More

    ಲೋಕಸಭೆ ಚುನಾವಣೆಗೆ ಮತ್ತೆ ಸ್ಪರ್ಧಿಸಲಾರೆ

    ದಾವಣಗೆರೆ: ಲೋಕಸಭೆ ಚುನಾವಣೆಗೆ ನಾನು ಮತ್ತೆ ಸ್ಪರ್ಧಿಸುವುದಿಲ್ಲ. 2019ರಲ್ಲಿ ನೀಡಿದ ಹೇಳಿಕೆಗೆ ನಾನೀಗಲೂ ಬದ್ಧನಿದ್ದೇನೆ. ಕೊಟ್ಟ ಮಾತು ತಪ್ಪುವ ರಾಜಕಾರಣಿ ನಾನಲ್ಲ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.

    ದಾವಣಗೆರೆ ತಾಲೂಕು ಉಳುಪಿನಕಟ್ಟೆಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ಮತದಾರರು ಸತತ ನಾಲ್ಕು ಬಾರಿ ಅವಕಾಶ ನೀಡಿದ್ದು ನಾನವರಿಗೆ ಋಣಿ. ಮುಂದೆ ಸ್ಪರ್ಧೆ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದರು.

    ಸಂಸದರು ಲೋಕಸಭೆ ಚುನಾವಣೆಗೆ ಮತ್ತೆ ಸ್ಪರ್ಧಿಸಲಾರೆರಾಷ್ಟ್ರ ರಾಜಕಾರಣದಿಂದ-ರಾಜ್ಯ ರಾಜಕಾರಣಕ್ಕೆ ಬರುತ್ತಾರೆಂದು ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ. ನಾನದನ್ನು ನೋಡಿ ಒಳಗೊಳಗೇ ಖುಷಿ ಪಡುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು.

    ಸ್ಪರ್ಧೆಗೆ ನಿಮ್ಮ ಅಥವಾ ನಿಮ್ಮ ಪುತ್ರನ ಮೇಲೆ ಹೈಕಮಾಂಡ್ ಒತ್ತಡ ತಂದರೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ನನ್ನ ಮಗನ ವಿಚಾರ ನನಗೆ ತಿಳಿದಿಲ್ಲ. ಆದರೆ ನಾನಂತೂ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಪುತ್ರನನ್ನು ರಾಜ್ಯ ರಾಜಕಾರಣಕ್ಕಿಳಿಸಿ, ಲೋಕಸಭೆ ಕಣಕ್ಕೆ ಇಳಿಯುವ ನಿರ್ಧಾರ ಮಾಡಿದ್ದಾರಂತಲ್ಲ? ಎಂಬ ಪ್ರಶ್ನೆಗೆ ‘ ತುಂಬಾ ಸಂತೋಷ, ಆ ಬಗ್ಗೆ ಮಾಹಿತಿ ಇಲ್ಲ’ ಎಂದಷ್ಟೇ ಪ್ರತಿಕ್ರಿಯಿಸಿದರು.

    ಮಾರ್ಚ್ ಮೊದಲ ಅಥವಾ ಕೊನೆಯ ವಾರದಲ್ಲಿ ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮಹಾಸಂಗಮ ಸಮಾವೇಶ ನಡೆಯಲಿದೆ ಎಂದು ಸಂಸದ ಸಿದ್ದೇಶ್ವರ ತಿಳಿಸಿದರು.

    ಉತ್ತರ ಕರ್ನಾಟಕ, ಮೈಸೂರು ಕರ್ನಾಟಕ, ಕೋಲಾರ ಸೇರಿ ನಾಲ್ಕು ದಿಕ್ಕಿನಿಂದ ಬಿಜೆಪಿ ತಂಡ ಬಸ್‌ಗಳಲ್ಲಿ ಯಾತ್ರೆ ನಡೆಸಿ ಅಂತಿಮವಾಗಿ ದಾವಣಗೆರೆಯಲ್ಲಿ ಸಮಾವೇಶಗೊಳ್ಳಲಿದೆ. ಈ ಸಂಬಂಧ ಪಕ್ಷದ ವರಿಷ್ಠರು ಸೂಚನೆ ನೀಡಿದ್ದು ಜಾಗ ಹಾಗೂ ದಿನಾಂಕ ನಿಗದಿಯಾಗಬೇಕಿದೆ. 10 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದರು.

    ರಾಜ್ಯ ಬಜೆಟ್‌ನಲ್ಲಿ ದಾವಣಗೆರೆ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ವಿಮಾನ ನಿಲ್ದಾಣಕ್ಕೆ ಬೇಡಿಕೆ ಸಲ್ಲಿಸುತ್ತ ಬಂದಿದ್ದೇನೆ. ಇದುವರೆಗೆ ಅನುಮೋದನೆ ದೊರೆತಿಲ್ಲ. ಈ ಬಾರಿಯೂ ಬೇಡಿಕೆ ಇಟ್ಟಿದ್ದೇನೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts