More

    ವಿಮಾನದಲ್ಲಿ ಪಿಸ್ತೂಲ್​ ಕಂಡು ಪ್ರಯಾಣಿಕ ಶಾಕ್: ಪಿಸ್ತೂಲ್​ಗೂ ಬ್ರಿಟನ್​ ಮಾಜಿ ಪ್ರಧಾನಿಗೂ ಇರೋ ಸಂಬಂಧವೇನು?

    ಲಂಡನ್​: ಬ್ರಿಟನ್​ನ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರ ಪಾಸ್​ಪೋರ್ಟ್​ ಮತ್ತು ಲೋಡೆಡ್​ ಪಿಸ್ತೂಲ್​ ಒಂದನ್ನು ವಿಮಾನದಲ್ಲಿ ಪ್ರಯಾಣಿಕರೊಬ್ಬರು ಪತ್ತೆ ಹಚ್ಚಿದ್ದು, ಕ್ಯಾಮರೂನ್​ ಅವರ ಬಾಡಿಗಾರ್ಡ್​ ಅವುಗಳನ್ನು ಮರೆತು ಹೋಗಿದ್ದ ಎಂದು ಬ್ರಿಟೀಷ್​ ಮಾಧ್ಯಮಗಳು ಬುಧವಾರ ವರದಿ ಮಾಡಿವೆ.

    ಬ್ರಿಟನ್​ ಮೆಟ್ರೋಪಾಲಿಟನ್​ ಪೊಲೀಸ್​ ಭದ್ರತಾ ಅಧಿಕಾರಿಯೊಂದಿಗೆ ನ್ಯೂಯಾರ್ಕ್​ನಿಂದ ಲಂಡನ್​ಗೆ ಮರಳುವಗ ಈ ಘಟನೆ ನಡೆದಿದೆ.

    ಟೇಕಾಫ್​ ಆಗಲು ಕಾಯುತ್ತಿದ್ದ ಬ್ರಿಟೀಷ್​ ಏರ್​ವೇಸ್​ ವಿಮಾನದಲ್ಲಿದ್ದ ಪ್ರಯಾಣಿಕನೊಬ್ಬ ಶೌಚಗೃಹದಲ್ಲಿದ ಗನ್ ಅನ್ನು​ ಪತ್ತೆ ಹಚ್ಚಿದ್ದಾನೆ. ಇದರಿಂದಾಗಿ ಕೆಲಕಾಲ ವಿಮಾನದಲ್ಲೇ ಗದ್ದಲ ಉಂಟಾಯಿತು. ಇದೇ ವೇಳೆ ವಿಮಾನದ ಕ್ಯಾಪ್ಟನ್​​ ಗನ್​ ಇರುವುದನ್ನು ಖಚಿತಪಡಿಸುತ್ತಿದ್ದಂತೆ ಮತ್ತಷ್ಟು ಗದ್ದಲಕ್ಕೆ ಎಡೆಮಾಡಿಕೊಟ್ಟಿತು ಎಂದು ಪ್ರಯಾಣಿಕರೊಬ್ಬರು ನೀಡಿದ ಹೇಳಿಕೆಯನ್ನು ಸನ್​ ನ್ಯೂಸ್​ಪೇಪರ್​ ವರದಿ ಮಾಡಿದೆ.

    ಕ್ಯಾಮರೂನ್​ ಅವರ ಭದ್ರತಾ ಅಧಿಕಾರಿ ಗನ್​ ಅನ್ನು ವಿಮಾನದೊಳಕ್ಕೆ ತಂದು ಮರೆತು ಹೋಗಿದ್ದಾರೆ. ಅದನ್ನು ಅವರಿಗೆ ಹಿಂದಿರುಗಿಸಲಾಗುವುದು ಎಂದು ವಿಮಾನದ ಕ್ಯಾಪ್ಟನ್​ ಹೇಳಿದರಾದರೂ ಅನೇಕ ಪ್ರಯಾಣಿಕರು ಇದನ್ನು ವಿರೋಧಿಸಿದರು. ಟೇಕಾಫ್​ ಆಗುವ ಮುನ್ನ ಗನ್​ ಅನ್ನು ತೆಗೆಯುವಂತೆ ಒತ್ತಾಯಿಸಿದರು.

    ಈ ಬಗ್ಗೆ ಮಾತನಾಡಿರುವ ಮೆಟ್ರೋಪಾಲಿಟನ್​ ಪೊಲೀಸ್​, ಈ ವಿಚಾರವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದು, ಆಂತರಿಕ ತನಿಖೆ ನಡೆಸುವುದಾಗಿ ತಿಳಿಸಿದ್ದು, ಭದ್ರತಾ ಅಧಿಕಾರಿಯನ್ನು ಸದ್ಯ ಕರ್ತವ್ಯದಿಂದ ತೆಗೆದು ಹಾಕಿರುವುದಾಗಿ ಮಾಹಿತಿ ನೀಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts