅಧ್ಯಕ್ಷ ಹಾಗೂ ಬ್ಯಾಂಕ್​ನ ಕಿರಿಯ ವ್ಯವಸ್ಥಾಪಕರ ಅವ್ಯವಹಾರ ಈ ಮೂಲಕ ಸಾಬೀತಾಗಿದೆ.

    ಬಾಗಲಕೋಟೆಯ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ಅವರು ಡಿಸಿಸಿ ಬ್ಯಾಂಕ್​ನಿಂದ 2018ರಲ್ಲಿ 12 ಕೋಟಿ ರೂ. ಸಾಲ ಪಡೆದಿದ್ದರು. ಬ್ಯಾಂಕ್​ನ ಕಿರಿಯ ವ್ಯವಸ್ಥಾಪಕ ಎ.ಬಿ. ಪಾಟೀಲ್ ನಿಯಮ ಪಾಲಿಸದೆ ಬೇಕಾಬಿಟ್ಟಿಯಾಗಿ ಸಾಲದ ಹಣ ಬಿಡುಗಡೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

    ಇದನ್ನೂ ಓದಿ: ನಿವೃತ್ತ ಎಸಿಪಿಗೇ ಮೋಸ; ನಿರ್ಮಾಣ್​ ಶೆಲ್ಟರ್ಸ್​ ವಿರುದ್ಧ ವಂಚನೆ ಆರೋಪ..

    ಈ ಬಗ್ಗೆ ತನಿಖೆ ನಡೆಸಿದ್ದ ಬ್ಯಾಂಕ್​ ಅಧಿಕಾರಿಗಳು ಸಾಲ ಮಂಜೂರಾತಿ ಕರಾರುಗಳನ್ನು ಉಲ್ಲಂಘನೆ ಮಾಡಿ ಎ.ಬಿ.ಪಾಟೀಲ್​ ಸಾಲ‌ ಬಿಡುಗಡೆ ಮಾಡಿದ್ದು, ಅತ್ತ ಸಾಲ ಪಡೆದವರು ಅದನ್ನು ನಿಗದಿತ ಉದ್ದೇಶಕ್ಕೂ ಬಳಸಿರಲಿಲ್ಲ. ಈ ಮೂಲಕ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುವಲ್ಲಿ ಪಾಟೀಲ್ ವಿಫಲರಾಗಿದ್ದಾರೆ ಎಂದು ನಿರ್ಣಯಿಸಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಡಿಸಿಸಿ ಬ್ಯಾಂಕ್​ ಸಿಇಒ ಆದೇಶ ಹೊರಡಿಸಿದ್ದಾರೆ.

    ಮತ್ತೊಂದೆಡೆ ನಷ್ಟ ಎಂದು ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಬಂದ್ ಮಾಡಲಾಗಿದ್ದು, ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡುವಂತೆ ಕಾರ್ಮಿಕರು 55 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.

    ಸ್ಟಾರ್ ನಟನ ತೋಟದಲ್ಲಿ ಅಪ್ರಾಪ್ತ ವಯಸ್ಸಿನವಳ ಮೇಲೆ ಅತ್ಯಾಚಾರ; ಪೋಕ್ಸೊ ಕಾಯ್ದೆಯಡಿ ಆರೋಪಿಯ ಬಂಧನ..

    ಮಾತು ಬರದವಳನ್ನೂ ಬಿಡದ ಕಾಮುಕ; ಮೂಗಿಯನ್ನು ಅತ್ಯಾಚಾರ ಮಾಡಿದ ಚಾಲಕ ಒಂದೇ ಗಂಟೆಯಲ್ಲೇ ಸಿಕ್ಕಿಬಿದ್ದ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts