More

    ಹಳ್ಳಿಯಿಂದ ದಾವಣಗೆರೆಗೆ ಹೋಗದಿರಿ

    ದಾವಣಗೆರೆ: ಜನರಲ್ಲಿ ಕೋವಿಡ್- 19 ಜಾಗೃತಿ ಮೂಡಿಸಿದರೂ ಹಸಿರು ಪಟ್ಟಿಯಿಂದ ಕೈಜಾರಿ ಹೋಗಿದೆ. ಗ್ರಾಮೀಣ ಭಾಗದ ಜನರು ಯಾವುದೇ ಕಾರಣಕ್ಕೂ ದಾವಣಗೆರೆಗೆ ಹೋಗಬಾರದು ಎಂದು ಶಾಸಕ ಪ್ರೊ.ಎಸ್.ಲಿಂಗಣ್ಣ ಸಲಹೆ ನೀಡಿದರು.
    ಕಾರ್ಮಿಕ ದಿನಾಚರಣೆ ಅಂಗವಾಗಿ ಮಾಯಕೊಂಡ ಕ್ಷೇತ್ರದ ಚಿನ್ನಸಮುದ್ರ, ನರಗನಹಳ್ಳಿ, ಅಣ್ಣಾಪುರ, ಪರಶುರಾಂಪುರ ಗ್ರಾಮಗಳಲ್ಲಿ ಮಾಸ್ಕ್, ಆಹಾರದ ಕಿಟ್ ವಿತರಿಸಿ ಮಾತನಾಡಿದರು.
    ರೈತರಿಗೆ ಬೀಜ, ಗೊಬ್ಬರ, ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜನರಿಗೆ ಯಾವುದೇ ಸಮಸ್ಯೆಗಳಿದ್ದರೂ ನನ್ನನ್ನು ವ್ಯಯಕ್ತಿಕವಾಗಿ ಸಂಪರ್ಕಿಸಬಹುದು. ಯಾವುದಕ್ಕೂ ಕರೊನಾ ಬಗ್ಗೆ ನಿರ್ಲಕ್ಷೃ ತೋರದಿರಿ ಎಂದು ಮನವಿ ಮಾಡಿದರು.
    ಈಗಾಗಲೇ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಜನರ ನಿರ್ಲಕ್ಷೃದಿಂದ ಸೋಂಕು ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಅದೃಷ್ಟವಶಾತ್ ಪ್ರಧಾನಿ ಮೋದಿ, ಸಿಎಂ ಬಿ.ಎಸ್. ಯಡಿಯೂಎರಪ್ಪ ಅವರ ದಿಟ್ಟ ಕ್ರಮಗಳಿಂದ ಸೋಂಕು ನಿಯಂತ್ರಣದಲ್ಲಿದೆ. ಆದ್ದರಿಂದ ಕ್ಷೇತ್ರದ ಜನರು ನಿಯಮಗಳನ್ನು ಪಾಲಿಸುವ ಮೂಲಕ ಮಹಾಮಾರಿ ತೊಲಗಿಸಲು ಪಣತೊಡಬೇಕು ಎಂದು ಮನವಿ ಮಾಡಿದರು.
    ಮಾಯಕೊಂಡ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಶ್ಯಾಗಲೆ ದೇವೇಂದ್ರಪ್ಪ, ಸಿಪಿ ಸೀಡ್ಸ್ ಕಂಪನಿಯ ಮ್ಯಾನೇಜರ್ ಎಂ.ಎನ್.ರವಿಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರೇವಣಸಿದ್ದನಗೌಡ, ಗ್ರಾಪಂ ಪಿಡಿಒಗಳಾದ ಮಾಳಮ್ಮ, ಹೇಮಂತ್‌ರಾಜ್, ಕಂದಾಯ ನಿರೀಕ್ಷಕರಾದ ಪ್ರಭು, ಕಿರಣ, ನಾಗರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts