More

    ಜಿಪಂ ಕ್ಷೇತ್ರಗಳ ಸಂಖ್ಯೆ 29ಕ್ಕೆ ಅಂತಿಮ

    ಧನಂಜಯ ಎಸ್. ಹಕಾರಿ ದಾವಣಗೆರೆ: ದಾವಣಗೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆಯನ್ನು 29ಕ್ಕೆ ಅಂತಿಮಗೊಳಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

    ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯಿಸಿದೆ. ಈಗಾಗಲೇ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಜಿಪಂ ಕ್ಷೇತ್ರಗಳ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅದರಂತೆ ಕಡತಗಳನ್ನು ಪರಿಶೀಲಿಸಿದ ಸರ್ಕಾರ ಆಯೋಗದ ಶಿಫಾರಸ್ಸಿ ಒಪ್ಪಿಗೆ ಸೂಚಿಸಿದೆ.

    ರಾಜ್ಯ ಚುನಾವಣಾ ಆಯೋಗ 2021ರಲ್ಲಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮರು ವಿಂಗಡಣೆ ಮಾಡಿ ಕರಡು ಪ್ರತಿ ಪ್ರಕಟಿಸಿದ ಸಂದರ್ಭದಲ್ಲಿ ಜಿಪಂ ಕ್ಷೇತ್ರಗಳು (34) ಇತ್ತು. ಜನಸಂಖ್ಯೆಗೆ ಅನುಗುಣವಾಗಿ ಚುನಾವಣಾ ಆಯೋಗ ಕ್ಷೇತ್ರವಾರು ವಿಂಗಡಿಸಿತ್ತು. ಆ ಬಳಿಕ ರಾಜ್ಯ ಸರ್ಕಾರ ಮತ್ತೊಮ್ಮೆ ಮರು ವಿಂಗಡಣೆ ನಡೆಸಿತ್ತು.

    ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಒಳಗೊಂಡಿರುವ ಗ್ರಾಮಗಳು, ಗಡಿ ಮುಂತಾದ ವಿವರಗಳನ್ನೊಳಗೊಂಡ ಕರಡು ಅಧಿಸೂಚನೆ ಹೊರಡಿಸಿದ್ದ ಆಯೋಗ ಜ.16 ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಇದೀಗ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ, ಅಂತಿಮಗೊಳಿಸಿರುವ ಕ್ಷೇತ್ರಗಳ ಮಾಹಿತಿಯನ್ನು ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಕೆ.ಆರ್.ರುದ್ರಪ್ಪ ಪ್ರಕಟಿಸಿದ್ದಾರೆ.

    (ದಾವಣಗೆರೆ ತಾಲೂಕು)
    ಸಂಖ್ಯೆ, ಜಿಪಂ ಕ್ಷೇತ್ರ, ಹಳ್ಳಿಗಳು
    1, ಬೇತೂರು, 22
    2, ಆಲೂರು, 34
    3, ತೋಳಹುಣಸೆ, 39
    4, ಹದಡಿ, 21
    5. ಲೋಕಿಕೆರೆ, 22
    6, ಬಾಡ, 31
    7, ಮಾಯಕೊಂಡ, 37

    (ಹರಿಹರ ತಾಲೂಕು)
    1, ಕೊಂಡಜ್ಜಿ, 25
    2, ಬೆಳ್ಳೂಡಿ, 17
    3, ಭಾನುವಳ್ಳಿ, 17
    4, ಸಿರಿಗೆರೆ, 22

    (ಜಗಳೂರು ತಾಲೂಕು)
    1, ಸೊಕ್ಕೆ, 47
    2, ಅಣಬೂರು, 56
    3, ಬಿಳಿಚೋಡು, 46
    4, ದೊಣ್ಣೆಹಳ್ಳಿ, 59

    (ಚನ್ನಗಿರಿ ತಾಲೂಕು)
    1, ಹೊಸಕೆರೆ (ಬಸವಾಪಟ್ಟಣ), 29
    2, ಕರೇಕಟ್ಟೆ, 29
    3, ಕೆರೆಬಿಳಚಿ, 25
    4, ಸಂತೇಬೆನ್ನೂರು, 32
    5, ನಲ್ಲೂರು, 40
    6, ದೇವರಹಳ್ಳಿ, 35
    7, ಪಾಂಡೋಮಟ್ಟಿ, 49
    8, ತಾವರೆಕೆರೆ, 50

    (ಹೊನ್ನಾಳಿ ತಾಲೂಕು)
    1, ಬೇಲಿಮಲ್ಲೂರು, 23
    2, ಕುಂದೂರು, 19
    3, ಸಾಸ್ವೇಹಳ್ಳಿ, 29
    4, ಸೊರಟೂರು, 27

    (ನ್ಯಾಮತಿ ತಾಲೂಕು)
    1, ಬೆಳಗುತ್ತಿ, 40
    2, ಚೀಲೂರು, 38

    ದೊಣ್ಣೆಹಳ್ಳಿ ದೊಡ್ಡ ಕ್ಷೇತ್ರ
    59 ಗ್ರಾಮಗಳನ್ನು ಒಳಗೊಂಡಿರುವ ದೊಣ್ಣೆಹಳ್ಳಿ ಜಿಲ್ಲೆಯ ದೊಡ್ಡ ಕ್ಷೇತ್ರವಾಗಿದೆ. 56 ಹಳ್ಳಿಗಳೊಂದಿಗೆ ಅಣಬೂರು ದ್ವಿತೀಯ ಹಾಗೂ 50 ಊರುಗಳೊಂದಿಗೆ ತಾವರೆಕೆರೆ ತೃತೀಯ ಸ್ಥಾನದಲ್ಲಿದೆ.

    15 ಕ್ಷೇತ್ರಗಳಲ್ಲಿ 30ಕ್ಕೂ ಹೆಚ್ಚು ಗ್ರಾಮ
    ಜಿಲ್ಲಾ ಪಂಚಾಯಿತಿಯ 29 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳು 30ಕ್ಕೂ ಹೆಚ್ಚು ಗ್ರಾಮಗಳನ್ನು ಹೊಂದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts