More

    ಡೇವಿಡ್ ವಾರ್ನರ್ ತಲೆದಂಡ; ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಕೇನ್ ವಿಲಿಯಮ್ಸನ್ ನೂತನ ನಾಯಕ

    ನವದೆಹಲಿ: ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿದಿರುವ ಸನ್‌ರೈಸರ್ಸ್‌ ತಂಡ ಅದೃಷ್ಟದ ಹುಡುಕಾಟದೊಂದಿಗೆ ತಂಡದ ನಾಯಕತ್ವವನ್ನೇ ಬದಲಾಯಿಸಿದೆ. ಸ್ಫೋಟಕ ಆಟವನ್ನೇ ಮರೆತಿರುವ ಡೇವಿಡ್ ವಾರ್ನರ್ ನಾಯಕತ್ವದಿಂದ ವಜಾಗೊಂಡಿದ್ದು, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ತಂಡದ ಹೊಸ ನಾಯಕರಾಗಿ ನೇಮಕಗೊಂಡಿದ್ದಾರೆ. ಉಳಿದ 8 ಲೀಗ್ ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸುವ ಹೊಣೆಯನ್ನು ವಿಲಿಯಮ್ಸನ್ ಹೊತ್ತುಕೊಂಡಿದ್ದಾರೆ. ರಾಜಸ್ಥಾನ ವಿರುದ್ಧದ ಪಂದ್ಯದಿಂದಲೇ ಕೇನ್ ನಾಯಕತ್ವ ನಿಭಾಯಿಸಲಿದ್ದಾರೆ ಎಂದು ಸನ್‌ರೈಸರ್ಸ್‌ ಫ್ರಾಂಚೈಸಿ ತಿಳಿಸಿದೆ.

    ತಂಡದ ವಿದೇಶಿ ಆಟಗಾರರ ಕಾಂಬಿನೇಷನ್ ಬದಲಾಯಿಸುವ ಸಲುವಾಗಿ ನಾಯಕತ್ವ ಬದಲಾವಣೆ ಮಾಡಲಾಗಿದೆ ಎಂದು ಸನ್‌ರೈಸರ್ಸ್‌ ತಿಳಿಸಿದೆ. ಇದರಿಂದ ವಾರ್ನರ್ ಆಡುವ 11ರ ಬಳಗದಿಂದಲೂ ಹೊರಬೀಳುವ ಸುಳಿವು ಬಿಟ್ಟುಕೊಟ್ಟಿದೆ. ಈ ಹಿಂದಿನ ಆವೃತ್ತಿಗಳಲ್ಲಿ ವಾರ್ನರ್ ಸಾರಥ್ಯದಲ್ಲೇ ತಂಡ ಉತ್ತಮ ಯಶಸ್ಸು ಕಂಡಿತ್ತು ಎಂಬುದನ್ನೂ ಫ್ರಾಂಚೈಸಿ ಒಪ್ಪಿಕೊಂಡಿದೆ. ಒಂದು ವೇಳೆ ವಾರ್ನರ್ ಹೊರಗುಳಿದರೆ ಇಂಗ್ಲೆಂಡ್‌ನ ಜೇಸನ್ ರಾಯ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ.

    ಚೆಂಡು ವಿರೂಪ ಪ್ರಕರಣದಿಂದಾಗಿ ವಾರ್ನರ್ 2018ರ ಐಪಿಎಲ್‌ನಿಂದ ಹೊರಗುಳಿದಾಗ ಕೇನ್ ವಿಲಿಯಮ್ಸನ್ ಅವರೇ ತಂಡದ ನಾಯಕತ್ವ ನಿರ್ವಹಿಸಿದ್ದರು. ಬಳಿಕ ವಾರ್ನರ್ ತಂಡಕ್ಕೆ ಮರಳಿದಾಗ ಕೇನ್ ನಾಯಕತ್ವ ಬಿಟ್ಟುಕೊಟ್ಟಿದ್ದರು. ಕೇನ್ ನಾಯಕತ್ವದಲ್ಲಿ ಸನ್‌ರೈಸರ್ಸ್‌ ತಂಡ ಇದುವರೆಗೆ 26 ಪಂದ್ಯ ಆಡಿದ್ದು, 14 ಜಯ, 12 ಸೋಲು ಕಂಡಿದೆ. 2016ರಲ್ಲಿ ಸನ್‌ರೈಸರ್ಸ್‌ ತಂಡ ವಾರ್ನರ್ ಸಾರಥ್ಯದಲ್ಲೇ ಐಪಿಎಲ್ ಪ್ರಶಸ್ತಿ ಜಯಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts