More

    ವಿದಾಯದ ಸರಣಿಯಲ್ಲಿ ಸ್ಪೋಟಕ ಶತಕ ಸಿಡಿಸಿದ ವಾರ್ನರ್; ಮೊದಲ ಟೆಸ್ಟ್​ನಲ್ಲಿ ಪಾಕ್​ ವಿರುದ್ಧ ಮೇಲುಗೈ ಸಾಧಿಸಿದ ಆಸೀಸ್

    ಪರ್ತ್​: ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಡೇವಿಡ್​ ವಾರ್ನರ್​ ಸ್ಪೋಟಕ ಶತಕದ ಫಲವಾಗಿ ಆಸೀಸ್​ ತಂಡ ಎದುರಾಳಿ ತಂಡದ ವಿರುದ್ಧ ಮೇಲುಗೈ ಸಾಧಿಸಿದೆ.

    ಪರ್ತ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಆಸ್ಟ್ರೇಲಿಯಾ ತಂಡವು ಡೇವಿಡ್​ ವಾರ್ನರ್​ (164 ರನ್, 211 ಎಸೆತ, 16 ಬೌಂಡರಿ, 4 ಸಿಕ್ಸರ್) ಶತಕದ ಫಲವಾಗಿ ದಿನದಾಟದ ಅಂತ್ಯಕ್ಕೆ 5 ವಿಕೆಟ್​ ನಷ್ಟಕ್ಕೆ 346 ರನ್​​ಗಳಿಸಿದೆ.

    ಇದನ್ನೂ ಓದಿ: ಲೋಕಸಭೆ ಕಲಾಪ ವೇಳೆ ಭದ್ರತಾ ಲೋಪ; ಆರೋಪಿ ಮನೋರಂಜನ್ ಮನೆ ಪರಿಶೀಲಿಸಿದ ಗುಪ್ತಚರ ಅಧಿಕಾರಿಗಳು

    ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ವಾರ್ನರ್ ಕೇವಲ 125 ಎಸೆತಗಳಲ್ಲಿ ಶತಕ ಪೂರೈಸಿದರು. ಸೆಂಚುರಿ ಬಳಿಕ ಕೂಡ ಸ್ಪೋಟಕ ಇನಿಂಗ್ಸ್ ಮುಂದುವರೆಸಿದ ವಾರ್ನರ್ 211 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 16 ಫೋರ್​ಗಳೊಂದಿಗೆ 164 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

    ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡವು 5 ವಿಕೆಟ್ ಕಳೆದುಕೊಂಡು 346 ರನ್ ಕಲೆಹಾಕಿದೆ. ಕ್ರೀಸ್​ನಲ್ಲಿ ಮಿಚೆಲ್ ಮಾರ್ಷ್ (15) ಹಾಗೂ ಅಲೆಕ್ಸ್​ ಕ್ಯಾರಿ (14) ಇದ್ದು, 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಪಾಕಿಸ್ತಾನ್ ಪರ ಅಮೀರ್ ಜಮಾಲ್ 2 ವಿಕೆಟ್ ಪಡೆದರೆ, ಶಾಹೀನ್ ಶಾ ಅಫ್ರಿದಿ, ಖುರ್ರಂ ಶಹಜಾದ್ ಹಾಗೂ ಫಹೀಮ್ ಅಶ್ರಫ್ ತಲಾ ಒಂದು ವಿಕೆಟ್ ಕಬಳಿಸಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts