More

    ಅಂಗವಿಕಲರಿಗೆ ಉದ್ಯೋಗ ಖಾತ್ರಿ ; ಉದ್ಯೋಗ ಚೀಟಿ ನೀಡಲು ಡಿಸಿ ಲತಾ ಸೂಚನೆ

    ಚಿಕ್ಕಬಳ್ಳಾಪುರ : ಉದ್ಯೋಗಖಾತ್ರಿ ಯೋಜನೆಯಲ್ಲಿ ಅಂಗವಿಕಲರು ಸಹ ಉದ್ಯೋಗ ಪಡೆದು ಸ್ವಾವಲಂಬಿ ಜೀವನ ನಡೆಸಬಹುದಾಗಿದೆ, ಈ ನಿಟ್ಟಿನಲ್ಲಿ 18 ವರ್ಷ ಮೇಲ್ಪಟ್ಟ ಅಂಗವಿಕಲರಿಗೆ ಉದ್ಯೋಗ ಚೀಟಿ ನೀಡಲು ಎಲ್ಲ ತಾಲೂಕುಗಳಲ್ಲಿ ಅಭಿಯಾನ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು.

    ನರೇಗಾ ಯೋಜನೆಯಲ್ಲಿ ಅಂಗವಿಕಲರಿಗೆ ಉದ್ಯೋಗ ಚೀಟಿ ನೀಡುವ ಕುರಿತು ಶುಕ್ರವಾರ ತಾಪಂ ಇಒಗಳೊಂದಿಗೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ವಿಡಿಯೋ ಸಂವಾದ ನಡೆಸಿದ ಅವರು, ಅಂಗವಿಕಲರಿಗೆ ಪ್ರತ್ಯೇಕವಾಗಿ ಉದ್ಯೋಗ ಚೀಟಿ ನೀಡಿ, ಒಂದು ಆರ್ಥಿಕ ವರ್ಷಕ್ಕೆ 100 ದಿನಗಳ ಉದ್ಯೋಗ ಒದಗಿಸಲಾಗುತ್ತದೆ. ಅವರು ನಿರ್ವಹಿಸ ಬೇಕಾದ ಕೆಲಸಗಳನ್ನು ಅಂಗವೈಕಲ್ಯದ ಪ್ರಮಾಣಗಳನ್ನು ಆಧರಿಸಿ ಹಾಗೂ ಹಿರಿಯ ನಾಗರಿಕರ ಶಕ್ತಿ, ಸಾಮರ್ಥ್ಯಗಳಿಗೆ ಅನುಗುಣವಾಗಿ ವಹಿಸಲಾಗುತ್ತದೆ. ಇದಕ್ಕಾಗಿಯೇ ಪ್ರತ್ಯೇಕ ಮಾರ್ಗಸೂಚಿ ಇದೆ ಎಂದು ತಿಳಿಸಿದರು.

    ಅಂಗವಿಕಲರು ಕಾರ್ಯ ಕ್ಷೇತ್ರದಲ್ಲಿ ಕಾಯಕ ಬಂಧುವಾಗಿ ಕೆಲಸ ನಿರ್ವಹಿಸಲು ವಿಶೇಷ ಆದ್ಯತೆ ನೀಡಲಾಗಿದೆ. ಇತರ ಕೆಲಸಗಾರರಿಗೆ ಕುಡಿಯುವ ನೀರು, ಮಹಿಳಾ ಕೆಲಸಗಾರರ ಮಕ್ಕಳಿಗೆ ಲಾಲನೆ ಪಾಲನೆ, ಗಿಡ ನೆಡುವುದು, ಬಾಂಡಲಿಗೆ ಜಲ್ಲಿ, ಮಣ್ಣು ತುಂಬುವುದು, ಹೊಸ ಕಟ್ಟಡಗಳಿಗೆ ನೀರು ಹಾಕುವುದು, ಮಣ್ಣು ಸರಿಸುವುದು, ಬಂಡಿಂಗ್ ಮಾಡುವುದು ಹಾಗೂ ತ್ಯಾಜ್ಯಗಳನ್ನು ಬಾಂಡಲಿಗೆ ಹಾಕುವುದು ಸೇರಿ ಚಿಕ್ಕಪುಟ್ಟ ಕೆಲಸಗಳನ್ನು ವಹಿಸಬೇಕೆಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು. ಜಿಲ್ಲಾ ಮಕ್ಕಳ ರಕ್ಷಣ ಘಟಕದ ಅಧಿಕಾರಿ ಉಸ್ಮಾನ್ ಮತ್ತಿತರರು ಇದ್ದರು.

    ದುರ್ಬಲ ಗುಂಪುಗಳಿಗೆ ಸಾಮಾಜಿಕ ಸಂರಕ್ಷಣೆ: ಗ್ರಾಮೀಣ ಬಡ ಕುಟುಂಬಗಳ ಜೀವನೋಪಾಯದ ಭದ್ರತೆ ಒದಗಿಸುವುದು ಉದ್ಯೋಗ ಖಾತ್ರಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರ ಜತೆಗೆ ಅಂಗವಿಕಲರು, ಬುಡಕಟ್ಟು ಜನಾಂಗ, ವಿಶೇಷ ಸ್ಥಿತಿಯಲ್ಲಿರುವ ಮಹಿಳೆಯರು, 65 ವರ್ಷ ಮೀರಿದ ನಾಗರಿಕರು, ಎಚ್‌ಐವಿ ಪೀಡಿತರು, ಆಂತರಿಕವಾಗಿ ಸ್ಥಳಾಂತರಿಸಲ್ಪಟ್ಟ ಜನರು ಸೇರಿ ವಿವಿಧ ದುರ್ಬಲ ಗುಂಪುಗಳಿಗೆ ಸಾಮಾಜಿಕ ಸಂರಕ್ಷಣೆ ಒದಗಿಸಿ, ಬದುಕಿನ ಬವಣೆ ನೀಗಿಸಲು ಹಲವು ಅವಕಾಶ ಕಲ್ಪಿಸಲಾಗಿದೆ ಎಂದು ಲತಾ ತಿಳಿಸಿದರು.

    ಹೆಚ್ಚಿನ ಜನರಿಗೆ ಉದ್ಯೋಗ: ಅಂಗವಿಕಲರಿಗೆ ಉದ್ಯೋಗ ಖಾತ್ರಿ ; ಉದ್ಯೋಗ ಚೀಟಿ ನೀಡಲು ಡಿಸಿ ಲತಾ ಸೂಚನೆಜಿಲ್ಲಾದ್ಯಂತ 17,610 ಮಂದಿ 18 ವರ್ಷ ಮೇಲ್ಟಟ್ಟ ಅಂಗವಿಕಲರನ್ನು ಗುರುತಿಸಲಾಗಿದೆ. ಇದರಲ್ಲಿ ದೃಷ್ಟಿದೋಷ, ಬುದ್ಧಿಮಾಂಧ್ಯ ಸೇರಿ ಇತರರನ್ನು ಹೊರತುಪಡಿಸಿದರೆ ಸುಮಾರು 10 ಸಾವಿರಕ್ಕೂ ಅಧಿಕ ಮಂದಿಗೆ ನರೇಗಾದಡಿ ಉದ್ಯೋಗ ನೀಡಬಹುದಾಗಿದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಜಾರ್ಬ್ ಕಾರ್ಡ್ ನೀಡಲು ಕ್ರಮ ಜರುಗಿಸಲಾಗುತ್ತದೆ ಎಂದು ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts