More

    ಡಿಸಿ ಕಚೇರಿ ಎದುರು ಮಹಿಳೆಯರ ಪ್ರತಿಭಟನೆ

    ಬೆಳಗಾವಿ: ಲಾಕ್‌ಡೌನ್‌ನಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಅಲ್ಲದೆ, ಸರ್ಕಾರಿ ಯೋಜನೆಗಳೂ ಸಹ ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಹೀಗಾಗಿ ಅಧಿಕಾರಿಗಳು ನಿಜವಾದ ಶ್ರಮಿಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿ ಕಾಗವಾಡ ತಾಲೂಕಿನ ಶೇಡಬಾಳ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.

    ಸಣ್ಣ-ಪುಟ್ಟ ಉದ್ಯೋಗ ಮಾಡಲು ಸ್ವ-ಸಹಾಯ ಸಂಘಗಳು ಹಾಗೂ ಬ್ಯಾಂಕ್, ಸೊಸೈಟಿಗಳಿಂದ ಸಾಲ ಪಡೆದಿದ್ದೇವೆ. ಲಾಕ್‌ಡೌನ್‌ನಿಂದ ಸಾಲ ಮರುಪಾವತಿ ಮಾಡುವುದು ಕಷ್ಟವಾಗುತ್ತಿದೆ. ಸರ್ಕಾರ ನಮಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಮಾದೇವಿ ಮಾಕಣ್ಣವರ, ಶೋಭಾ ಮುಂದೆ, ಸುರೇಖಾ ಯಂಕಟಪ್ಪಗೋಳ, ದುಂಡವ್ವ ಮುನ್ನೂರು, ಪಾರ್ವತಿ ಮಗದುಮ್ಮ, ಯಲ್ಲವ್ವ ನಾಯಕ, ಶಾಂತಾ ಕೌದಿ, ಮಾಲಾ ಕಾತಾರಾಳೆ, ಪಾರ್ವತಿ ನಾಯಕ, ಕಲಾವತಿ ಮಾಳಗಿ, ಸುಜಾತಾ ಕಟಗೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts