More

    ಯೂರಿಯಾ ಗೊಬ್ಬರ ಪೂರೈಕೆಗೆ ಆಗ್ರಹ

    ದಾವಣಗೆರೆ: ರೈತರಿಂದ ಯೂರಿಯಾ ಬೇಡಿಕೆ ಹೆಚ್ಚಾಗಿದ್ದು, ಜಿಲ್ಲೆಗೆ ಬರಬೇಕಿರುವ ಯೂರಿಯಾ ಗೊಬ್ಬರವನ್ನು ಪೂರೈಕೆ ಮಾಡುವಂತೆ ರಾಸಾಯನಿಕ ಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಆಗ್ರಹಿಸಿದ್ದಾರೆ.

    ಈ ಕುರಿತು ದೂರವಾಣಿ ಮೂಲಕ ಮಾತನಾಡಿದ ಸಿದ್ದೇಶ್ವರ, ಜಿಲ್ಲೆಯ ಜುಲೈ ತಿಂಗಳ ಕೋಟಾ 3400 ಮೆಟ್ರಿಕ್ ಟನ್ ಹಾಗೂ ಆಗಸ್ಟ್ ತಿಂಗಳ ಕೋಟಾ 11500 ಮೆಟ್ರಿಕ್ ಟನ್ ಯೂರಿಯಾವನ್ನು ಪೂರೈಕೆ ಮಾಡುವಂತೆ ಮನವಿ ಮಾಡಿದರು.

    ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಹೆಚ್ಚಿನ ಮಳೆಯಾಗುತ್ತಿದ್ದು, ಯೂರಿಯಾ ಬೇಡಿಕೆ ಜಾಸ್ತಿಯಾಗಿದೆ. ರೈತರು ಭತ್ತ ನಾಟಿ ಮಾಡಲು ಸಿದ್ಧತೆ ಆರಂಭಿಸಿದ್ದಾರೆ. ಜುಲೈನಲ್ಲಿ ಜಿಲ್ಲೆಗೆ 13000 ಮೆಟ್ರಿಕ್ ಟನ್‌ಗೆ ಬದಲು 9600 ಮೆಟ್ರಿಕ್ ಟನ್ ಮಾತ್ರ ಪೂರೈಕೆಯಾಗಿದೆ.

    ಹರಪನಹಳ್ಳಿ ತಾಲೂಕಿನ ರೈತರು ಬಳ್ಳಾರಿ ಜಿಲ್ಲೆಯ ಬದಲಾಗಿ ದಾವಣಗೆರೆಯನ್ನೇ ಅವಲಂಬಿಸಿರುವುದರಿಂದ ಅವರಿಗೂ ತೊಂದರೆಯಾಗದಂತೆ ದಾವಣಗೆರೆಯಿಂದಲೇ ಯೂರಿಯಾ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು ತೊಂದರೆಯಾಗದಂತೆ ಯೂರಿಯಾ ಪೂರೈಕೆ ಮಾಡುವ ಭರವಸೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts