More

    ದೇಶದ ಬೆಳವಣಿಗೆಗೆ ಮುನ್ನುಡಿ ಬರೆದ ದೂರದೃಷ್ಟಿ

    ದಾವಣಗೆರೆ : ಅಂತ್ಯೋದಯದ ಕನಸು, ಸುಲಲಿತ ಜೀವನ, ಸುಗಮ ವ್ಯವಹಾರ ನಿರ್ವಹಣೆಗೆ ಪ್ರಧಾನಿ ಮೋದಿ ತೆಗೆದುಕೊಂಡ ಕ್ರಮಗಳೇ ದೇಶದ ಆರ್ಥಿಕತೆಯ ಬೆಳವಣಿಗೆಗೆ ಮುನ್ನುಡಿ ಬರೆದವು ಎಂದು ಆರ್ಥಿಕ ತಜ್ಞ ಸಮೀರ್ ಕಾಗಲಕರ್ ಹೇಳಿದರು.
     ಬಿಜೆಪಿ ಜಿಲ್ಲಾ ಆರ್ಥಿಕ ಸಂಕುಲದ ವತಿಯಿಂದ, ನಗರದ ಚನ್ನಗಿರಿ ಕೇಶವಮೂರ್ತಿ ರೋಟರಿ ಸಭಾ ಭವನದಲ್ಲಿ ಶನಿವಾರ ಆಯೋಜಿಸಿದ್ದ, ‘ಕೇಂದ್ರದ ಅಮೃತ ಕಾಲ ಬಜೆಟ್’ ಕುರಿತ ಅವಲೋಕನ ಸಭೆಯಲ್ಲಿ ಮಾತನಾಡಿದರು.
     ದೇಶದ ಬಜೆಟ್ ಗಾತ್ರ 2014 ರಲ್ಲಿ 15 ಲಕ್ಷ ಕೋಟಿ ಇದ್ದದ್ದು ಈಗ 45 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು ಇದು 3 ಪಟ್ಟು ಹೆಚ್ಚಳವಾಗಿದೆ. ಜಿಡಿಪಿ 112 ಲಕ್ಷ ಕೋಟಿಯಿಂದ 270 ಲಕ್ಷ ಕೋಟಿಗೆ ಹೆಚ್ಚಳವಾಗಿದೆ ಎಂದು ಅಂಕಿ ಅಂಶ ಒದಗಿಸಿದರು.
     ವಿದೇಶಿ ನೇರ ಬಂಡವಾಳ ಹೂಡಿಕೆ ಜಾಸ್ತಿಯಾಗಿದ್ದು, ಇತರ ದೇಶಗಳಿಗೆ ಹೋಲಿಸಿದಾಗ ಹಣದುಬ್ಬರ ಪ್ರಮಾಣ ಕಡಿಮೆಯಿದೆ. ಭಾರತದ ಆರ್ಥಿಕತೆಯ ಬಗ್ಗೆ ಐ.ಎಂ.ಎಫ್ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ತಿಳಿಸಿದರು.
     ಪಾಕಿಸ್ತಾನ, ಇಂಗ್ಲೆಂಡ್‌ನಂಥ ದೇಶಗಳು ಕ್ಲಿಷ್ಟಕರ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಆದರೆ ಭಾರತ ಮಾತ್ರ ಕಳೆದ 9 ವರ್ಷಗಳಲ್ಲಿ ತೆಗೆದುಕೊಂಡ ಜಾಣ್ಮೆಯ ಕ್ರಮಗಳಿಂದಾಗಿ ಜಗತ್ತಿನ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರ ಹೊಮ್ಮಿದೆ ಎಂದರು.
     ಡಿಜಿಟಲ್ ಇಂಡಿಯಾ ಕಾರ್ಯಕ್ರಮದಿಂದ ದೇಶದಲ್ಲಿ ದೊಡ್ಡ ಪರಿವರ್ತನೆಯಾಯಿತು. ಜನ್‌ಧನ್ ಖಾತೆಗಳಲ್ಲಿ 1.50 ಲಕ್ಷ ಕೋಟಿ ರೂ.ಗಳಿವೆ. ಜನರಿಗೆ ಆರ್ಥಿಕ ಶಕ್ತಿಯನ್ನು ತುಂಬಿ, ಆ ಮೂಲಕ ದೇಶವನ್ನು ಬಲಿಷ್ಠಗೊಳಿಸಲು ಅವರು ಕೈಜೋಡಿಸುವಂತೆ ಮಾಡಲಾಯಿತು ಎಂದು ಹೇಳಿದರು.
     ಜನಸಾಮಾನ್ಯರು ಶೌಚಗೃಹ ಬಳಸುವಂತೆ ಮಾಡಿದ್ದು, ವಿದ್ಯುತ್, ಅಡುಗೆ ಅನಿಲ ಸಂಪರ್ಕ ನೀಡಿದ್ದು, ಬ್ಯಾಂಕ್ ಖಾತೆಗಳನ್ನು ತೆರೆಸಿ ಉಳಿತಾಯದ ಮಹತ್ವವನ್ನು ಹೇಳಿಕೊಟ್ಟಿದ್ದು ಇವೆಲ್ಲವೂ ಜನರು ಘನತೆಯಿಂದ ಬದುಕುವಂತಾಗಲು ಕೈಗೊಂಡ ಕ್ರಮಗಳು ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts