More

    ರಕ್ಷಣೆಗಾಗಿ ಐಎಸ್​ಐ ಮೊರೆ ಹೋದ ಭೂಗತ ಪಾತಕಿ ದಾವೂದ್​? ಭಾರತಕ್ಕೆ ಹಸ್ತಾಂತರಿಸುತ್ತಾ ಪಾಕ್​?

    ನವದೆಹಲಿ: ಭೂಗತ ಪಾತಕಿ, 1993 ಮುಂಬೈ ದಾಳಿಯ ಸೂತ್ರಧಾರ, ಭಾರತದ ಮೋಸ್ಟ್​ ವಾಂಟೆಡ್​ ದಾವೂದ್​ ಇಬ್ರಾಹಿಂ ತನ್ನ ನೆಲದಲ್ಲಿಯೇ ಇದ್ದಾನೆಂದು ಪಾಕಿಸ್ತಾನ ಒಪ್ಪಿಕೊಂಡಿದೆ.

    ಜತೆಗೆ, ಆತನ ಆಸ್ತಿ ಹಾಗೂ ಬ್ಯಾಂಕ್​ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ವಿಶ್ವ ಆರ್ಥಿಕ ಕಾರ್ಯಪಡೆಗೆ ಮಾಹಿತಿ ನೀಡಿದೆ. ಇದಲ್ಲದೇ, ಇನ್ನೂ 88 ಉಗ್ರ ಸಂಘಟನೆಗಳನ್ನು ನಿಷೇಧಿಸಿರುವುದಾಗಿಯೂ ತಿಳಿಸಿದೆ.

    ಇದನ್ನೂ ಓದಿ; ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್ ಸಾವು? ಇನ್ನು ಸಹೋದರಿಯದ್ದೇ ಆಧಿಪತ್ಯ? 

    ಕರಾಚಿಯ ಕ್ಲಿಪ್ಟನ್​ ಪ್ರದೇಶದಲ್ಲಿರುವ ಸೇನಾ ವಸತಿಗೃಹಗಳ ಸಮುಚ್ಚಯದಲ್ಲಿಯೇ ದಾವೂದ್​ ನೆಲೆಸಿದ್ದಾನೆ. ಆತನ ವಿಳಾಸ ಕರಾಚಿಯದ್ದೇ ಆಗಿದೆ ಎಂದು ಪಾಕ್ ಸರ್ಕಾರ ಹೇಳಿದೆ. ಈ ನಡೆ ಸಹಜವಾಗಿಯೇ ದಾವೂದ್​ಗೆ ಸಂಕಷ್ಟಕ್ಕೆ ಈಡುಮಾಡಿದೆ.

    ತನಗೆ ನೆರವು ನೀಡುವಂತೆ ಇದೀಗ ದಾವೂದ್​ ಪಾಕ್​ ಬೇಹುಗಾರಿಕಾ ಸಂಸ್ಥೆ ಐಎಸ್​ಐ ಮೊರೆ ಹೋಗಿದ್ದಾನೆ. ಕೆಲ ಸೇನಾಧಿಕಾರಿಗಳನ್ನು ಸಂಪರ್ಕಿಸಿದ್ದಾನೆ ಎಂದು ಹೇಳಲಾಗಿದೆ. ಈತನ ಮನೆ ಸಮೀಪದಲ್ಲಿ ಸಹೋದರ ಅನೀಸ್​ ಇಬ್ರಾಹಿಂ ಹಾಗೂ ಸಹೋದರೆ ನೂರಾ ಇಬ್ರಾಹಿಂ ಕೂಡ ನೆಲೆಸಿದ್ದಾರೆ. ಇವರಿಗೂ ಕೂಡ ದಾವೂದ್​ ಹಲವು ಬಾರಿ ಕರೆ ಮಾಡಿದ್ದಾನೆ ಎಂದು ಗೊತ್ತಾಗಿದೆ.

    ಇದನ್ನೂ ಓದಿ; ಮಾವನ ಜತೆ ಸೇರಿ ಡಕಾಯಿತಿ ಮಾಡಿದ ಸಬ್​ ಇನ್​ಸ್ಪೆಕ್ಟರ್; 26.50 ಲಕ್ಷ ರೂ. ದರೋಡೆ ಮಾಡಿದ್ದವರ ಸೆರೆ 

    ಈತನ ಮನೆಯಿರುವ ಪ್ರದೇಶ ಸೇನಾ ವಸತಿ ಪ್ರಾಧಿಕಾರಕ್ಕೆ ಸೇರಿದ್ದಾಗಿದೆ. ಹಿರಿಯ ಸೇನಾಧಿಕಾರಿಗಳು ಇಲ್ಲಿ ನೆಲೆಸಿದ್ದಾರೆ. ಈತನ ಮನೆಯ ಸುತ್ತ ಭಾರಿ ಬಿಗಿಭದ್ರತೆ ಒದಗಿಸಲಾಗಿದೆ. ಕರಾಚಿಯಲ್ಲಿ ಅತ್ಯಂತ ಐಷಾರಾಮಿ ಹಾಗೂ ಸುರಕ್ಷಿತ ಪ್ರದೇಶವೂ ಇದಾಗಿದೆ.

    ಈತ ಕರಾಚಿಯಲ್ಲಿಯೇ ಇದ್ದಾನೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ ಒಪ್ಪಿಕೊಂಡಿರುವುದರಿಂದ ಪಾಕ್​​ ಮೇಲೆ ಒತ್ತಡ ಹೆಚ್ಚಾಗಿದೆ. ಹೀಗಾಗಿಈತನ ವಿರುದ್ಧ ಕ್ರಮಕ್ಕಾಗಿ ಭೂಗತ ಪಾತಕಿಯನ್ನು ಭಾರತಕ್ಕೆ ಹಸ್ತಾಂತರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

    ಮೆಟ್ರೋ ರೈಲು ಶುರುವಾಗುತ್ತೆ, ಶಾಲಾ- ಕಾಲೇಜುಗಳು ಮುಚ್ಚಿರುತ್ತೆ; ಅನ್​ಲಾಕ್​ 4.0 ಹೀಗಿರುತ್ತೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts