More

    ಕತ್ತಲೆ ಇರುವಾಗಲೇ ಹಗಲಿನಂತಹ ಬೆಳಕು!

    ಕೆ.ಆರ್.ಪೇಟೆ: ತಾಲೂಕಿನ ಹೆರಗನಹಳ್ಳಿ ಗ್ರಾಮದಲ್ಲಿ ಭಾನುವಾರ ಕತ್ತಲಿರುವಾಗಲೇ ಆಕಾಶದಲ್ಲಿ ದಿಢೀರ್ ಬೆಳಕು ಮೂಡಿ ಅಚ್ಚರಿ ತಂದಿರುವ ಪ್ರಸಂಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಭಾನುವಾರ ಸಂಜೆ ಎಂದಿನಂತೆ ಸೂರ್ಯಾಸ್ತವಾಗಿ ಆಗಸದಲ್ಲಿ ಚಂದ್ರನ ಪ್ರವೇಶವಾಯಿತು. ಬೀದಿ ದೀಪಗಳು ಆನ್ ಆದವು. ಗ್ರಾಮಸ್ಥರು ಮನೆಗಳನ್ನು ಸೇರಿದರು. ಆದರೆ, 7 ಗಂಟೆ ಸುಮಾರಿನಲ್ಲಿ ಇದಕ್ಕಿದ್ದಂತೆ ಆಕಾಶದಲ್ಲಿ ಬೆಳಕು ಮೂಡಿ ಮಧ್ಯಾಹ್ನದ ಸೂರ್ಯನ ಪ್ರಕಾಶಮಾನದಷ್ಟು ಬೆಳಕು ಬಂದಿತು.

    ಇದನ್ನೂ ಓದಿ  ಈಶಾನ್ಯ ರಾಜ್ಯ ಮಣಿಪುರದಲ್ಲಿ ಭಾರಿ ಭೂಕಂಪ

    ಮನೆಯಿಂದ ಹೊರಗಡೆ ಬಂದ ಗ್ರಾಮಸ್ಥರು ಅಚ್ಚರಿಗೊಳಗಾದರು. ಸುಮಾರು 5 ನಿಮಿಷಗಳ ಕಾಲ ಬೆಳಕು ಹಾಗೆಯೇ ಇದ್ದು ನಂತರ ಕತ್ತಲು ಆವರಿಸಿತು. ಗ್ರಾಮದ ಯುವಕರು ಆ ದೃಶ್ಯವನ್ನು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದು, ಅದು ವೈರಲ್ ಆಗಿದೆ.

    ಇದೇ ರೀತಿಯ ಬೆಳಕು ಅಕ್ಕಪಕ್ಕದ ಗ್ರಾಮಗಳಲ್ಲೂ ಕಾಣಿಸಿಕೊಂಡಿದೆ. ಬಸ್ತಿ ಹೊಸಕೋಟೆ, ಪಾಂಡವಪುರದ ನಲ್ಲೆಗೆರೆ ಸೇರಿ ಇತರ ಗ್ರಾಮಗಳಲ್ಲೂ ಬೆಳಕು ಮೂಡಿದೆ.

    ‘ದಿಢೀರ್ ಬೆಳಕು ಕಾಣಿಸಿಕೊಂಡಿದ್ದು ಆಶ್ಚರ್ಯವಾಯಿತು. ಉಲ್ಕೆಗಳ ನಡುವೆ ಡಿಕ್ಕಿ ಸಂಭವಿಸಿದ್ದರಿಂದ ಬೆಳಕು ಮೂಡಿರಬಹುದು’ ಎಂದು ಗ್ರಾಮಸ್ಥ ಧರ್ಮಚಂದ್ರ ಎಂಬುವವರು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದರು. ಮೂರು ದಿನಗಳ ಹಿಂದೆ ಮಧ್ಯಾಹ್ನದ ಹೊತ್ತು ಭಾರಿ ಶಬ್ದ ಕೇಳಿಸಿತ್ತು. ವಾರದಲ್ಲಿ ಇದು ಎರಡನೇ ಅಚ್ಚರಿಯಾಗಿದೆ.

    ತಬ್ಲಿಘಿಗಳ ವಿರುದ್ಧ ಚಾರ್ಜ್‌ಶೀಟ್ ಹಾಕಲು ಪೊಲೀಸರ ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts