More

    ದಾವಣಗೆರೆಯಲ್ಲಿ ಸಂಭ್ರಮದ ಶ್ರೀ ಲಿಂಗೇಶ್ವರ ಸ್ವಾಮಿ ರಥೋತ್ಸವ

    ದಾವಣಗೆರೆ : ನಗರದ ಅಶೋಕ ಟಾಕೀಸ್ ರೈಲ್ವೆಗೇಟ್ ಹತ್ತಿರದ ಶ್ರೀ ಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಲಿಂಗೇಶ್ವರ ಸ್ವಾಮಿ ರಥೋತ್ಸವ ಅತ್ಯಂತ ಸಂಭ್ರಮದಿಂದ ನೆರವೇರಿತು.
     ಶ್ರೀ ಲಿಂಗೇಶ್ವರ ಸ್ವಾಮಿ ಹಾಗೂ ಬಸವೇಶ್ವರ ಮೂರ್ತಿಯನ್ನು ಹೂಗಳಿಂದ ಸಿಂಗರಿಸಲಾಗಿತ್ತು. ಅಲಂಕೃತಗೊಂಡ ರಥವು ಸಕಲ ವಾದ್ಯಮೇಳದೊಂದಿಗೆ ದೇವಸ್ಥಾನ ಆವರಣದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು.
     ಸಮಾಳ, ಡೊಳ್ಳು, ಕೀಲುಕುದುರೆ, ಗೊಂಬೆಗಳ ಪ್ರದರ್ಶನ, ವಾದ್ಯ ಮೇಳದೊಂದಿಗೆ ನಗರದ ಮಹಾತ್ಮ ಗಾಂಧಿ ವೃತ್ತ, ಜಯದೇವ ವೃತ್ತ, ಕುವೆಂಪು ರಸ್ತೆ, ಎಲಿಗಾರ್ ಶಿವಪ್ಪ ರಸ್ತೆ ಹಾಗೂ ಪಿ.ಬಿ. ರಸ್ತೆಗಳಲ್ಲಿ ರಥೋತ್ಸವ ನಡೆಯಿತು. ಜನರು ಭಕ್ತಿ ಸಮರ್ಪಿಸಿದರು.
      ರಥೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಲಿಂಗೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ ನೆರವೇರಿತು. ನಂತರ ವಿವಿಧ ಪತ್ರೆ-ಪುಷ್ಪಗಳೊಂದಿಗೆ ಅಲಂಕೃತಗೊಂಡ ದೇವರ ಮೂರ್ತಿಗೆ ಹೆಬ್ಬಾಳ್‌ನ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ವಿಶೇಷ ಪೂಜಾ ಕೈಕಂರ್ಯ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
     ದೇವಸ್ಥಾನ ಸಂಘದ ಕಿರುವಾಡಿ ಸೋಮಶೇಖರ್, ಅಜ್ಜಂಪುರ ಶೆಟ್ರು ಮಂಜಣ್ಣ, ಕರೇಶಿವಪ್ಳ ಸಿದ್ದೇಶ್, ಕಿರುವಾಡಿ ಚಂದ್ರಶೇಖರ್, ಎನ್.ರಾಜಶೇಖರ್, ಮಾಗಾನಹಳ್ಳಿ ಮೋಹನ್, ಪುಟ್ಟಣ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts