More

    ಬಾರ್‌ಗಳಿಂದ ಬಯಲಿಗೆ ಬಂದ ಕುಡುಕರು

    ಬಿ.ಸುರೇಶ್ ದಾವಣಗೆರೆ: ಸೂರ್ಯ ಮುಳುಗಿ, ಕತ್ತಲು ಆವರಿಸುತ್ತಿದ್ದಂತೆ ನಿರ್ಜನ ಪ್ರದೇಶಗಳಲ್ಲಿ ಮದ್ಯದ ಬಾಟಲುಗಳು ಸದ್ದು ಮಾಡುತ್ತವೆ. ಶಾಲಾವರಣ, ಆಟದ ಮೈದಾನ, ಜಮೀನು, ವಾಯುವಿಹಾರ ಸ್ಥಳಗಳು, ಹೊಸ ಲೇಔಟ್‌ಗಳು ರಾತ್ರಿ ವೇಳೆ ಕುಡುಕರ ಅಡ್ಡೆಗಳಾಗಿ ಪರಿವರ್ತನೆ ಆಗುತ್ತಿವೆ.

    ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ಹಲವು ನಿಯಮ ವಿಧಿಸಿದ್ದರಿಂದ ಮದ್ಯಪ್ರಿಯ ರು ಈ ಮಾರ್ಗ ಕಂಡುಕೊಂಡಿದ್ದಾರೆ.

    ಎಂಎಸ್‌ಐಎಲ್ ಅಥವಾ ಎಂಆರ್‌ಪಿ ಮಳಿಗೆಯಲ್ಲಿ ಇಷ್ಟದ ಬ್ರಾಂಡ್ ಖರೀದಿಸಿ, ಸ್ನಾೃಕ್ಸ್ ಜತೆಗೆ ಸ್ನೇಹಿತರ ಜತೆ ಸೇರಿ ನಿರ್ಜನಗಳ ಪ್ರದೇಶಗಳಿಗೆ ತೆರಳಿ ಕಠಪೂರ್ತಿ ಕುಡಿಯುತ್ತಾರೆ.

    ಶಾಲೆ, ಕಾಲೇಜುಗಳಿಗೆ ರಜೆ ವರದಾನ: ಕತ್ತಲಾಗುತಿದ್ದಂತೆ ಶಾಲಾ, ಕಾಲೇಜುಗಳ ಆವರಣ ಪ್ರವೇಶಿಸಿ ಮದ್ಯ ಹೀರಿ ಬಾಟಲುಗಳನ್ನು ಅಲ್ಲಿಯೇ ಬಿಸಾಕಿ ಹೋಗುತ್ತಾರೆ. ಇದರಿಂದ ಬೇಸತ್ತ ಶಿಕ್ಷಕರು ಹಾಗೂ ಗ್ರಾಮಸ್ಥರು ಇಂತಹ ಕೃತ್ಯಗಳನ್ನು ತಡೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

    ಸಿಂಥೆಟಿಕ್ ಟ್ರಾೃಕ್ ಮೇಲೆ ಬಾಟಲುಗಳ ಚೂರು: ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾೃಕ್ ನಿರ್ಮಿಸಲಾಗಿದೆ. ಇಲ್ಲಿಯೂ ಕುಡುಕರ ಹಾವಳಿ ತಪ್ಪಿಲ್ಲ. ಕೆಲ ಕಿಡಿಗೇಡಿಗಳು ಮದ್ಯಸೇವಿಸಿ ಬಾಟಲುಗಳನ್ನು ಅಲ್ಲಿಯೇ ಒಡೆದು ಹೋಗುತ್ತಿದ್ದು ಗಾಜಿನ ಚೂರುಗಳು ಸಿಂಥೆಟಿಕ್ ಟ್ರಾೃಕ್‌ನಲ್ಲಿ ಸೇರಿವೆ.

    ಕುಡುಕರ ಅಡ್ಡೆಗಳು: ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲೆ ಆವರಣ, ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ, ಜಿಲ್ಲಾ ಕ್ರೀಡಾಂಗಣ, ಚಳ್ಳಕೆರೆ ರಸ್ತೆಯ ಖಾಲಿ ನಿವೇಶನಗಳು, ಹೊರವಲಯದ ಜಮೀನುಗಳು.

    ಶಾಲಾವರಣ, ಕ್ರೀಡಾಂಗಣ ಸೇರಿ ನಿರ್ಜನ ಪ್ರದೇಶಗಳಲ್ಲಿ ರಾತ್ರಿ ಮದ್ಯ ಸೇವಿಸಿದ ನಿಶೆಯಲ್ಲಿ ಬಾಟಲುಗಳನ್ನು ಚೂರು ಮಾಡಿ ಹೋಗುತ್ತಿದ್ದಾರೆ. ಇದರಿಂದ ಶಾಲಾ ಪರಿಸರಕ್ಕೆ,ವಾಯು ವಿಹಾರಿಗಳಿಗೆ ತೊಂದರೆಯಾಗುತ್ತಿದೆ. ಪೊಲೀಸ್ ಗಸ್ತು ಹೆಚ್ಚಿಸಿ ಇದಕ್ಕೆ ಕಡಿವಾಣ ಹಾಕಬೇಕು.
    ಟಿ.ಕೆ.ಚಂಪಾ ವಕೀಲೆ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts