More

    ಆನೆಕೊಂಡದ ಶ್ರೀ ಬಸವೇಶ್ವರಸ್ವಾಮಿ ಕಾರ್ಣೀಕ

    ದಾವಣಗೆರೆ : ರಾಮ ರಾಮ ಎಂದು ನುಡಿದೀತಲೆ
     ಮುತ್ತೈದೆಯರಿಗೆ ಮಹಾತಾಯಿ ಉಡಿ ತುಂಬಿಯಾಳಲೆ
     ನರಲೋಕದ ಜನಕೆ ಆನೆ ಕಿರೀಟ ಇಟ್ಟೀತಲೆ
     ಮಹಾತಾಯಿ ಬೇರುಸೊಪ್ಪು ಬೀಸಿತ್ತಲೆ ಎಚ್ಚರ.
     ಶ್ರಾವಣ ಮಾಸದ ಕಡೇ ಸೋಮವಾರ ನಗರದ ಇತಿಹಾಸ ಪ್ರಸಿದ್ಧ ಆನೆಕೊಂಡದ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಕಾರ್ಣೀಕ ನುಡಿಯಿದು.
     ಹೂಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಬಾತಿ ನೀಲಾನಹಳ್ಳಿಯ ಶ್ರೀ ಆಂಜನೇಯಸ್ವಾಮಿ, ಆನೆಕೊಂಡದ ಶ್ರೀ ಬಸವೇಶ್ವರಸ್ವಾಮಿ, ನಿಟುವಳ್ಳಿಯ ಶ್ರೀ ದುರ್ಗಾಂಬಿಕಾದೇವಿ ಮತ್ತಿತರ ದೇವಾಲಯಗಳ ದೇವರ ಉತ್ಸವಮೂರ್ತಿಗಳು ಆಗಮಿಸಿದ ಬಳಿಕ ಅಪಾರ ಭಕ್ತ ಸಮೂಹದ ನಡುವೆ ಕಾರ್ಣೀಕ ನಡೆಯಿತು.
     ದೇವಸ್ಥಾನಕ್ಕೆ ಕುಟುಂಬ ಸಮೇತ ಆಗಮಿಸಿದ ಭಕ್ತರು ದೇವರಿಗೆ ಹಣ್ಣು-ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು. ಮಹೋತ್ಸವಕ್ಕೆ ಬಂದ ದೇವರಗಳಿಗೆ ಕೈ ಮುಗಿದು ಭಕ್ತಿಯಿಂದ ಪ್ರಾರ್ಥಿಸಿದರು. ಕುಟುಂಬದವರು ಮಕ್ಕಳೊಂದಿಗೆ ಜಾತ್ರೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು
     ಜಾತ್ರೆ ಪ್ರಯುಕ್ತ ಬಂಬೂಬಜಾರ್ ರಸ್ತೆಯಲ್ಲಿ ಇರಿಸಲಾಗಿದ್ದ ಅಂಗಡಿಗಳಲ್ಲಿ ರ ಮಂಡಕ್ಕಿ, ಬೆಂಡು ಬತ್ತಾಸು, ಜಿಲೇಬಿ ಮೈಸೂರುಪಾಕ್ ಮೊದಲಾದ ತಿನಿಸುಗಳು ಹಾಗೂ ಬಳೆ, ಸರ, ಕಿವಿಯೋಲೆ ಮೊದಲಾದ ವಸ್ತುಗಳು, ಚಿಕ್ಕಮಕ್ಕಳ ಆಟಿಕೆಗಳ ಖರೀದಿಯೂ ಜೋರಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts