More

    ಮೌಲ್ಯಗಳ ಬೆಳಕಲ್ಲಿ ಭವಿಷ್ಯ ರೂಪಿಸಿಕೊಳ್ಳಿ

    ದಾವಣಗೆರೆ : ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವದೊಂದಿಗೆ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಿರಿಗೆರೆಯ ಎಸ್.ಟಿ.ಜೆ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ.ಎಚ್.ವಿ. ವಾಮದೇವಪ್ಪ ಅಭಿಪ್ರಾಯಪಟ್ಟರು.
     ದಾವಣಗೆರೆ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ವಿಭಾಗದ ಸಹಯೋಗದಲ್ಲಿ ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2022-23ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರದಲ್ಲಿ ‘ಹದಿಹರೆಯದ ವಿದ್ಯಾರ್ಥಿಗಳ ಸಮಸ್ಯೆಗಳು ಸವಾಲುಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
     ಹದಿಹರೆಯದಲ್ಲಿ ಭಾವನೆಗಳ ಪರಿವರ್ತನೆ ಆಗುತ್ತಿರುತ್ತದೆ. ಇದು ದೈಹಿಕ, ಸಾಮಾಜಿಕ, ಬೌದ್ಧಿಕ ಪರಿಪಕ್ವತೆ ಸಾಧಿಸಲು ಸಜ್ಜುಗೊಳ್ಳಬೇಕಾದ ಹಂತ. ಚಿತ್ತ ಚಾಂಚಲ್ಯ ವೇಗ ಪಡೆಯುತ್ತದೆ. ಜತೆಗೆ ಶರೀರ, ಇಂದ್ರಿಯಗಳು ಬಹಳ ಪ್ರಬಲವಾಗಿರುವ ವಯಸ್ಸು ಕೂಡಾ. ಆದ್ದರಿಂದ ಯುವಕ ಯುವತಿಯರು ತಮ್ಮ ಭವಿತವ್ಯವನ್ನು ರೂಪಿಸಿಕೊಳ್ಳಲು ಕ್ಷಣ ಕ್ಷಣಕ್ಕೂ ಪ್ರಯತ್ನಶೀಲರಾಗಬೇಕು. ಸೌಜನ್ಯ, ಸಕಾರಾತ್ಮಕ ಚಿಂತನೆ, ಮನೆಯ ಹಿರಿ-ಕಿರಿಯರೊಡನೆ ಸೌಹಾರ್ದವಾಗಿ ವರ್ತಿಸುವಿಕೆ ಇರಬೇಕು ಎಂದು ಸಲಹೆ ನೀಡಿದರು.
     ದೃಶ್ಯಕಲಾ ಮಹಾವಿದ್ಯಾಲಯ ಸಂಯೋಜನಾಧಿಕಾರಿ ಡಾ.ಸತೀಶ್ ಕುಮಾರ ಪಿ. ವಲ್ಲೇಪುರೆ ಅಧ್ಯಕ್ಷತೆ ವಹಿಸಿದ್ದರು. ನಗರದ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಪ್ರೊ.ಅಣ್ಣೇಶ ಪಿ, ದೃಶ್ಯಕಲಾ ಮಹಾವಿದ್ಯಾಲಯದ ಎನ್‌ಎಸ್‌ಎಸ್‌ಕಾರ್ಯಕ್ರಮ ಅಧಿಕಾರಿ ಡಾ.ಜೈರಾಜ ಚಿಕ್ಕ ಪಾಟೀಲ ಇದ್ದರು.
     ಶಿಬಿರಾಧಿಕಾರಿಗಳಾದ ಡಾ.ಸಂತೋಷ ಕುಮಾರ್ ಕುಲಕರ್ಣಿ, ಸುರೇಶ್ ಡಿ.ಎಚ್, ಶಿವಶಂಕರ್ ಸುತಾರ್, ದತ್ತಾತ್ರೇಯ  ಎನ್. ಭಟ್ಟ, ಡಾ.ಗಿರೀಶ್ ಕುಮಾರ್, ಪ್ರಮೋದ್ ಕೆ.ವಿ, ಹರೀಶ್ ಎಚ್.ಎಸ್, ರಂಗನಾಥ ಕುಲಕರ್ಣಿ, ದೃಶ್ಯಕಲಾ ಕಾಲೇಜಿನ ಬೋಧಕೇತರ ನೌಕರರು, ಶಿಬಿರಾರ್ಥಿಗಳು, ಎನ್‌ಎಸ್‌ಎಸ್ ಪ್ರಶಸ್ತಿ ವಿಜೇತ ಡಾ.ಪರಶುರಾಮ, ಪತ್ರಕರ್ತ ಕರಿಬಸವರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts