More

    ಟೊಮ್ಯಾಟೊ ಬೆಳೆಗೆ ರೈತರ ಕಣ್ಗಾವಲು

    ದಾವಣಗೆರೆ : ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು ಇದೇ ಕಾರಣಕ್ಕೆ ಅವುಗಳ ಕಳ್ಳತನ ಪ್ರಕರಣಗಳೂ ಹೆಚ್ಚಾಗುತ್ತಿವೆ. ಕಳ್ಳರಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಹಗಲಿರುಳು ಕಾವಲು ಕಾಯುವ ಸ್ಥಿತಿ ಬಂದಿದೆ.
     ತಾಲೂಕಿನ ಕೊಡಗನೂರು ಗ್ರಾಮದ ಕೆಲವು ರೈತರು ತಾವು ಬೆಳೆದ ಟೊಮ್ಯಾಟೊ ಬೆಳೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾರೆ. ಇದಕ್ಕಾಗಿ ಹೊಲದಲ್ಲಿ ಗುಡಿಸಲು ಹಾಕಿಕೊಂಡಿದ್ದಾರೆ. ಜತೆಗೆ ಎರಡು ನಾಯಿಗಳೂ ಇದ್ದು ಕಳ್ಳತನವಾಗದಂತೆ ನೋಡಿಕೊಳ್ಳುತ್ತಿದ್ದಾರೆ.
     ಸಾಮಾನ್ಯವಾಗಿ 1 ಬಾಕ್ಸ್‌ಗೆ 500-1000 ರೂ. ಒಳಗೇ ಬೆಲೆ ಇರುತ್ತಿತ್ತು. ಈಗ 1800-2000 ರೂ. ಆಗಿದೆ. ಇಷ್ಟು ರೇಟ್ ಯಾವಾಗಲೂ ಇರಲಿಲ್ಲ. ಬೆಲೆ ಕಡಿಮೆ ಇದ್ದಾಗ ಕಾವಲು ಕಾಯುವ ಅಗತ್ಯವಿರಲಿಲ್ಲ. ಈಗ ದುಬಾರಿ ಆಗಿರುವುದರಿಂದ ಕಳ್ಳತನಗಳು ಹೆಚ್ಚಾಗಿವೆ. ಕೆಲ ದಿನಗಳ ಹಿಂದೆ 2 ಬಾಕ್ಸ್ ಟೊಮ್ಯಾಟೊ ಕದ್ದಿದ್ದಾರೆ. ಆದ್ದರಿಂದ ಪಾಳಿ ಪ್ರಕಾರ ತಂದೆ ರಂಗಸ್ವಾಮಿ ಹಾಗೂ ತಾವು ಹೊಲದಲ್ಲಿದ್ದು ನೋಡಿಕೊಳ್ಳುತ್ತಿದ್ದೇವೆ ಎಂದು ರೈತ ಶರತ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts