More

    ಪತ್ನಿಗೆ ತೆಲುಗಿನಲ್ಲಿ ರೊಮ್ಯಾಂಟಿಕ್​ ಸಂದೇಶ ರವಾನಿಸಿದ ಡೇವಿಡ್​ ವಾರ್ನರ್​!

    ನವದೆಹಲಿ: ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಪರ ಆಡುವ ಆಸ್ಟ್ರೆಲಿಯಾದ ಸ್ಫೋಟಕ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್​ ತೆಲುಗು ಭಾಷೆಯ ಬಗ್ಗೆ ವಿಶೇಷವಾದ ಪ್ರೀತಿ ಬೆಳೆಸಿಕೊಂಡಿದ್ದಾರೆ. ಹೀಗಾಗಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತೆಲುಗು ಸಿನಿಮಾಗಳ ಡೈಲಾಗ್​, ಹಾಡುಗಳಿಗೆ ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಈ ಮೂಲಕ ಆಂಧ್ರದ ಜನತೆಯ ಹೃದಯ ಗೆದ್ದಿರುವ ಡೇವಿಡ್​ ವಾರ್ನರ್​ ಇದೀಗ ಪತ್ನಿ ಕ್ಯಾಂಡಿಸ್​ ಹೃದಯವನ್ನು ಗೆಲ್ಲಲು ಕೂಡ ತೆಲುಗು ಭಾಷೆಯನ್ನೇ ಬಳಸಿಕೊಂಡಿರುವುದು ವಿಶೇಷವಾಗಿದೆ.

    ಪತ್ನಿ ಕ್ಯಾಂಡಿಸ್​ ಜತೆಗಿರುವ ತಮ್ಮ ಡಿಜಿಟಲ್​ ಕಾರ್ಟೂನ್​ ಸ್ಕೆಚ್​ ಒಂದನ್ನು ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ವಾರ್ನರ್​, ಅದಕ್ಕೆ ತೆಲುಗು ಭಾಷೆಯಲ್ಲೇ ರೊಮ್ಯಾಂಟಿಕ್​ ಕ್ಯಾಪ್ಶನ್​ ನೀಡಿರುವುದು ಕ್ರಿಕೆಟ್​ ಪ್ರೇಮಿಗಳ ಗಮನಸೆಳೆದಿದೆ. ‘ನೆನು ನಿನ್ನು ಪ್ರೇಮಿಸ್ತುನ್ನನು ಕ್ಯಾಂಡಿಸ್​ ವಾರ್ನರ್’​ ಎಂದು ತೆಲುಗಿನಲ್ಲಿ ಬರೆದುಕೊಂಡಿರುವ ವಾರ್ನರ್​, ಅದಕ್ಕೆ ವೈಫ್​, ಲವ್​, ಬೆಸ್ಟ್​ ಫ್ರೆಂಡ್ಸ್​ ಎಂಬ ಹ್ಯಾಷ್​ಟ್ಯಾಗ್​ ಕೂಡ ನೀಡಿದ್ದಾರೆ.

    ಇದನ್ನೂ ಓದಿ: PHOTO | ಟೀಮ್​ ಇಂಡಿಯಾ ಕ್ರಿಕೆಟಿಗರ ಅಭ್ಯಾಸಕ್ಕೆ ಹೊಸ ಕಿಟ್​

    ಮೂವರು ಹೆಣ್ಣು ಮಕ್ಕಳ ತಂದೆಯಾಗಿರುವ ವಾರ್ನರ್​, ಕಳೆದ ವರ್ಷ ಲಾಕ್​ಡೌನ್​ ಸಮಯದಲ್ಲೂ ವಿವಿಧ ವಿಡಿಯೋ, ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮೂಲಕ ಭಾರತೀಯ ಕ್ರಿಕೆಟ್​ ಪ್ರೇಮಿಗಳ ಗಮನಸೆಳೆದಿದ್ದರು. ಕರೊನಾದಿಂದಾಗಿ ಸ್ಥಗಿತಗೊಂಡ ಕಳೆದ ಐಪಿಎಲ್​ ಟೂರ್ನಿಯ ವೇಳೆ ಬ್ಯಾಟಿಂಗ್​ ಲಯ ಕಂಡುಕೊಳ್ಳಲು ಪರದಾಡುತ್ತಿದ್ದ ವಾರ್ನರ್​, ಸನ್​ರೈಸರ್ಸ್​ ತಂಡದ ನಾಯಕತ್ವವನ್ನು ಕೇನ್​ ವಿಲಿಯಮ್ಸನ್​ಗೆ ಬಿಟ್ಟುಕೊಟ್ಟಿದ್ದರು.

    ಟೆಸ್ಟ್​ ವಿಶ್ವಕಪ್​ ಫೈನಲ್​ಗೆ ಮುನ್ನ ಭಾರತ ತಂಡಕ್ಕೆ ಕಪಿಲ್​ ದೇವ್​ ಕಿವಿಮಾತು

    ಹಾಟ್ ಫೋಟೋಗಳ ಮೂಲಕ ಭರ್ಜರಿ ಸೌಂಡ್ ಮಾಡುತ್ತಿದ್ದಾರೆ ವಿಂಡೀಸ್ ಕ್ರಿಕೆಟಿಗನ ಪತ್ನಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts