More

    ಸಾಮಾಜಿಕ ಮಾಧ್ಯಮಗಳಿಗೆ “ಫ್ರೀಪಾಸ್​” ದಿನಗಳು ಮುಗಿದಿವೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅಭಿಮತ

    ನವದೆಹಲಿ: ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ “ಫ್ರೀಪಾಸ್‌”ನ ದಿನಗಳು ಮುಗಿದಿವೆ. ಭಾರತ ಮಾತ್ರವಲ್ಲ, ವಿಶ್ವದಾದ್ಯಂತ ಕಟ್ಟುನಿಟ್ಟಾದ ಹೊಣೆಗಾರಿಕೆಯನ್ನು ಜಾರಿಗೊಳಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

    ಇದನ್ನೂ ಓದಿ: ಲಕ್ಷ ಕೋಟಿ ರೂ. ಬರೆ: ಈ ವರ್ಷ 50 ವರ್ಷಗಳಲ್ಲೇ ಅತ್ಯಂತ ಭೀಕರ ಬರ
    ಅಮೆರಿಕಾದ ಕಾನೂನು ಘಟಕ 40 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮೆಟಾ(ಫೇಸ್‌ಬುಕ್) ವಿರುದ್ಧ ಹೂಡಿರುವ ಮೊಕದ್ದಮೆಗಳ ಹಿನ್ನೆಲೆಯಲ್ಲಿ ಮಾದ್ಯಮದ ಜತೆ ಮಾತನಾಡಿ, ಸಾಮಾಜಿಕ ಮಾದ್ಯಮವು ವಿಶ್ವದಾದ್ಯಂತ ಭದ್ರವಾದ ನೆಲೆ ಕಂಡುಕೊಂಡಿದೆ. ಈ ವೇದಿಕೆಗಳ ಕಾರ್ಯವೈಖರಿ ಮತ್ತು ಇವುಗಳಲ್ಲಿನ ನಕಾರಾತ್ಮಕ ಅಂಶಗಳತ್ತ ನಮ್ಮ ಕಣ್ಣುಗಳನ್ನು ತೆರೆಯುವ ಸಮಯ ಬಂದಿದೆ ಎಂದರು.

    ಪ್ರಪಂಚವು ಈ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಅನುಮತಿ ಕೊಟ್ಟು ಅವು ಸಮಾಜದ ಮೇಲೆ ಸವಾರಿ ನಡೆಸುವಂತಾಗಿದೆ. ಯುಎಸ್ ಕ್ರಮವು ನಮ್ಮನ್ನೂ ಮರುಪರಿಶೀಲಿಸುವಂತೆ ಮಾಡಿದೆ. ಸಾಮಾಜಿಕ ಪ್ಲಾಟ್‌ಫಾರ್ಮ್‌ಗಳು ಹೆಚ್ಚು ಜವಾಬ್ದಾರಿಯುತವಾಗಿರಬೇಕು. ಯಾವುದೇ ವಿಷಯವನ್ನು ಹೋಸ್ಟ್ ಮಾಡಲು ಯಾರಿಗೆ ಅನುಮತಿಸಲಾಗಿದೆ? ಹೀಗಾಗಿ ಇವುಗಳಿಗೆ ನೀಡಿರುವ ಫ್ರೀಪಾಸ್ ಮತ್ತು ವಿನಾಯಿತಿಯ ದಿನಗಳು ಮುಗಿದಿವೆ ಎಂಬುದು ನನ್ನ ಅಭಿಪ್ರಾಯ. ಇದು ನಮ್ಮ ಸರ್ಕಾರದ ಉದ್ದೇಶವೂ ಆಗಿದೆ ಎಂದು ಅವರು ಹೇಳಿದರು.

    ಅಮೆರಿಕಾದ ಫೆಡರಲ್ ಲಾಸೂಟ್​ ಮೊಕದ್ದಮೆಗಳು ಸಾಮಾಜಿಲ ಮಾಧ್ಯಮಗಳ ವ್ಯಾಪಾರಿ ಮನೋಭಾವನೆಗಳನ್ನು ಬಯಲಿಗೆಳೆದಿವೆ. ಬಳಕೆದಾರರ ಮಾನಸಿಕ ಆರೋಗ್ಯಕ್ಕೆ ಹಾನಿಯಾಗಿದ್ದರೂ ಈ ವೇದಿಕೆಗಳಲ್ಲಿ ಜನರು ಕಳೆಯುವ ಸಮಯವನ್ನು ಹೆಚ್ಚಿಸಲಾಗುತ್ತಿದೆ. ಗರಿಷ್ಠ ವ್ಯಾಪಾರೀಕರಣದ ವಿನ್ಯಾಸಗಳನ್ನು ರಚಿಸುವ ಮೂಲಕ “ಶೋಷಣೆ” ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ ಎಂದು ವಿವರಿಸಿದರು.

    “ಮೆಟಾದ ಸಾಮಾಜಿಕ ಮಾಧ್ಯಮ ವೇದಿಕೆಗಳು ಯುವಜನರ ಬಳಕೆಯು ಖಿನ್ನತೆ, ಆತಂಕ, ನಿದ್ರಾಹೀನತೆ, ಶಿಕ್ಷಣ ಮತ್ತು ದೈನಂದಿನ ಜೀವನದ ಮೇಲೆ ಹಸ್ತಕ್ಷೇಪ ಮಾಡುತ್ತಿದೆ. ಇಂತಹ ಅನೇಕ ನಕಾರಾತ್ಮಕ ಫಲಿತಾಂಶಗಳನ್ನು ಸಂಶೋಧನೆ ತೋರಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಈ ವಾರ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ರಿಲೀಸ್​ ಆಗಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts