More

    ಬ್ರಾಹ್ಮಣ ಸಮಾಜದಿಂದ ಶ್ರೀರಾಮ ತಾರಕ ಹೋಮ      

    ದಾವಣಗೆರೆ : ಅಯೋಧ್ಯೆಯಲ್ಲಿ  ಶ್ರೀ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ತಾಲೂಕು ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ನಗರದ ಪಿ.ಜೆ. ಬಡಾವಣೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ ಶ್ರೀರಾಮ ತಾರಕ ಹೋಮ ನಡೆಸಲಾಯಿತು.
     2023 ಅಕ್ಟೋಬರ್ 24ರ ವಿಜಯದಶಮಿಯಿಂದ ಪ್ರಾರಂಭಿಸಿ ಪ್ರತಿನಿತ್ಯ ವಿವಿಧ ಸಮಾಜದ ಭಜನಾ ಮಂಡಳಿ, ದೇವಸ್ಥಾನ ಹಾಗೂ ಮನೆಗಳಲ್ಲಿ ಶ್ರೀರಾಮ ತಾರಕ ಮಂತ್ರವನ್ನು ಸುಮಾರು 18.78 ಕೋಟಿ ಬಾರಿ ಜಪ ಮಾಡಿದ್ದು, ಈ ಸಂದರ್ಭದಲ್ಲಿ ಸಮರ್ಪಿಸಲಾಯಿತು.
     ಶಂಕರನಾರಾಯಣ ಶಾಸ್ತ್ರಿಗಳ ನೇತೃತ್ವದಲ್ಲಿ ಶ್ರೀ ರಾಮತಾರಕ ಹೋಮ ನಡೆದು ಮಧ್ಯಾಹ್ನ ಪೂರ್ಣಾಹುತಿ ನಂತರ ಪ್ರಸಾದ ವಿತರಣೆ ನಡೆಯಿತು. ಬೆಳಗ್ಗೆಯಿಂದಲೇ ನಂದ ಕಿಶೋರ ಭಜನಾ ಮಂಡಳಿ, ಅನುಶ್ರೀ  ಸಂಗೀತ ವಿದ್ಯಾಲಯ, ಶ್ರೀ ರಾಜರಾಜೇಶ್ವರಿ ಸಂಘ ಹಾಗೂ ಬ್ರಾಹ್ಮಣ ಸಮಾಜ ಮಹಿಳಾ ವಿಭಾಗ ಇವರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.
     ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯ ನೇರ ಪ್ರಸಾರದ ವೀಕ್ಷಣೆಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
     ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ.ಎಂ.ಸಿ. ಶಶಿಕಾಂತ್, ಕಾರ್ಯದರ್ಶಿ ಎಸ್. ಗೋಪಾಲದಾಸ್, ಉಪಾಧ್ಯಕ್ಷರಾದ ಡಾ. ಆನಂದತೀರ್ಥಾಚಾರ್, ಎಸ್.ಪಿ.ಸತ್ಯನಾರಾಯಣರಾವ್, ಉಮೇಶ್ ಕುಲಕರ್ಣಿ, ಡಿ.ಶೇಷಾಚಲ, ಉಮಾಕಾಂತ್ ದೀಕ್ಷಿತ್, ಪಿ.ಜಿ. ನಿರಂಜನ್, ಯು. ಬಾಲಕೃಷ್ಣ ವೈದ್ಯ, ಎನ್.ರಾಮದಾಸ್, ಭಾಸ್ಕರ ಗಜಾನನ ಭಟ್, ಎಲ್ ರಾಮಚಂದ್ರರಾವ್ ಹಾಗೂ ಜಿಲ್ಲಾ ಅಧ್ಯಕ್ಷ ಡಾ. ಬಿ ಟಿ ಅಚ್ಯುತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts