More

    ಮದ್ಯ ಸೇವಿಸಿದವರಿಗೆ ಮತದಾನ ನಿಷೇಧಿಸಿ

    ದಾವಣಗೆರೆ: ಮದ್ಯ ಸೇವಿಸಿದವರಿಗೆ ಮತಗಟ್ಟೆ ಪ್ರವೇಶ ದ್ವಾರದಲ್ಲಿಯೇ ಪ್ರವೇಶ ನಿಷೇಧಿಸುವ ಕಾನೂನನ್ನು ರೂಪಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಾರಿಗೊಳಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ, ಜಿಪಂ ಮಾಜಿ ಸದಸ್ಯ ತೇಜಸ್ವಿ ವಿ.ಪಟೇಲ್ ಒತ್ತಾಯಿಸಿದ್ದಾರೆ.

    ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರಿಗೆ ಬುಧವಾರ ಈ ಕುರಿತು ಮನವಿ ಸಲ್ಲಿಸಿದರು. ವಾಹನ ಸವಾರರ ಮತ್ತು ಸುತ್ತಮುತ್ತಲಿನವರ ಸುರಕ್ಷತೆ ದೃಷ್ಟಿಯಿಂದ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು ಅಪರಾಧ ಎಂಬ ಕಾನೂನನ್ನು ಜಾರಿ ಮಾಡಲಾಗಿದೆ. ಆದರೆ, ಕೆಲವರು ಮದ್ಯ ಸೇವಿಸಿಯೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಸಾಮಾನ್ಯ ಸಂಗತಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ವಾಹನ ಸವಾರನೊಬ್ಬ ಪ್ರಜ್ಞೆಯಿಂದ ಇರುವುದು ಎಷ್ಟು ಮುಖ್ಯವೋ, ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಮತದಾರ ಮತದಾನ ಸಂದರ್ಭದಲ್ಲಿ ಗುರುತಿಸುವ ಮಟ್ಟಿಗಾದರೂ ಪ್ರಜ್ಞೆಯಲ್ಲಿರುವುದು ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಮತದಾರ ಮದ್ಯ ಸೇವಿಸಿದ್ದಾನೆಯೋ ಇಲ್ಲವೋ ಎಂದು ಮತಗಟ್ಟೆ ಪ್ರವೇಶ ದ್ವಾರದ ಬಳಿ ಪರೀಕ್ಷಿಸಿ ಮದ್ಯ ಸೇವಿಸಿದ್ದಲ್ಲಿ ಅವರಿಗೆ ಪ್ರವೇಶ ನಿಷೇಧಿಸುವುದು ಅಗತ್ಯವೆನಿಸುತ್ತದೆ. ಒಂದು ವೇಳೆ ಈ ಪದ್ಧತಿ ಅಳವಡಿಸಿದರೆ, ಮತದಾನ ಪ್ರಮಾಣದ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಚರ್ಚೆಯೂ ನಡೆಯಬಹುದು. ಆದರೆ ಪ್ರಜ್ಞಾಪೂರ್ವಕ ಮತದಾನ ಬಹಳ ಮುಖ್ಯ ಎಂದು ಅವರು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts