More

    ನಾಮಕರಣದಲ್ಲಿ ಉಂಡವರಿಗೆ ವಾಂತಿ-ಭೇದಿ

    ನ್ಯಾಮತಿ : ಮಗುವಿನ ನಾಮಕರಣ ಸಮಾರಂಭದಲ್ಲಿ ಊಟ ಮಾಡಿದ 41ಕ್ಕೂ ಹೆಚ್ಚು ಜನ ವಾಂತಿ-ಭೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ತಾಲೂಕಿನ ಆರುಂಡಿ ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದಿದೆ.
    ಗ್ರಾಮದ ಕಬ್ಬಾಯಿ ರಂಗಪ್ಪ ಎಂಬುವರ ಮನೆಯಲ್ಲಿ ಭಾನುವಾರ ಬೆಳಗ್ಗೆ ಮೊಮ್ಮಗನ ನಾಮಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನದ ಊಟಕ್ಕೆ ಲಾಡು, ಮೆಂತೆ ರೈಸ್ ಮತ್ತು ಅನ್ನ-ಸಂಬಾರ್ ಮಾಡಲಾಗಿತ್ತು. ಭೋಜನ ಮಾಡಿದವರಲ್ಲಿ ಆರುಂಡಿ ಗ್ರಾಮದ 37ಕ್ಕೂ ಹೆಚ್ಚು ಜನರಿಗೆ ಮತ್ತು ಚಟ್ನಹಳ್ಳಿ ಗ್ರಾಮದ ಒಬ್ಬರಿಗೆ ಸೋಮವಾರ ಬೆಳಗಿನಜಾವದಿಂದ ವಾಂತಿ-ಭೇದಿ ಕಾಣಿಸಿಕೊಂಡಿದೆ.
    ಅಸ್ವಸ್ಥಗೊಂಡವರಿಗೆ ಕೂಡಲೇ ಆರುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನ್ಯಾಮತಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
    ಶಾಸಕ ಎಂ.ಪಿ.ರೇಣುಕಾಚಾರ್ಯ ಆಸ್ಪತ್ರೆಗಳಿಗೆ ತೆರಳಿ ಅಸ್ವಸ್ಥರ ಆರೋಗ್ಯ ವಿಚಾರಿಸಿ ಸ್ಥೈರ್ಯ ತುಂಬುವ ಕೆಲಸ ಮಾಡಿದರು. ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಕೋಡಿಕೊಪ್ಪದ ಶಿವಪ್ಪ, ಪಪಂ ಮುಖ್ಯಾಧಿಕಾರಿ ಬಿ.ಕೆ.ಕೊಟ್ರೇಶ್ ಸೇರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು.
    ನಾಮಕರಣಕ್ಕೆ ಮಾಡಿದ್ದ ಆಹಾರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ವೈದ್ಯಾಧಿಕಾರಿ ಕೆಂಚಪ್ಪ ಬಂತಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts