More

    ಪಂಚ ಗ್ಯಾರಂಟಿಗಳಿಗೆ ಆಯುಷ್ಯವಿಲ್ಲ

    ದಾವಣಗೆರೆ : ಲೋಕಸಭೆ ಚುನಾವಣೆ ಬಳಿಕ ಪಂಚ ಗ್ಯಾರಂಟಿಗಳಿಗೆ ಆಯುಷ್ಯವಿಲ್ಲ. ಕಾಂಗ್ರೆಸ್ ಬೋಗಸ್ ಭರವಸೆ ನೀಡಿ ಮತದಾರರಿಗೆ ಮೋಸ ಮಾಡಿದೆ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
     ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಕಾಲೇಜುಗಳಲ್ಲಿ ಓದುವ ಮಕ್ಕಳು ನಿರುದ್ಯೋಗಿಗಳಲ್ಲ. ಇದುವರೆಗೂ ಕೆಲಸಕ್ಕಾಗಿ ಅಲೆದಾಡುವರು ನಿರುದ್ಯೋಗಿಗಳು. ಆದರೆ, ಯುವನಿಧಿ ಲೋಕಾರ್ಪಣೆ ಸಂದರ್ಭದಲ್ಲಿ ಓದುವ ಮಕ್ಕಳನ್ನು ಸಂಖ್ಯಾ ಪ್ರದರ್ಶನ ಮಾಡಲು ಕಾಂಗ್ರೆಸ್ ಬಳಸಿದೆ ಎಂದು ದೂರಿದರು.
     ಅತಿಥಿ ಉಪನ್ಯಾಸಕರ ಧರಣಿಯಿಂದಾಗಿ ಮಕ್ಕಳು ಪಾಠ ಪ್ರವಚನಗಳಿಂದ ವಂಚಿತರಾಗಿದ್ದು, ಇದರ ನಡುವೆ ವಿದ್ಯಾರ್ಥಿಗಳನ್ನು ಕಾಂಗ್ರೆಸ್ ರಾಜಕೀಯ ಹಿತಾಸಕ್ತಿಗೆ ಬಳಸಿಕೊಂಡಿರುವುದು ಸರಿಯಲ್ಲ ಎಂದು ಟೀಕಿಸಿದರು.
     ಕಾಂಗ್ರೆಸ್ ಗ್ಯಾರಂಟಿಗಳು ಫಲಾನುಭವಿ ಕೈ ಸೇರುವಲ್ಲಿ ವಿಫಲವಾಗಿದೆ. ಬಡತನ ರೇಖೆಗಿಂತ ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಹಣ ಸರಿಯಾಗಿ ಜಮೆ ಆಗುತ್ತಿಲ್ಲ ಎಂದು ಹೇಳಿದರು.
     ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧ. ಜಿಲ್ಲೆಯಲ್ಲಿ ಯಾವುದೇ ತರಹದ ಬಣಗಳಿಲ್ಲ. ಎಲ್ಲರೂ ಪಕ್ಷಕ್ಕಾಗಿ ಶ್ರದ್ಧೆಯಿಂದ ದುಡಿದು ಮುಂಬರುವ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವುದರ ಮೂಲಕ ಪ್ರಧಾನಿ ಮೋದಿಯವರಿಗೆ ಉಡುಗೊರೆ ನೀಡುತ್ತೇವೆ ಎಂದರು.
     ರೈತ ಮುಖಂಡ ಕೆ.ಪಿ. ಕಲಿಂಗಪ್ಪ, ಡಾ.ರವಿಕುಮಾರ್, ಪಾಲಿಕೆ ಸದಸ್ಯ ಶಿವಪ್ರಕಾಶ್, ಪ್ರವೀಣ್ ಜಾದವ್, ದಯಾನಂದ, ಜಯರುದ್ರೇಶ್, ಬಸವರಾಜ್, ಶಿವನಗೌಡ ಪಾಟೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts